ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ನೋಡುವವರ ಸಂಖ್ಯೆ ಕುಸಿತ ಕಳವಳಕಾರಿಬೆಳವಣಿಗೆ:ರಾಮಲಿಂಗಾರೆಡ್ಡಿ

Last Updated 1 ಸೆಪ್ಟೆಂಬರ್ 2015, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ನಾಟಕ ನೋಡುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ತಿಳಿಸಿದರು. ಮಂಗಳವಾರ ನಗರದಲ್ಲಿ ಆಯೋ ಜಿಸಿದ್ದ ರವೀಂದ್ರ ಮಿತ್ರ ಮಂಡಳಿಯ 31ನೇ ವಾರ್ಷಿಕೋತ್ಸವ, ಪೌರಾಣಿಕ ನಾಟಕ ರಂಗವೈಭವ–2015 ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದರು.

‘ರಂಗಭೂಮಿ ಕಲಾವಿದರಿಗೆ ಪ್ರೇಕ್ಷಕರ ಚಪ್ಪಾಳೆಯೇ ಪ್ರೋತ್ಸಾಹ. ಜನ ರಂಗಭೂಮಿಯ ಪ್ರತಿಯೊಂದು ಚಟು ವಟಿಕೆಯನ್ನು ಬೆಂಬಲಿಸಬೇಕು’ ಎಂದು ಹೇಳಿದರು. ‘ಮಹಾಭಾರತ ನಡೆದು ಸುಮಾರು ಐದು ಸಾವಿರ ವರ್ಷ ಕಳೆದರೂ ಇಂದಿಗೂ ಅದು ಜನಮಾನಸದಲ್ಲಿ ಉಳಿದಿದೆ. ಅದಕ್ಕೆ ಕಾರಣ ರಂಗಭೂಮಿ. ಹೀಗೆ ಸಮಾಜಕ್ಕೆ ರಂಗಭೂಮಿಯ ಕೊಡುಗೆ ಬಹಳ ದೊಡ್ಡದಿದೆ’ ಎಂದರು.

‘ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರಿಂದಾಗಿ ನಾನೂ ಸೇರಿದಂತೆ ಅನೇಕರು ರಾಜ ಕೀಯ ಕ್ಷೇತ್ರಕ್ಕೆ ಬರುವಂತಾಯಿತು’ ಎಂದೂ ಹೇಳಿದರು. ‘ನಾನು ಕಾಲೇಜು ದಿನಗಳಲ್ಲಿ ಓದುತ್ತಿದ್ದಾಗ ಅರಸು ಅವರಿಂದ ಸಾಕಷ್ಟು ಪ್ರಭಾವಿತನಾಗಿದ್ದೆ. ಯುವಕರು ರಾಜಕೀ ಯಕ್ಕೆ ಬರಲು ಅವರು ಹುರಿದುಂಬಿ ಸುತ್ತಿದ್ದರು’ ಎಂದರು.

‘ಅರಸು ಅವರು ಹಿಂದುಳಿದ ವರ್ಗಗಳಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಿಕೊಟ್ಟಿದ್ದರು.  ಅಧಿಕಾರದುದ್ದಕ್ಕೂ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಂಡಿದ್ದರು’ ಎಂದು ಹೇಳಿದರು. ಇದೇ ವೇಳೆ ಪೌರಾಣಿಕ ನಾಟಕ ಪ್ರದರ್ಶನ ಹಾಗೂ ರಂಗಭೂ ಮಿಗೆ ಸೇವೆ ಸಲ್ಲಿಸಿದವರನ್ನು ಸನ್ಮಾನಿ ಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT