ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ವಿವಾಹಿತ: ಮೋದಿ ಪ್ರಮಾಣ

Last Updated 9 ಏಪ್ರಿಲ್ 2014, 20:18 IST
ಅಕ್ಷರ ಗಾತ್ರ

ಅಹಮದಾಬಾದ್: ತಾವು ವಿವಾಹಿತ ಎನ್ನುವುದನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೊನೆಗೂ ಒಪ್ಪಿಕೊಂಡಿದ್ದಾರೆ. ಜಶೋದಾಬೆನ್‌್ ತಮ್ಮ ಪತ್ನಿ ಎನ್ನು­ವುದನ್ನು  ಬುಧವಾರ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಉಲ್ಲೇಖಿ­ಸಿದ್ದಾರೆ. ಆದರೆ ಪತ್ನಿಯ ಪ್ಯಾನ್‌್ ಸಂಖ್ಯೆ, ಆದಾಯ ಇತ್ಯಾದಿ ವಿವರಗಳು ತಮಗೆ ಗೊತ್ತಿಲ್ಲ ಎಂದು ಹೇಳಿ­ದ್ದಾರೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಜಶೋದಾಬೆನ್‌, ಇತ್ತೀಚೆಗಷ್ಟೇ ನಿವೃತ್ತ­ರಾಗಿದ್ದಾರೆ.  ತಾವು ಮೋದಿ ಅವರ ಪತ್ನಿ ಎಂದು ಅವರು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ.

೨೦೧೨ರ ವಿಧಾನಸಭೆ ಚುನಾವಣೆ­ಯಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಮೋದಿ, ತಮ್ಮ ವಿವಾಹದ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT