ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸಲಿಂಗಕಾಮಿ ಟಿಮ್‌ ಕುಕ್‌

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ‘ನಾನು ಸಲಿಂಗಕಾಮಿ ಎಂದು ಹೇಳಿ­ಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ . ದೇವರು ನನಗೆ ನೀಡಿರುವ ವರ ಎಂದು ಭಾವಿಸುತ್ತೇನೆ’ ಎಂದು ಆ್ಯಪಲ್‌ ಮುಖ್ಯ­ಕಾರ್ಯನಿರ್ವಹಣಾಧಿಕಾರಿ ಟಿಮ್‌ ಕುಕ್‌ ಗುರುವಾರ ಬಹಿರಂಗ ಹೇಳಿಕೆ ನೀಡಿದರು.
ಬ್ಲೂಮ್‌ಬರ್ಗ್‌ ಪತ್ರಿಕೆಗೆ ಬರೆದ ಲೇಖನದಲ್ಲಿ ಕುಕ್‌ ಈ ರೀತಿ ಹೇಳಿ­ಕೊಂಡಿದ್ದಾರೆ.

‘ನಾನು ಸಲಿಂಗಕಾಮಿ ಎನ್ನುವ ಸತ್ಯವನ್ನು ಬಹಿರಂಗಪಡಿಸುವುದು ಅಷ್ಟು ಸುಲಭವಲ್ಲ. ಆದರೆ ಆ್ಯಪಲ್‌ನಂತಹ ಪ್ರತಿಷ್ಠಿತ ಕಂಪೆನಿಯ ಸಿಇಒ ಒಬ್ಬ ಸಲಿಂಗಕಾಮಿ ಎನ್ನುವುದು ಬಹಿರಂಗ­ವಾದರೆ, ಸಲಿಂಗಕಾಮಿ­ಯಾ­ಗಿದ್ದೂ ಬೇರೆ­ಯವರೊಂದಿಗೆ ಹೇಳಿಕೊಳ್ಳಲಾಗದೆ ಒಂಟಿತನ ಅನುಭವಿಸುತ್ತಿರುವವರಿಗೆ ತುಸು ಧೈರ್ಯ ಬರುತ್ತದೆ ಎನ್ನುವುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT