ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಫಲಕ ತೆಗೆಯಿಸಿ

Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಕೆಂಪೇಗೌಡನಗರ, ಸುಂಕೇನಹಳ್ಳಿ ಮತ್ತು ಹನುಮಂತನಗರ ವಾರ್ಡ್‌ಗಳಿಗೆ ಸೇರಿದಂತೆ ಇರುವ ಸ. ನಂ. 2 ಕೆಂಪಾಂಬುದಿ ಕೆರೆ 47 ಎಕರೆ 7 ಗುಂಟೆ, ಸ.ನಂ. 75 ಗವಿಪುರ 4 ಎಕರೆಯಲ್ಲಿ ಬಂಡೇ ಮಹಾಕಾಳಿ ದೇವಸ್ಥಾನವಿದೆ. ದೇವರ ಹೆಸರಿನಲ್ಲಿ ಟ್ರಸ್‌್ಟ ರಚಿಸಿಕೊಂಡು ಈ ಆಸ್ತಿಯು ನಮಗೆ ಸೇರಬೇಕು ಎಂದು ನಾಮಫಲಕವನ್ನು ಹಾಕಿಕೊಂಡಿರುತ್ತಾರೆ.

 ದಾಖಲೆಯ ಪ್ರಕಾರ ಎಲ್ಲಾ ಆಸ್ತಿಯು ಸರ್ಕಾರದ್ದಾಗಿರುತ್ತದೆ. ಸ.ನಂ. 75ರಲ್ಲಿ ಕೆಂಪೇಗೌಡರ ಕಾಲದ ನಾಲ್ಕು ಗೋಪುರಗಳ ಪೈಕಿ ಒಂದು ಗೋಪುರವಿದೆ. ಈ ಗೋಪುರವು ಪ್ರಾಚ್ಯವಸ್ತು ಇಲಾಖೆಗೆ ಸೇರಿರುತ್ತದೆ, ಕಾಯಿದೆ ಪ್ರಕಾರ 100 ಮೀಟರ್‌ ಮತ್ತು 200 ಮೀಟರ್‌ ಸುತ್ತಳತೆಯಲ್ಲಿ ಯಾವುದೇ ಕಟ್ಟಡ ಕಟ್ಟುವುದಾಗಲಿ ಕಾನೂನು ಬಾಹಿರ.

ಈ ವಿಷಯವನ್ನು ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ, ಪದೇಪದೇ ನಾಮಫಲಕ ಹಾಕುವ ಕೆಲಸ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಿ ಹಾಕಿರುವ ನಾಮಫಲಕವನ್ನು ತೆಗೆದುಹಾಕಬೇಕೆಂದು ಸಾರ್ವಜನಿಕವಾಗಿ ಮನವಿ ಮಾಡಿಕೊಳ್ಳುತ್ತೇನೆ.
– ಸಿ. ಕಾಳಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT