ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಾಗಿ ‘ಶತಕ’ ಬಾರಿಸಿದ ಗೌತಮ್‌ ಗಂಭೀರ್

Last Updated 2 ಮೇ 2016, 19:34 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಯೊಬ್ಬ ಕ್ರಿಕೆಟಿಗನಿಗೂ ಶತಕ ಎಂಬುದು ಮಹತ್ವದ ಮೈಲುಗಲ್ಲು. ಈ ಮೂರಂಕಿಯನ್ನು ಮುಟ್ಟಲು ಏನೆಲ್ಲಾ ಕಷ್ಟಪಡಬೇಕಾಗುತ್ತದೆ. ಮಂಗಳವಾರ ಇಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ವಿಶೇಷ ‘ಶತಕ’ ದಾಖಲಾಯಿತು. ಅದು ಬ್ಯಾಟ್‌ನಿಂದ ಸಿಡಿದ ರನ್‌ಗಳಿಂದ ಅಲ್ಲ, ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರಿಂದ.

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಈ ಕೀರ್ತಿಗೆ ಪಾತ್ರರಾದರು.

ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಮೂಲಕ ಐಪಿಎಲ್‌ ಪಯಣ ಆರಂಭಿಸಿದ ಗಂಭೀರ್‌ ತಮ್ಮ ತವರಿನ ತಂಡಕ್ಕೆ 15 ಪಂದ್ಯಗಳಿಗೆ ನಾಯಕರಾಗಿ ದ್ದರು. ಇದರಲ್ಲಿ ಒಂಬತ್ತು ಪಂದ್ಯಗಳಲ್ಲಿ ಡೆಲ್ಲಿ ತಂಡ ಜಯ ಸಾಧಿಸಿತ್ತು. ಆರು ಪಂದ್ಯಗಳಲ್ಲಿ ನಿರಾಸೆ ಕಾಡಿತ್ತು.

ಇನ್ನುಳಿದ 85 ಪಂದ್ಯಗಳಿಗೆ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವನ್ನು ಗಂಭೀರ್‌ ಮುನ್ನಡೆಸಿದ್ದಾರೆ. ಈ ಮೂಲಕ ಅವರು ಐಪಿಎಲ್‌ನಲ್ಲಿ ನಾಯಕರಾಗಿ ‘ಶತಕ’ ಬಾರಿಸಿದ ಎರಡನೇ ಆಟಗಾರ ಎನಿಸಿದರು. ಮೊದಲು ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ಈಗ ಪುಣೆ ರೈಸಿಂಗ್‌ ಸೂಪರ್‌ಜೈಂಟ್ಸ್ ತಂಡಕ್ಕೆ ನಾಯಕರಾಗಿರುವ ಮಹೇಂದ್ರ ಸಿಂಗ್‌ ದೋನಿ ಒಟ್ಟು 137 ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ. 74 ಪಂದ್ಯಗಳಿಗೆ ಆ್ಯಡಮ್‌ ಗಿಲ್‌ಕ್ರಿಸ್ಟ್‌ ನಾಯಕರಾಗಿದ್ದರು.

ಗಂಭೀರ್ ನಾಯಕತ್ವದಲ್ಲಿ ರೈಡರ್ಸ್ ತಂಡ ಗೆಲುವಿನ ಸಿಹಿ ಕಂಡಿದ್ದೇ ಹೆಚ್ಚು. ಉತ್ತಮ ಆಟಗಾರರನ್ನು ಹೊಂದಿದ್ದರೂ ರೈಡರ್ಸ್‌ ತಂಡಕ್ಕೆ 2011ರ ಆವೃತ್ತಿಯವರೆಗೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 2012ರಲ್ಲಿ ರೈಡರ್ಸ್ ಚಾಂಪಿಯನ್‌ ಆಯಿತು. 2014ರಲ್ಲಿ ಎರಡನೇ ಟ್ರೋಫಿ ಎತ್ತಿ ಹಿಡಿಯಿತು.

ಗೌತಮ್ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮೊದಲು 99 ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದರು. ಅದರಲ್ಲಿ 57 ಪಂದ್ಯಗಳಲ್ಲಿ ತಂಡಕ್ಕೆ ಜಯ ಲಭಿಸಿದೆ. 41ರಲ್ಲಿ ಸೋಲು ಎದುರಾಗಿದೆ. ಒಂದು ಪಂದ್ಯ ರೋಚಕ ಟೈ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT