ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಹಂತದಲ್ಲಿ ಶೇ 75 ಮತದಾನ

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಲ್ಕು ರಾಜ್ಯದ ಏಳು ಕ್ಷೇತ್ರ­ಗಳಲ್ಲಿ ಶನಿವಾರ ನಡೆದ ಲೋಕ­ಸಭಾ ಚುನಾ­ವಣೆ­ಯಲ್ಲಿ ಶೇ 75ಕ್ಕೂ ಹೆಚ್ಚಿನ ಪ್ರಮಾ­ಣದ ಮತದಾನ­ವಾಗಿದೆ.

ಗೋವಾದ ಎರಡು ಕ್ಷೇತ್ರಗಳು, ಅಸ್ಸಾಂನ ಮೂರು, ತ್ರಿಪುರಾ ಮತ್ತು ಸಿಕ್ಕಿಂನ ತಲಾ ಒಂದು ಕ್ಷೇತ್ರಗಳಲ್ಲಿ ಒಟ್ಟು 74 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ­ಯಲ್ಲಿ ದಾಖಲಾಗಿದೆ.

‘ಎಲ್ಲೆಡೆ ಶಾಂತಿಯುತ ಮತ­ದಾನ ನಡೆ­ದಿದೆ. ಮತದಾನದ ವಿವರಗಳೂ ಇನ್ನೂ ಖಚಿತವಾಗಿ ತಿಳಿದಿಲ್ಲ. ಅಂತಿಮ ಚಿತ್ರಣ ದೊರಕಿದಾಗ ಮತ ಚಲಾವ­ಣೆಯ ಪ್ರಮಾಣ ಇನ್ನೂ ಹೆಚ್ಚುವ ಸಂಭವವಿದೆ’ ಎಂದು ಉಪ ಚುನಾವಣಾ ಆಯುಕ್ತ ಅಲೋಕ್‌ ಶುಕ್ಲಾ ಹೇಳಿದ್ದಾರೆ.

ಗೋವಾದ ಎರಡು ಕ್ಷೇತ್ರ– ಶೇ 75, ಅಸ್ಸಾಂನ ಮೂರು ಕ್ಷೇತ್ರ–ಶೇ 75, ತ್ರಿಪುರಾದ ಒಂದು ಕ್ಷೇತ್–ಶೇ 81.8,ಸಿಕ್ಕಿಂನ ಒಂದು ಕ್ಷೇತ್ರ– ಶೇ 76 ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT