ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಾಸು ಹೆಚ್ಚುವರಿ ಸದನ ಕಲಾಪ

Last Updated 27 ಮಾರ್ಚ್ 2015, 7:18 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲದ ಕಲಾಪವನ್ನು ಇಂದು(ಶುಕ್ರವಾರ) ಸಂಜೆ ನಾಲ್ಕು ತಾಸು ಹೆಚ್ಚುವರಿಯಾಗಿ ನಡೆಸಲಾಗುವುದು ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.

ಕಲಾಪವನ್ನು ಸಂಜೆಯೂ ಮುಂದುವರಿಸಬೇಕು ಎಂದು ಶಾಸಕರು ಮಾಡಿದ ಮನವಿ ಮೇರೆಗೆ ಸಭಾಧ್ಯಕ್ಷರು ಈ ನಿರ್ಧಾರ ಕೈಗೊಂಡಿದ್ದಾರೆ.

ಶಾಸಕ ಅಶೋಕ್ ಪಟ್ಟಣ ಮಾತನಾಡಿ, ಸದನಕ್ಕೆ ನಾವು ದೂರದ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸಿರುತ್ತೇವೆ. ಬರಿ ಬರುವುದು, ಹೋಗುವುದು ಇದರಲ್ಲೇ ಕಾಲ ವ್ಯಯವಾಗುತ್ತದೆ. ಹೀಗಾಗಿ, ಸಂಜೆಯೂ ಸದನವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು. ಮನವಿಯನ್ನು ಪರಿಗಣಿಸಿ ಸಭಾಧ್ಯಕ್ಷರು ಸದನವನ್ನು ನಾಲ್ಕು ತಾಸು ಮುಂದುವರಿಸುವುದಾಗಿ ಪ್ರಕಟಿಸಿದರು.

ನಿನ್ನೆಯಷ್ಟೇ ಕ್ರಿಕೆಟ್ ಪ್ರಿಯ ಶಾಸಕರು ಸದನದ ಹೊರಗೆ ಮೊಗಸಾಲೆಯಲ್ಲಿ ಆಸ್ಟ್ರೇಲಿಯ- ಭಾರತ ತಂಡಗಳ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯ ವೀಕ್ಷಿಸಿದರು. ಸದನಕ್ಕೆ ಆಗಮಿಸಿದ್ದು ಕೇವಲ 50 ಮಂದಿ ಶಾಸಕರಷ್ಟೇ. ಇನ್ನು 140ಕ್ಕೂ ಅಧಿಕ ಶಾಸಕರು ವಿಧಾನಸೌಧದತ್ತ ತಲೆಯನ್ನೂ ಹಾಕಿರಲಿಲ್ಲ. ಸದನ ಖಾಲಿ ಖಾಲಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT