ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಸಾವಿರಕ್ಕೂ ಅಧಿಕ ನ್ಯಾಯಾಧೀಶರ ಹುದ್ದೆ ಖಾಲಿ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿನ ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 4,432 ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರವು ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.

2015ರ ಡಿಸೆಂಬರ್‌ 31ರ ವೇಳೆಗೆ ಹೈಕೋರ್ಟ್‌ಗಳು ನೀಡಿರುವ ಮಾಹಿತಿ ಅನ್ವಯ ಅಧೀನ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳ 20,502  ಹುದ್ದೆಗಳ ಪೈಕಿ 4,432 ಖಾಲಿ ಇವೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಅವರು ತಿಳಿಸಿದರು.

ದೇಶದಾದ್ಯಂತ ಅಧೀನ ನ್ಯಾಯಾಲಯಗಳಿಗೆ 16,513 ಕೋರ್ಟ್‌ ಹಾಲ್‌ಗಳು ಲಭ್ಯವಿದ್ದು, ಇನ್ನೂ 2,447 ಕೋರ್ಟ್‌ ಹಾಲ್‌ಗಳನ್ನು ನಿರ್ಮಿಸ
ಲಾಗುತ್ತಿದೆ ಎಂದು ಅವರು ವಿವರಿಸಿದರು.

ದೇಶದಲ್ಲಿನ ಅಧೀನ ನ್ಯಾಯಾಲಯಗಳ ಸುಧಾರಣೆ ಬಗ್ಗೆ ಸರ್ಕಾರ ಕಾಳಜಿ ಹೊಂದಿರುವುದಾಗಿ ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT