ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಶಾಸಕರ ಸದಸ್ಯತ್ವ ರದ್ದತಿಗೆ ಜೆಡಿಯು ಶಿಫಾರಸು

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ
Last Updated 22 ಜೂನ್ 2014, 19:30 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಇತ್ತೀಚೆಗೆ ಬಿಹಾರ­ದಲ್ಲಿ ನಡೆದ ರಾಜ್ಯಸಭೆ ಉಪ­ಚುನಾ­ವಣೆ­ಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಾಲ್ವರು ಶಾಸಕರ ಸದಸ್ಯತ್ವ ರದ್ದತಿಗೆ ಆಡಳಿತಾರೂಢ ಜೆಡಿಯು ಮುಂದಾಗಿದೆ.

ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶಾಸಕರ ಶಾಸಕತ್ವ ರದ್ದು ಮಾಡಬೇಕು ಎಂದು ಸಭಾಧ್ಯಕ್ಷ­ರಿಗೆ ಶಿಫಾರಸು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡ­ಗಿರುವ ಶಾಸಕ­ರಾದ ಜ್ಞಾನೇಂದ್ರ ಸಿಂಗ್‌ ಗ್ಯಾನು, ರಾಹುಲ್‌ ಕುಮಾರ್‌, ನೀರಜ್‌ ಸಿಂಗ್‌ ಬಬ್ಲೂ ಮತ್ತು ರವೀಂದ್ರ ರಾಯ್‌ ಅವರ ಶಾಸಕತ್ವವನ್ನು ರದ್ದು ಮಾಡು­ವಂತೆ ಜೆಡಿಯು ಮುಖ್ಯ ಸಚೇ­ತಕ ಶ್ರವಣ್‌ ಕುಮಾರ್‌ ಅವರು ಸಭಾಧ್ಯಕ್ಷ ಉದಯ್‌ ನಾರಾಯಣ್‌ ಚೌಧರಿ ಅವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ವಿಧಾನಸಭೆಯಿಂದ ರಾಜ್ಯ­ಸಭೆಗೆ ನಡೆದ ಉಪ ಚುನಾವಣೆ­ಯಲ್ಲಿ ಈ ನಾಲ್ವರು ನಡೆದು­ಕೊಂಡ ರೀತಿ ಅವ­ರಿಗೆ ಪಕ್ಷದಲ್ಲಿ ಮುಂದು­ವರಿ­ಯುವು­ದಕ್ಕೆ ಮನಸ್ಸಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಶ್ರವಣ್‌ ಕುಮಾರ್‌ ಹೇಳಿದ್ದಾರೆ.

ಈ ನಾಲ್ವರು ಶಾಸಕರು ಜೆಡಿಯು ಭಿನ್ನಮತೀಯ ಚಟುವಟಿಕೆಗಳ ಮುಂಚೂ­ಣಿ­­ಯಲ್ಲಿದ್ದರು. ರಾಜ್ಯಸಭೆ ಚುನಾ­ವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯ­ರ್ಥಿಯ ವಿರುದ್ಧ ಕೆಲಸ ಮಾಡಿದ್ದ ಇವರು ಇಬ್ಬರು ಪಕ್ಷೇತರ ಅಭ್ಯರ್ಥಿ­ಗಳಿಗೆ ಸೂಚಕ­ರಾಗಿ­ದ್ದರು. ಅವರ ಚುನಾ­ವಣಾ ಏಜೆಂಟ್‌­ಗಳಾಗಿಯೂ ಕೆಲಸ ಮಾಡಿ­­ದ್ದರು.

ಪಕ್ಷದ ವಿರುದ್ಧ ಬಂಡಾಯ ಸಾರಿರುವ 18 ಶಾಸ­ಕರ ಹೆಸರನ್ನೂ ಶ್ರವಣ್‌ ಕುಮಾರ್‌ ಬಹಿರಂಗ­ಪಡಿಸಿ­ದ್ದಾರೆ. ಈ ಬಗ್ಗೆ ಅಧ್ಯಕ್ಷ ಶರದ್‌ ಯಾದವ್‌ ಮತ್ತು ಮುಖಂಡ ನಿತೀಶ್‌ ಕುಮಾರ್‌ ಅವರಿಗೆ ವರದಿ ಸಲ್ಲಿಸಿರು­ವುದಾಗಿಯೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT