ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ವೈನ್ ಉತ್ಸವ

Last Updated 23 ಜುಲೈ 2014, 19:34 IST
ಅಕ್ಷರ ಗಾತ್ರ

ಬೆಂಗಳೂರು: ದ್ರಾಕ್ಷಿ ಮತ್ತು ವೈನ್ ಉದ್ಯಮದಲ್ಲಿ ಕರ್ನಾಟಕದ ಸಾಮರ್ಥ್ಯ­ವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿ­ಸಲು ಕರ್ನಾಟಕ ವೈನ್‌ ಮಂಡಳಿಯು  ಜುಲೈ 25ರಿಂದ 27ರವರೆಗೆ ನಗರದ ಅರಮನೆ ಮೈದಾನದ ಆವರಣದಲ್ಲಿ ‘ಅಂತರರಾಷ್ಟ್ರೀಯ ವೈನ್ ಉತ್ಸವ-– 2014’  ಏರ್ಪಡಿಸಿದೆ.

ದ್ರಾಕ್ಷಿ ಬೆಳೆಗಾರರು, ವೈನ್ ತಯಾರಿ­ಸುವ (ವೈನರಿ) ಉದ್ದಿಮೆದಾರರು ಮತ್ತು ಗ್ರಾಹಕರಿಗೆ ಸಂಪರ್ಕ ವೇದಿಕೆ­ಯಾಗಲಿರುವ ಈ ಉತ್ಸವದಲ್ಲಿ 7 ಜಾಗತಿಕ ವೈನ್ ಕಂಪೆನಿಗಳು ಸೇರಿದಂತೆ 35 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿ­ಸಲಿವೆ. ವೈನ್‌ ಟೇಸ್ಟಿಂಗ್‌, ಮಾರಾಟ, ವೈನ್‌ ಮತ್ತು ಆಹಾರ ಹೊಂದಾಣಿಕೆ, ವೈನ್‌ ತಯಾರಿಕೆ, ಕರಕುಶಲ ವಸ್ತುಗಳ ಪ್ರದರ್ಶನವಿರಲಿದೆ’ ಎಂದು  ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಜಿ.ವಿ.ಕೃಷ್ಣ­ರಾವ್‌  ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ 19,700 ಹೆಕ್ಟೇರ್‌ ಪ್ರದೇಶ­ದಲ್ಲಿ ದ್ರಾಕ್ಷಿ ಬೇಸಾಯ ಮಾಡಲಾಗುತ್ತಿದೆ. ಪ್ರತಿ ವರ್ಷ 3.21 ಲಕ್ಷ ಟನ್‌ ದ್ರಾಕ್ಷಿ ಉತ್ಪಾದನೆಯಾಗು­ತ್ತಿದೆ. ರಾಜ್ಯದ ಒಟ್ಟು ವೈನ್ ವಹಿವಾಟು ₨ 150 ಕೋಟಿ ಗಳಷ್ಟಿದೆ’ ಎಂದರು.

‘ದ್ರಾಕ್ಷಿ ಬೆಳೆ ವಿಸ್ತೀರ್ಣ  ಮತ್ತು ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹೀಗಾಗಿ, ದ್ರಾಕ್ಷಿ ಸಂಸ್ಕರಣೆ ಕೇಂದ್ರಗಳಾದ ವೈನ್ ಉದ್ಯಮ­ವನ್ನು ಅಭಿವೃದ್ಧಿಪಡಿಸಲು ಆದ್ಯತೆ­ಯನ್ನು ನೀಡಬೇಕಿದೆ’ ಎಂದರು.
‘ಪ್ರತಿ ವರ್ಷ ರಾಜ್ಯದಲ್ಲಿ 51 ಲಕ್ಷ ಲೀ. ವೈನ್‌ ಮಾರಾಟವಾಗುತ್ತಿದೆ. ಬೇರೆ ದೇಶಗಳಾದ ಫ್ರಾನ್ಸ್‌, ಇಟಲಿ, ನ್ಯೂಜಿಲೆಂಡ್‌ ದೇಶಗಳಿಗೆ ರಫ್ತಾಗುತ್ತಿದೆ’ ಎಂದು ವಿವರಿಸಿದರು.

‘ವೈನ್‌ಗಾಗಿ ಬೆಳೆಯುವ ದ್ರಾಕ್ಷಿ­ಯನ್ನು ಬೇರೆ ಯಾವುದಕ್ಕೂ ಬಳಸಲು ಬರುವುದಿಲ್ಲ. ಹೀಗಾಗಿ ರೈತರಿಗೆ ನಷ್ಟವಾ­ಗದಂತೆ ರಾಜ್ಯದಲ್ಲಿ­ರುವ 17 ವೈನರಿ­ಗಳು ರೈತರೊಂದಿಗೆ ಒಪ್ಪಂದ ಕೃಷಿ ಮಾಡುವಂತೆ ಸಲಹೆಯನ್ನು ನೀಡ­ಲಾಗಿದೆ’ ಎಂದರು.

‘ಕಾರ್ಯಕ್ರಮವನ್ನು ಜುಲೈ 25 ರಂದು ಸಂಜೆ 4.30ಕ್ಕೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ಉದ್ಘಾಟಿಸ­ಲಿದ್ದಾರೆ. ‘26 ಮತ್ತು 27 ರಂದು ಮನೋರಂಜನಾ ಕಾರ್ಯಕ್ರಮಗಳಿದ್ದು, ದ್ರಾಕ್ಷಿ ತುಳಿದು ವೈನ್‌ ತಯಾರಿಸುವ ಪದ್ಧತಿಯ ಕುರಿತು ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.

ಪ್ರವೇಶ ದರ
ಪ್ರತಿಯೊಬ್ಬರಿಗೂ ಪ್ರವೇಶ ದರವು ₨ 49 ಇದೆ. ಟಿಕೆಟ್‌ಗಳು ಎಲ್ಲಾ ಹಾಪ್‌­ಕಾಮ್ಸ್‌ ಮತ್ತು ಮಧು­ಲೋಕ ಮಳಿಗೆಗಳಲ್ಲಿ ಹಾಗೂ ಆನ್‌ಲೈನ್‌ bookmyshow.com ನಲ್ಲಿ ದೊರೆಯುತ್ತವೆ.

ಹಾಪ್‌ಕಾಮ್ಸ್‌ ನಿರಾಸಕ್ತಿ
ಹಾಪ್‌ಕಾಮ್ಸ್‌ನಲ್ಲಿ ವೈನ್‌ ಮಾರಾಟಕ್ಕೆ ಕಾನೂನು ತಿದ್ದುಪಡಿ ಮಾಡ­ಲಾಗಿದೆ. ಆದರೆ, ಹಾಪ್‌­ಕಾಮ್ಸ್‌ ಮಳಿಗೆಗಳು ವೈನ್‌ ಮಾರಾಟಕ್ಕೆ ಆಸಕ್ತಿ ತೋರಿ­ಸು­ತ್ತಿಲ್ಲ. ಅದಕ್ಕೆ ಅವರದ್ದೇ ಕಾರಣಗ­ಳಿರ­ಬಹುದು.
– ಜಿ.ವಿ.ಕೃಷ್ಣರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT