ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ಡಿವೈಡೆಡ್’ ಶುರು

Last Updated 1 ಜನವರಿ 2015, 19:30 IST
ಅಕ್ಷರ ಗಾತ್ರ

ಕನ್ನಡದಲ್ಲಿ ರಿಯಾಲಿಟಿ ಶೋಗಳ ಪರ್ವಕ್ಕೆ ಮತ್ತೊಂದು ಹೊಸ ಸೇರ್ಪಡೆ ‘ಡಿವೈಡೆಡ್’. ಜನವರಿ 3 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ರಿಂದ 9ವರೆಗೆ ಈ ಶೋ ಪ್ರಸಾರವಾಗಲಿದೆ. ಆರ್.ಜೆ. ರೋಹಿತ್ ನಿರೂಪಕರಾಗಿದ್ದು 10 ಲಕ್ಷ ರೂಪಾಯಿ ಬಹುಮಾನ ಒಳಗೊಂಡಿದೆ.

ಪ್ರತಿ ಸಂಚಿಕೆಯಲ್ಲಿ 3 ಸ್ಪರ್ಧಿಗಳು ಭಾಗವಹಿಸುವರು. ಒಟ್ಟು ನಾಲ್ಕು ಸುತ್ತುಗಳಲ್ಲಿ ಹತ್ತು ಪ್ರಶ್ನೆಗಳನ್ನು ಇಲ್ಲಿ ಸ್ಪರ್ಧಿಗಳು ಎದುರಿಸಬೇಕಾಗಿರುತ್ತೆ. ಮೊದಲ ಸುತ್ತಿನಲ್ಲಿ ರೂ 25 ಸಾವಿರ ಬಹುಮಾನದ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತೆ. ಎರಡನೇ ಸುತ್ತಿನಲ್ಲಿ ರೂ 50 ಸಾವಿರಕ್ಕೆ ಮೂರು ಪ್ರಶ್ನೆಗಳಿಗೆ ಉತ್ತರಿಸಬೇಕು. ಮೂರನೇ ಸುತ್ತಿನಲ್ಲಿ ಒಂದು ಲಕ್ಷ ಇಪ್ಪತ್ತೈದು ಸಾವಿರ ರೂಪಾಯಿ ಬಹುಮಾನವಿದ್ದು ಎರಡು ಪ್ರಶ್ನೆಗಳನ್ನು ಕೇಳಲಾಗುತ್ತೆ. ಕೊನೆಯ ಹಾಗೂ ನಾಲ್ಕನೆಯ ಸುತ್ತಿನಲ್ಲಿ ಐದು ಲಕ್ಷ ಮೊತ್ತದ ಒಂದು ಪ್ರಶ್ನೆಯನ್ನು ಎದುರಿಸಬೇಕಾಗುತ್ತದೆ.

ಇಲ್ಲಿ ಒಂದು ಪ್ರಶ್ನೆಗೆ ಮೂವರು ಸ್ಪರ್ಧಿಗಳು ಒಟ್ಟಾಗಿ ಚರ್ಚಿಸಿ ಒಮ್ಮತಕ್ಕೆ ಬಂದು ಉತ್ತರಿಸಬೇಕು. ಇದಕ್ಕೆ 100 ಸೆಕೆಂಡುಗಳ ಕಾಲಾವಕಾಶವಿರುತ್ತದೆ. ಸೆಕೆಂಡುಗಳು ಕಡಿಮೆಯಾದಷ್ಟು ಹಣ ಕೂಡಾ ಕಡಿತವಾಗುತ್ತದೆ. ಇಡೀ ಸ್ಪರ್ಧೆಯಲ್ಲಿ ಒಟ್ಟು 2 ಲೈಫ್‌ಲೈನ್ ಗಳಿರುತ್ತವೆ.

ಅಂತಿಮವಾಗಿ ಸ್ಪರ್ಧಿಗಳು ಗೆಲ್ಲುವ ಹಣದಲ್ಲಿ ಯಾವ ಸ್ಪರ್ಧಿ ಎಷ್ಟು ಹಣ ಹಂಚಿಕೊಳ್ಳಬೇಕು? ಇದರಲ್ಲಿ ಯಾರ ಪಾಲು ಎಷ್ಟು? ಎಂಬುದನ್ನು ಕೂಡಾ ಸ್ಪರ್ಧಿಗಳೇ ನಿರ್ಧರಿಸಬೇಕು. ಅದಕ್ಕೂ 15 ಸೆಕೆಂಡು ಸಮಯವಿರುತ್ತದೆ. ಈ 15 ಸೆಕೆಂಡುಗಳಲ್ಲಿ ಒಮ್ಮತಕ್ಕೆ ಬರದೇ ಹೋದರೆ ಮತ್ತೆ 100 ಸೆಕೆಂಡುಗಳ ಸಮಯ ನೀಡಿ ಗೆದ್ದಿರುವ ಹಣ ಸೆಕೆಂಡುಗಳ ಲೆಕ್ಕದಲ್ಲಿ ಕಡಿತಗೊಳ್ಳುತ್ತದೆ. ಎಂಡೋಮಾಲ್ ಪ್ರೊಡಕ್ಷನ್ ಸಂಸ್ಥೆ ‘ಡಿವೈಡೆಡ್’ ಕಾರ್ಯಕ್ರಮದ ನಿರ್ಮಾಣ ಮಾಡುತ್ತಿದೆ ಎಂದು ವಾಹಿನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಿಜು ಪ್ರಭಾಕರನ್ ಮತ್ತು ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT