ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಿರುದ್ದೀನ್ ಮುಡಿಗೆ ‘ಜೀವಮಾನ ಶ್ರೇಷ್ಠ ಪ್ರಶಸ್ತಿ’

ಪಂಚರಂಗಿ
Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ದೇಶದ ಪ್ರತಿಭಾನ್ವಿತ ನಟ ನಾಸಿರುದ್ದೀನ್ ಶಾ ತಮ್ಮ ಅಮೋಘ ಅಭಿನಯಕ್ಕಾಗಿ ‘ಜೀವಮಾನ ಶ್ರೇಷ್ಠ ಪ್ರಶಸ್ತಿ ’ ಪಡೆಯಲಿದ್ದಾರೆ. ಈ ಬಾರಿ ನಡೆಯುವ 12ನೇ ಆವೃತ್ತಿಯ ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾಸಿರುದ್ದೀನ್‌  ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ತಮ್ಮ ವೃತ್ತಿಜೀವನದ 40 ವರ್ಷಗಳಲ್ಲಿ ನಾಸಿರುದ್ದೀನ್‌ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ವಿಶಿಷ್ಟ ಅಭಿನಯದ ಮೂಲಕವೇ ಎಲ್ಲಾ ವರ್ಗದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ ನಾಸಿರ್. ಇವರು ಅಭಿನಯಿಸಿದ ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳಲ್ಲಿ ನಟಿಸಿದ ನಾಸಿರುದ್ದಿನ್ ಇಲ್ಲಿಯ ತನಕ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

‘ಮೌಸಂ’, ‘ಜಾನೆ ಭಿ ದೋ ಯಾರೋ’, ‘ಸ್ಪರ್ಶ್‌’, ‘ಸರ್ಫರೋಶ್‌’, ‘ಇಕ್ಬಾಲ್‌’, ‘ಎ ವೆಡ್‌ನೆಸ್‌ಡೇ’, ‘ದಿ ಡರ್ಟಿ ಪಿಕ್ಚರ್‌’ ಹಾಗೂ ‘ಡೇಡ್ ಇಷ್ಕಿಯಾ’ ಚಿತ್ರಗಳಲ್ಲಿ ಭಿನ್ನ ಪಾತ್ರಗಳ ಮೂಲಕ ನಾಸಿರುದ್ದೀನ್ ಗುರುತಾಗಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಿಂದಿ ಚಿತ್ರರಂಗದಲ್ಲಿ ಗೌರವಾನಿತ್ವ ವ್ಯಕ್ತಿ ಎಂದು ಗುರುತಿಸಿಕೊಂಡ 66 ವರ್ಷದ ಈ ನಟ ರತ್ನಾ ಪಾಠಕ್ ಶಾ ಅವರನ್ನು ಮದುವೆಯಾಗಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT