ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನಗತಿಯಲ್ಲಿ ಕಾಮಗಾರಿ: ಆಕ್ಷೇಪ

ನಾರಾಯಣಪುರ ವಲಯದ 750 ಕಿ.ಮೀ. ವಿತರಣಾ ಕಾಲುವೆ ನವೀಕರಣ
Last Updated 19 ಏಪ್ರಿಲ್ 2015, 14:29 IST
ಅಕ್ಷರ ಗಾತ್ರ

ಹುಣಸಗಿ: ಕೇಂದ್ರ ಸರ್ಕಾರದ ತ್ವರಿತ ನೀರಾವರಿ ಯೋಜನೆಯಡಿ ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ವಲ ಯದ 750 ಕಿ.ಮೀ. ವಿತರಣಾ ಕಾಲುವೆ ಗಳ ನವೀಕರಣವನ್ನು ₨ 280 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ್ ತಿಳಿಸಿದರು.

ಪಟ್ಟಣದ ಹೊರವಲಯದಲ್ಲಿ ನಡೆ ಯುತ್ತಿರುವ ವಿತರಣಾ ಕಾಲುವೆ ಕಾಮ ಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  

ಸಿದ್ದಾಪುರ ವಿತರಣಾ ಕಾಲುವೆ 40 ಕಿ.ಮೀ.ಉದ್ದವಿದ್ದು, 330 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯ ಹೊಂದಿದೆ. 44 ಸಾವಿರ ಎಕರೆ ಜಮೀನಿಗೆ ನೀರು ಹರಿ ಸಲಾಗುತ್ತಿದೆ. ಈ ವಿತರಣಾ ಕಾಲುವೆ ಯಲ್ಲಿ 150 ಹೆಚ್ಚು ಲಾಟರಲ್‌ ಕಾಲುವೆ ಗಳು ಬರುತ್ತವೆ ಎಂದು ನಿಮಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಟಾಟಾ ಶಿವಣ್ಣ ಮಾಹಿತಿ ನೀಡಿದರು.

ಈ ಅವಧಿಯಲ್ಲಿ ಆರ್‌ಸಿಸಿ ಲೈನಿಂಗ್ ಕಾಮಗಾರಿ ಆರಂಭವಾಗಬೇಕಿತ್ತು. ತಿಂಗಳ ಸಮಯ ವ್ಯರ್ಥ ಮಾಡಿದ್ದೀರಿ ಎಂದು ಗುತ್ತಿಗೆದಾರರು ಹಾಗೂ ಅಧೀನ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದು ಕೊಂಡ ಕಪಿಲ್‌ ಮೋಹನ್‌ ಇನ್ನು ಪ್ರತಿ ವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡು ವುದಾಗಿ ತಿಳಿಸಿದರು.

ಕಾಮಗಾರಿ ವಿಳಂಬವಾದರೆ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡ ಲಾಗುವುದು. ಲ್ಯಾಟರಲ್ ಕಾಂಗಾರಿ ತಡ ವಾದರೇ ಸಹಿಸಬಹುದು. ಆದರೆ ವಿತ ರಣಾ ಕಾಲುವೆ ವಿಳಂಬವಾದರೆ ಒಳ್ಳೆಯ ದಲ್ಲ. ಈಗಿರುವ ಕಾಮಗಾರಿಯ ವೇಗ ಹೆಚ್ಚಿಸಿಕೊಳ್ಳುವಂತೆ ಸೂಚನೆ ನೀಡಿದರು.

ಕಾಂಕ್ರಿಟ್‌ ಮಿಕ್ಸರ್ ಘಟಕಕ್ಕೆ ಭೇಟಿ ನೀಡಿ, ಗುಣಮಟ್ಟದ ಬಗ್ಗೆ ಎಂಜಿನಿ ಯರ್‌ಗಳಿಗೆ ಸೂಚನೆಗಳನ್ನು ನೀಡಿದರು.  ಗುಣಮಟ್ಟದ ಕಾಮಗಾರಿ ನಿರ್ವಹಿಸಿ. ಹಲವು ದಶಕಗಳ ನಂತರ ಕಾಲುವೆ ನವೀಕರಣಕ್ಕೆ ಸರ್ಕಾರ ಅನುದಾನ ನೀಡಿದೆ. ಪೂರ್ತಿ ಚಾಣಾಕ್ಷತೆಯನ್ನು ಉಪಯೋಗಿಸಿ ಎಂದರು.

ಮುಖ್ಯ ಎಂಜಿನಿಯರ್‌ ಎನ್‌. ಕ್ಷೇತ್ರ ಪಾಲ್, ಅಧೀಕ್ಷಕ ಎಂಜಿನಿಯರ್‌ ಡಿ.ಆರ್. ಕೃಷ್ಣಮೂರ್ತಿ, ಮಹೇಶ, ವಿ.ಕೆ. ಪೋತದಾರ್, ಗುತ್ತಿಗೆದಾರರಾದ ನಾಗಪ್ಪ ವಜ್ಜಲ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಾದ ರೆಹ ಮಾನ್‌ಸಾಬ್, ವಿಶ್ವನಾಥ, ತಂಬಿದೊರೈ, ಸಿಬ್ಬಂದಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT