ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಗಾಳಿಗೆ ತೂರಿದ ಶಾಲೆಗಳು

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿರುವ ಬಹುಪಾಲು  ಪ್ರಮುಖ ಶಾಲೆಗಳು ಮುಂಬರುವ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿ­ಸಿದ್ದು, ಕಾನೂನಿನ ಮಾನದಂಡಗಳು ಎಲ್ಲಿಯೂ ಪಾಲನೆ­ಯಾಗುತ್ತಿಲ್ಲ. ಇದು  ಶೋಚನೀಯ. ಪ್ರವೇಶ ಶುಲ್ಕದ ನಿಗದಿಯು ತಮ್ಮಿಷ್ಟಕ್ಕೆ ತಕ್ಕಂತೆ ಆಗಿದೆ. ಕೆಲವು ಶಾಲೆಗಳಲ್ಲಿ ಪ್ರೀ ನರ್ಸರಿ ಪ್ರವೇಶಕ್ಕೆ, ₨ 1 ಲಕ್ಷದಿಂದ ₨ 2 ಲಕ್ಷದವರೆಗೆ ನಿಗದಿ ಮಾಡಲಾ­ಗಿದೆ.

ಶುಲ್ಕದ ಸ್ವೀಕೃತಿಯೂ ನ್ಯಾಯಯುತ ಮಾರ್ಗ­­ದ­ಲ್ಲಿಲ್ಲ. ಬ್ಯಾಂಕ್‌ ಚೆಕ್‌, ಡಿ.ಡಿ. ರೂಪ­ದಲ್ಲಿ ಸ್ವೀಕ­ರಿಸುವುದಿಲ್ಲ. ಕೇವಲ ನಗದು ರೂಪ­ದಲ್ಲಿ, ರಸೀತಿ­ಯನ್ನೂ ಕೊಡದೆ ಸ್ವೀಕರಿಸಲಾ­ಗು­ವು­ದೆಂದು ಯಾವುದೇ ಮುಜುಗರವಿಲ್ಲದೇ, ನಿರ್ಭೀತಿ­ಯಿಂದ ಶಾಲಾ ಆಡಳಿತ ಮಂಡಳಿ­ಯವರು ತಿಳಿಸುತ್ತಿದ್ದಾರೆ.

ನ್ಯಾಯಯುತ ಮಾರ್ಗ ಅನುಸರಿಸುವಂತೆ ಪೋಷಕರು ಕೇಳಿದರೆ, ಅವರ ಮಕ್ಕಳಿಗೆ ಪ್ರವೇಶದ ಅರ್ಹತೆ, ಸೌಲಭ್ಯವೇ ಇಲ್ಲದಂತಾಗು­ವುದು. ಈ ಎಲ್ಲಾ ವಿಷಯಗಳೂ ಶಿಕ್ಷಣ ಇಲಾ­ಖೆಯ ಸಂಬಂಧಪಟ್ಟ ಅಧಿಕಾರಿಗಳಿಗೂ ಗೊತ್ತಿವೆ. ಆದರೂ ಮೌನ ವಹಿಸಿದ್ದಾರೆ. ದುಬಾರಿ ಶುಲ್ಕದ ಹಣದಲ್ಲಿ ಇಲಾಖೆಯ ಅಧಿಕಾರಿಗಳಿಗೂ ಒಂದು ಭಾಗ ಸಲ್ಲಿಕೆ­ಯಾಗುತ್ತಿದೆಯೇ?

ಹೀಗಿದ್ದರೆ, ಆರ್.ಟಿ.ಇ. ನಂಥ ಕಾನೂನುಗಳೇಕೆ? ನಮ್ಮಂತಹ  ಪೋಷಕರು, ತಮ್ಮ ಮಕ್ಕಳನ್ನು ಶಾಲೆಗೆ ಸೇರಿ­ಸಲು, ಇಂತಹ ನ್ಯಾಯಯುತವಲ್ಲದ ವ್ಯವಸ್ಥೆ­ಯಲ್ಲಿ ಪಾಲ್ಗೊಳ್ಳದೇ ಇರಲು ಸಾಧ್ಯವೇ ಇಲ್ಲವೇ? ಸಂಬಂಧಪಟ್ಟವರು ಈ ವಿಷಯದಲ್ಲಿ ಕಾಳಜಿ ವಹಿಸಲಿ ಎಂಬುದೇ ನಮ್ಮ ಕಳಕಳಿ.
–ಡಾ.ಟಿ.ಎಂ. ಲಕ್ಷ್ಮೀಕಾಂತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT