ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗಿಗಳಾಗಲಿ

Last Updated 26 ಮೇ 2016, 19:41 IST
ಅಕ್ಷರ ಗಾತ್ರ

ಪರೀಕ್ಷಾ ಅಕ್ರಮ ತಡೆಗೆ ಮೆರಿಟ್‌ ಟ್ರ್ಯಾಕ್‌ ಎಂಬ ಸಂಸ್ಥೆ ಹೈಟೆಕ್ ಪರಿಹಾರವೊಂದನ್ನು ರೂಪಿಸಿದೆ (ಪ್ರ.ವಾ., ಮೇ 26). ಪ್ರಶ್ನೆಪತ್ರಿಕೆ ಸೋರುವಿಕೆ, ವ್ಯಾಪಕ ನಕಲು ಮಾಡುವ ದಂಧೆಯಲ್ಲಿ ನೂರಾರು ಕೋಟಿ ಹಣವಿದೆ. ಇಲ್ಲದಿದ್ದರೆ ಈ ವ್ಯವಹಾರ ನಡೆಯುತ್ತಿರಲಿಲ್ಲ.

ಇಂತಹ ಪಿಡುಗನ್ನು ನೂರಕ್ಕೆ ನೂರರಷ್ಟು ಅಳಿಸಿಹಾಕಿದ ಕೀರ್ತಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಲ್ಲಬೇಕು. 2006ರಿಂದಲೇ ಅಲ್ಲಿ ಪ್ರಶ್ನೆಪತ್ರಿಕೆಗಳನ್ನು ವೆಬ್ ಟ್ರಾನ್ಸ್‌ಮಿಷನ್‌ ಮಾಡುತ್ತಿದ್ದಾರೆ. ಇದರಿಂದ ದಂಧೆವಾಲಗಳು ನಿರುದ್ಯೋಗಿಗಳಾಗಿದ್ದಾರೆ.  ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಹಾಕುವುದು ಸಹ ಅಷ್ಟೇ ಜನಪ್ರಿಯವಾಗಿದೆ.

2015ರಿಂದ ಉತ್ತರ ಪತ್ರಿಕೆಗಳನ್ನು ಆನ್‌ಲೈನ್ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದರಿಂದ ಅನೇಕರಿಗೆ (ವಿದ್ಯಾರ್ಥಿ, ಪೋಷಕರು ಮತ್ತು ಕಾಲೇಜುಗಳ ಒಡೆಯರು) ಇರಿಸುಮುರಿಸಾಗಿರುವುದೂ ನಿಜ. ಇನ್ನೂ ಅನೇಕ ಸುಧಾರಣೆಗಳನ್ನು ವಿಶ್ವವಿದ್ಯಾಲಯ ಹಮ್ಮಿಕೊಂಡಿದೆ. ಇಂತಹುದೇ ಕ್ರಮಗಳನ್ನು ಎಸ್‌ಎಸ್‌ಎಲ್‌ಸಿ, ಪಿಯುಸಿ, ಕೆಪಿಎಸ್‌ಸಿಗಳಲ್ಲಿ ಏಕೆ ಅಳವಡಿಸಿಕೊಳ್ಳಬಾರದು?

ಮೆರಿಟ್‌ ಟ್ರ್ಯಾಕ್‌ ಸಂಸ್ಥೆ ಸಮಸ್ಯೆಗೆ ಪರಿಹಾರ ಸೂಚಿಸಲು ಮುಂದೆ ಬಂದಿರಬಹುದು. ಆದರೆ ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ಈಗಾಗಲೆ ಪರಿಹಾರ ಕ್ರಮವನ್ನು ಜಾರಿಗೊಳಿಸಿದೆ. ಅದನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT