ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕನ ಟೋಪಿಯಲ್ಲಿ ಅಜಯ್

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ಅಜಯ್‌ ದೇವಗನ್‌ ಮತ್ತೆ ನಿರ್ದೇಶಕನ ಟೋಪಿ ಧರಿಸಲು ಸಜ್ಜಾಗಿದ್ದಾರೆ. ಚಿತ್ರಕ್ಕೆ ‘ಶಿವಾಯ್’ ಎಂಬ ಶೀರ್ಷಿಕೆ ಕೂಡ ಅಂತಿಮಗೊಂಡಿದ್ದು, ‘ಈ ಚಿತ್ರದಲ್ಲಿ ಬಹುತೇಕ ವಿದೇಶಿ ನಟರೇ ಅಭಿನಯಿಸಲಿದ್ದಾರೆ’ ಎಂದು ಅವರು ತಮ್ಮ ಚಿತ್ರದ ವಿಶೇಷತೆಯನ್ನು ಬಹಿರಂಗಪಡಿಸಿದ್ದಾರೆ.

ನಟನೆ, ನಿರ್ದೇಶನ, ನಿರ್ಮಾಣ ಮೂರೂ ವಿಭಾಗಗಳನ್ನು ಅಜಯ್‌ ವಹಿಸಿಕೊಂಡಿರುವುದು ಈ ಚಿತ್ರದ ವಿಶೇಷ.
‘ಶಿವಾಯ್ ಚಿತ್ರದಲ್ಲಿ ನಾನು ನಟಿಸಲಿದ್ದೇನೆ. ಶೇ 90ರಷ್ಟು ವಿದೇಶಿ ನಟವರ್ಗವೇ ಇರುವ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ನಾನೇ ವಹಿಸಿಕೊಂಡಿದ್ದೇನೆ. ಸಾಹಸ ಪ್ರಧಾನವಾದ ಈ ಸಿನಿಮಾ ಚಿತ್ರೀಕರಣ ಮುಂದಿನ ವರ್ಷ ಫೆಬ್ರುವರಿಯಲ್ಲಿ ಆರಂಭವಾಗಲಿದೆ’ ಎಂದು  ಅಜಯ್‌ ಚಿತ್ರದ ಬಗ್ಗೆ ವಿವರಿಸಿದರು.

ನಲವತ್ತೈದು ವರ್ಷ ವಯಸ್ಸಿನ ಈ ನಟನ ಮುಂದಿನ ಚಿತ್ರ ‘ಆಕ್ಷನ್‌ ಜಾಕ್ಸನ್‌’ ತೆರೆಕಾಣಲು ಸಿದ್ಧವಾಗಿದೆ. ದೇವಗನ್‌ಗೆ ಜೋಡಿಯಾಗಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿರುವ ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ.

ಚಿತ್ರದ ಟ್ರೈಲರ್‌ ಮತ್ತು ಹಾಡುಗಳ ಬಗ್ಗೆ ವ್ಯಕ್ತವಾಗಿರುವ ಮೆಚ್ಚುಗೆಯಿಂದ ಅಜಯ್‌ ಸಂತಸಗೊಂಡಿದ್ದಾರೆ. ‘ಜನರು ಮನರಂಜನಾತ್ಮಕ ಚಿತ್ರವನ್ನು ಇಷ್ಟಪಡುತ್ತಾರೆ, ನಿಜ. ಆದರೆ ಅದು ವಿಭಿನ್ನವಾಗಿರಬೇಕು ಎಂದು ಬಯಸುತ್ತಾರೆ. ‘ಆಕ್ಷನ್‌ ಜಾಕ್ಸನ್‌’ ಅಂತಹ ವಿಭಿನ್ನ ಚಿತ್ರ. ಪ್ರಭುದೇವ ಚಿತ್ರಕ್ಕೆ ವಿಭಿನ್ನವಾದ ದೃಷ್ಟಿಕೋನ ನೀಡಿದ್ದಾರೆ. ಚಿತ್ರದ ಪ್ರೋಮೊ ಮತ್ತು ಹಾಡುಗಳಿಗೆ ದೊರೆತ ಅದ್ಭುತ ಪ್ರತಿಕ್ರಿಯೆಯೂ ಅದನ್ನು ಪುಷ್ಟೀಕರಿಸುವಂತಿದೆ’ ಎಂದು ಅವರು ಹೇಳಿದ್ದಾರೆ.

ಪ್ರಭುದೇವ ಪ್ರತಿಭೆಯನ್ನು ಧಾರಾಳವಾಗಿ ಹೊಗಳಿರುವ ಅಜಯ್‌, ‘‘ನಾನು ಪ್ರಭು ಅಭಿಮಾನಿ. ಅವರು ನಿರ್ದೇಶಿಸಿರುವ ‘ವಾಂಟೆಡ್‌’, ‘ರೌಡಿ ರಾಥೋಡ್‌’ ಮತ್ತು ‘ಆರ್... ರಾಜ್‌ಕುಮಾರ್‌’ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದೇನೆ. ಅವರ ಚಿತ್ರಗಳಲ್ಲಿನ ಸಾಂದರ್ಭಿಕ ಹಾಸ್ಯ ಮತ್ತು ಸ್ಟೈಲಿಷ್‌ ಆಕ್ಷನ್‌ ನನಗೆ ತುಂಬ ಇಷ್ಟ’ ಎಂದೂ ಅವರು ಹೇಳಿದ್ದಾರೆ.

ಡಿಸೆಂಬರ್‌ 5ರಂದು ತೆರೆಕಾಣಲಿರುವ ‘ಆಕ್ಷನ್‌ ಜಾಕ್ಸನ್‌’ ಚಿತ್ರದಲ್ಲಿ ಯಾಮಿ ಗೌತಮ್‌ ಮತ್ತು ಮನಸ್ವಿ ಮಾಮ್‌ಗೈ ಮುಂತಾದವರ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT