ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕ ಬಾಲಚಂದರ್‌ ಗಂಭೀರ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಹಿರಿಯ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ಕೆ. ಬಾಲಚಂದರ್‌ ಅವರ ಆರೋಗ್ಯ ಸ್ಥಿತಿ ಗಂಭೀರ­ವಾ­ಗಿದೆ ಆದರೆ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೂತ್ರನಾಳದ ಸೋಂಕಿನಿಂದ ಬಳ­ಲುತ್ತಿದ್ದ ಬಾಲಚಂದರ್‌(84) ಅವರನ್ನು ಡಿ.3ರಂದು ಆಸ್ಪತ್ರೆಗೆ ದಾಖಲಿಸಲಾ­ಗಿತ್ತು. ‘ಬಾಲಚಂದರ್‌ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಅವರ ಸೋಂಕು ಸ್ಥಿತಿ ಗಂಭೀರ­ವಾಗು­ತ್ತಿದೆ’ ಎಂದು ವೈದ್ಯರು ತಿಳಿಸಿದ್ದಾರೆ. 
ಡಿಎಂಕೆ ಹಿರಿಯ ಮುಖಂಡ ಎಂ.ಕೆ ಸ್ಟ್ಯಾಲಿನ್‌, ನಟಿಯರಾದ ಖುಷ್ಬೂ, ಕೆ. ಆರ್‌ ವಿಜಯಾ, ನಿರ್ದೇಶಕ ವಿಕ್ರಮನ್‌ ಮತ್ತು ನಟರಾದ ವಿಜಯ್‌ ಕುಮಾರ್‌ ಮತ್ತು ರಾಜೇಶ್‌ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದರು.

‘ಉತ್ತಮ್‌ ವಿಲನ್‌‘ ಚಿತ್ರೀಕರಣ­ಕ್ಕಾಗಿ ಲಾಸ್‌ಏಂಜಲೀಸ್‌ನಲ್ಲಿರುವ ಕಮಲ್‌ ಹಾಸನ್‌ ವಿಡಿಯೊ ಕರೆ ಮೂಲಕ ತಮ್ಮ ಗುರು ಕೆ. ಬಾಲಚಂದರ್‌ ಅವರೊಂದಿಗೆ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT