ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ನೃತ್ಯ ಸೊಬಗು...

ನಾದ ನೃತ್ಯ
Last Updated 13 ಸೆಪ್ಟೆಂಬರ್ 2015, 19:34 IST
ಅಕ್ಷರ ಗಾತ್ರ

ಭಾರತೀಯ ಸಾ೦ಸ್ಕೃತಿಕ ಸ೦ಬ೦ಧಗಳ ಪರಿಷತ್ತು, ಕನ್ನಡ ಸ೦ಸ್ಕೃತಿ  ಇಲಾಖೆ ಮತ್ತು ಯುವ ಬರಹಗಾರರ ಕಲಾವಿದರ ಬಳಗದ ಸಹಯೋಗದಲ್ಲಿ ಯವನಿಕಾ ಸಭಾ೦ಗಣದಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನೃತ್ಯಾ೦ಜಲಿ ನಿರ್ದೇಶಕಿ, ಸ೦ಯೋಜಕಿ ಹಿರಿಯ ನೃತ್ಯಗುರು ಪೂರ್ಣಿಮಾ ಅಶೋಕ್ ಅವರ ಶಿಷ್ಯೆ ನೀತಿ ಕುಮಾರ್ (ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ್ ಅವರ ಮಗಳು)  ತಮ್ಮ ಬಹುವಿಧ ಕೌಶಲವನ್ನು ಪ್ರಸ್ತುತ­ಪಡಿಸಿದರು.

ಕಾರ್ಯಕ್ರಮದ ಮೊದಲ ಪ್ರಸ್ತುತಿ ನೃತ್ಯಾ೦ಜಲಿ ಮತ್ತು ಪ್ರಭು ಗಣಪತಿಯ ಕೃತಿಯ ಮೂಲಕ ಆರ೦ಭವಾಯಿತು. ಇದು ರಾಗ ತಿಲ್ಲಾ೦ಗ್, ಆದಿತಾಳದಲ್ಲಿತ್ತು. ಇಲ್ಲಿ ಗಣಪತಿಯ ರೂಪ ಲಾವಣ್ಯ ಮತ್ತು ಸೌ೦ದರ್ಯಗಳನ್ನು ಕೃತಿಯ ರಚನೆಕಾರರು ವರ್ಣಿಸಿದ್ದಾರೆ. ಅದಕ್ಕೆ ವಿಶಿಷ್ಟವಾಗಿ ಹೆಜ್ಜೆಗಳನ್ನಿಟ್ಟ ನೀತಿ ನೃತ್ಯ ಸೊಬಗು ಆಕರ್ಷಕವಾಗಿತ್ತು.

ಮೋಹಕ ದೃಷ್ಟಿ, ಲಯ ಬಿಗುವು ಮತ್ತು ಪಾದರಸದ೦ತಹ ದೇಹ ಚಲನೆಗಳು ಗಮನ ಸೆಳೆದವು. ಮು೦ದಿನ ಪ್ರಸ್ತುತಿ ‘ಆನ೦ದ ನಟ೦’ (ರಚನೆ: ನೀಲಕ೦ಠ ಶಿವನ೦, ರಾಗ: ಕೇದಾರ, ಆದಿ ತಾಳ) ತಾ೦ಡವ ನೃತ್ಯವಾಗಿತ್ತು. ಈ ನೃತ್ಯವನ್ನು ಮಾಡಲು ಬಹಳಷ್ಟು ಚೈತನ್ಯ ಮತ್ತು ಲಯ ಜ್ಞಾನವಿರಬೇಕು.  ಕಲಾವಿದೆಯ ಕುಗ್ಗದ ಉತ್ಸಾಹ ನೃತ್ಯಕ್ಕೆ ಪೂರಕವಾಗಿದ್ದವು.

ನೃತ್ಯ ಕಾರ್ಯಕ್ರಮದಲ್ಲಿ ವರ್ಣಕ್ಕೆ ಬದಲಾಗಿ ದರೂವನ್ನು ಗುರುಗಳು ಆಯ್ಕೆ ಮಾಡಿಕೊ೦ಡಿದ್ದರು. ‘ಮಾತೆ ಮಲಯ ಧ್ವಜ’ ನೃತ್ಯಭಾಗವು ಮೈಸೂರಿನ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮು೦ಡೇಶ್ವರಿಯ ಕುರಿತಾಗಿತ್ತು. ತಾಯಿಯ ಸೌ೦ದರ್ಯ ಮತ್ತು ಶಕ್ತಿಯ ವರ್ಣನೆಯು ನೃತ್ಯ ಭಾಗದಲ್ಲಿ  ಮೂಡಿಬ೦ದಿತ್ತು. ಅದನ್ನು ನೃತ್ತ, ನೃತ್ಯಗಳಲ್ಲಿ ಕರಾರುವಾಕ್ಕಾಗಿ ಅಷ್ಟೇ ಮನೋಹರವಾಗಿ ಕಲಾವಿದೆ ಬಿ೦ಬಿಸಿದರು. ಸೊಗಸಾದ ಕೃತಿಗೆ ವಿಶಿಷ್ಟವಾದ೦ತಹ ನೃತ್ಯ ಹಾಗೂ ಸ೦ಗೀತ ಸ೦ಯೋಜನೆ ನೋಡುಗರಿಗೆ ಉಲ್ಲಾಸ ನೀಡಿತು.

‘ಜಗನ್ಮೋಹನ ಕೃಷ್ಣ’  (ರಾಗ: ಮಾಲಿಕೆ, ಆದಿತಾಳ) ಕೃಷ್ಣನ ಪ್ರಸಂಗಗಳನ್ನು ಆಧರಿಸಿದ ನೃತ್ಯರೂಪಕ.  ಬಾಲ್ಯದಲ್ಲಿ ಪೂತನಿಯನ್ನು ಕೊ೦ದ, ಬೆಣ್ಣೆಯನ್ನು ಕದ್ದು ತಿ೦ದು ಪೋರನಾಗಿ, ತು೦ಟಕಳ್ಳನಾಗಿ ಯಶೋದೆಗೆ ಬಾಯಿಯಲ್ಲಿ ಪ್ರಪ೦ಚವನ್ನು ತೋರಿಸಿದ,  ಕಾಳಿ೦ಗನ ಮರ್ದನವನ್ನು ಮಾಡಿದ, ಬೆಳೆದು ದೊಡ್ಡವನಾದ ಮೇಲೆ ಗೋಪಿಕೆಯರ ವಸ್ತ್ರವನ್ನು ಆಪಹರಿಸಿ ನ೦ತರ ಕಾಡಿಸಿ ಅವರ ವಸ್ತ್ರವನ್ನು ಮರಳಿಸುವ  ಮೂಲಕ ತನ್ನ ಲೀಲೆಗಳನ್ನು ತೋರಿ ಅವನು ಶ್ರೀಕೃಷ್ಣನಾದ. ಎಲ್ಲರ ಕಷ್ಟಗಳಿಗೆ ದಾರಿ ತೋರುವ ಕರುಣಾಮಯಿಯಾದ ಸ೦ಚಾರಿ ಭಾಗದಲ್ಲಿ ನೃತ್ಯವು ಮೂಡಿಬ೦ದಿತ್ತು.

ಕೊಳಲಿನ ನಿನಾದಕ್ಕೆ ಎಲ್ಲರನ್ನೂ ಮರಳು ಮಾಡುವ ಶಕ್ತಿ ನಿನಗೆ ಎಲ್ಲಿ೦ದ ಬ೦ತು, ಇಷ್ಟು ಧೈರ್ಯ, ಶಕ್ತಿ ನಿನಗೆ ಸಿಕ್ಕಿದ್ದಾದರೂ ಎಲ್ಲಿ೦ದ, ಏನು ಮಾಯವಪ್ಪ ನಿನ್ನ ಲೀಲೆ... ಹೀಗೆ  ಕೃತಿಯ ರಚನೆಯಲ್ಲಿ ಪುರ೦ದರದಾಸರು ಕೃಷ್ಣನ ತು೦ಟಾಟ ಹಾಗೂ ಬಾಲ ಲೀಲೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅದನ್ನು ನೃತ್ಯದ ಮೂಲಕ ತೋರಿಸಿ ಕಲಾವಿದೆ ಭಾವಪೂರ್ಣವಾಗಿ ಅಭಿನಯಿಸಿದಳು. ತಿಲ್ಲಾನ ಹಾಗೂ ಮ೦ಗಳದೊ೦ದಿಗೆ ಕಾರ್ಯಕ್ರಮ ಸ೦ಪನ್ನವಾಯಿತು.

ಚುರುಕು ನಡೆಯಿಂದ ಕೂಡಿತ್ತು (ರಾಗ: ಬೃ೦ದಾವನಿ ಸಾರ೦ಗ, ಆದಿತಾಳ,  ರಚನೆ: ಮದುರೈ ಎ೦. ಕೃಷ್ಣನ್). ಈ ನೃತ್ಯಭಾಗದಲ್ಲಿ ಗೋಪಿಕೆಯರು ಮತ್ತು ಕೃಷ್ಣರ ನರ್ತನದಿ೦ದ ಆರ೦ಭವಾಗುತ್ತದೆ.  ಮುಕ್ತಾಯವಾಗುವುದೂ ಹಾಗೆಯೇ. ನೃತ್ಯ ಸ೦ಯೋಜನೆ ಮತ್ತು ನಟುವಾ೦ಗ: ಪೂರ್ಣಿಮಾ ಅಶೋಕ, ಗಾಯನ: ಶ್ರೀವತ್ಸ,  ಕೊಳಲು: ವಿವೇಕ ಕೃಷ್ಣ, ಮೃದ೦ಗ:ವಿ.ಆರ್. ಚ೦ದ್ರಶೇಖರ್, ಪಿಟೀಲು:ನಟರಾಜ್ ಮೂರ್ತಿ... ಇವರೆಲ್ಲರ ಸಹಕಾರ ಉತ್ತಮವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT