ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನಲ್ಲಿ ಕರಗುವ ಗ್ಯಾಡ್ಜೆಟ್ಸ್‌

Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇದು ಅಕ್ಷರಶಃ ಗಣೇಶ ಹಬ್ಬದ ನಂತರ ಮಣ್ಣಿನ ಮೂರ್ತಿಯನ್ನು ಕೆರೆಗೋ, ಹೊಳೆಗೋ, ಸಮುದ್ರಕ್ಕೋ, ಎಲ್ಲಿಯೂ ಸಾಧ್ಯವಾಗದಿದ್ದರೆ, ಬಕೆಟ್‌ನಲ್ಲಿನ ನೀರಿಗೋ ಮುಳುಗಿಸಿ ‘ವಿಸರ್ಜನೆ’ ಕ್ರಮವನ್ನು ಪೂರ್ಣಗೊಳಿಸುವಂತಹ ರೀತಿಯದೇ ಆಗಿದೆ.

ಹೊಸ ಹೊಸ ಬಗೆಯ ಗ್ಯಾಡ್ಜೆಟ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಯುವಜನರಿಗೆ ಅವನ್ನು ಖರೀದಿಸುವ ಬಯಕೆ. ಆದರೆ, ಹಳೆಯ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್ ಏನು ಮಾಡುವುದು? ಒಂದೊ ಯಾರಿಗಾದರೂ ಕಡಿಮೆ ಬೆಲೆಗೆ ಮಾರಾಟ ಮಾಡುವುದು, ಇಲ್ಲವೇ ಬಳಸಿದ ವಸ್ತುಗಳ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಒಎಲ್‌ಎಕ್ಸ್‌, ಕ್ವಿಕರ್‌ ಮೊದಲಾದ ಅಂತರ್ಜಾಲ ಮಾರುಕಟ್ಟೆಗಳನ್ನು ಅವಲಂಬಿ ಸುವುದು.

ಆದರೆ ಬಹಳ ಹಳೆಯದಾದ ಹ್ಯಾಂಡ್‌ಸೆಟ್‌ ಆಗಿದ್ದರೆ ಅದನ್ಯರೂ ಖರೀದಿಸುವುದಿಲ್ಲ ವಲ್ಲಾ, ಆಗೇನು ಮಾಡುವುದು? ಸುಮ್ಮನೆ ಮನೆಯಲ್ಲಿಟ್ಟರೆ ಬೇಡದ ಕಸದಂತಾಗುತ್ತದೆ. ಅದಕ್ಕೇನು ಮಾಡುವುದು? ಯಾರಿಗೂ ಬೇಡವಾದ ಅಂತಹ ಗ್ಯಾಡ್ಜೆಟ್‌ಗಳಿಗೂ ಒಂದು ಗತಿ ಕಾಣಿಸಬೇಕಲ್ಲವೇ?

ಅಮೆರಿಕದ ಇಲಿನಾಯ್ಸ್‌ ವಿಶ್ವವಿದ್ಯಾಲಯದ ತಂತ್ರಜ್ಞರು ನೀರಿನಲ್ಲಿ ಕರಗಿಹೋಗುವಂತಹ ಎಲೆಕ್ಟ್ರಾನಿಕ್ ಸಾಧನಗಳನ್ನೇ ಈಗ ಅಭಿವೃದ್ಧಿಪಡಿಸಲು ಯತ್ನಿಸುತ್ತಿದ್ದಾರೆ. ಹಳೆಯ ಗ್ಯಾಡ್ಜೆಟ್‌ ಎಲ್ಲೆಂದರಲ್ಲಿ ಎಸೆಯುವ ಬದಲು ಬಕೆಟ್‌ ನೀರಿನಲ್ಲಿ ಮುಳುಗಿಸಿದರಾಯಿತು. ಕೆಲವೇ ನಿಮಿಷಗಳಲ್ಲಿ ಅದು ಹಾಗೇ ಕರಗಿ ಹೋಗಲಿದೆ.

ಗ್ರೀನ್‌ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್‌ನಿಂದ ಆರಂಭಿಸಿ ಬಯೋಮೆಡಿಕಲ್‌ ಸೆನ್ಸರ್‌ ಸಿಸ್ಟೆಂ ಸಾಧನಗಳನ್ನು ಬಳಸಿದ ನಂತರ ಕರಗಿಸಿಬಿಡುವಂತಹ ರೀತಿಯಲ್ಲಿ ತಯಾರಿಸಲು ಉತ್ಸುಕರಾಗಿದ್ದಾರೆ. ಆ ನಿಟ್ಟಿನಲ್ಲಿಯೇ ನಡೆಸಿರುವ ಸಂಶೋಧನೆ ಸದ್ಯದಲ್ಲೇ ಯಶಸ್ಸು ನೀಡಲಿದೆ. ಈ ಪರಿಸರ ಸ್ನೇಹಿಯಾದ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಕೆಲವು ವೈದ್ಯಕೀಯ ಸಾಧನಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ನಂತರ ನೀರಿನಲ್ಲಿ ಮುಳುಗಿಸಿದರೆ ಅವು ಹಾಗೆಯೇ ಕರಗಿಹೋಗಿಬಿಡುತ್ತವೆ. ಆಗ ಪರಿಸರಕ್ಕೆ ಮಾರಕವಾದಂತಹ ತ್ಯಾಜ್ಯದ ಪ್ರಮಾಣ ಕಡಿಮೆ ಆಗುತ್ತದೆ ಎಂಬುದು ಇಲಿನಾಯ್ಸ್‌ ವಿವಿಯ ಮೆಟೀರಿಯಲ್ಸ್‌ ಸೈನ್ಸ್‌ ವಿಭಾಗದ ಜಾನ್‌ ಎ.ರೋಜರ್ಸ್‌ ಸಂಶೋಧಕ ತಂಡದ ಅಭಿಪ್ರಾಯ.

ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುವ ಉಪಕರಣಗಳನ್ನು ಬಳಸಿದ ನಂತರ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ. ಅಲ್ಲದೇ, ಈ ಸಾಧನಗಳ ಮರುಬಳಕೆಯೂ ಅಪಾಯಕಾರಿ.  ಹಾಗಾಗಿ ತಮ್ಮ ತಂಡದ ಸಂಶೋಧನೆ ಈ ಪ್ರಶ್ನೆಗೆ ಉತ್ತರ ನೀಡಲಿದೆ ಎನ್ನುವ ಆಶಾವಾದ ವ್ಯಕ್ತಪಡಿಸುತ್ತಾರೆ ಜಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT