ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಉಳಿಸಿ

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಮೇ ಮತ್ತು ಜೂನ್‌ ತಿಂಗಳಲ್ಲಿ ಸಮಾರಂಭಗಳ ಸಂಭ್ರಮ. ವಿವಾಹ, ಉಪನಯನ ಇತ್ಯಾದಿ ಯಾವುದೇ ಸಮಾರಂಭಕ್ಕೆ ಹೋದರೂ ಎಲ್ಲರ ಎಲೆಯ ಮುಂದೆ ಒಂದೊಂದು ನೀರಿನ ಬಾಟಲ್‌ ಇಡುತ್ತಾರೆ. ಇದು ಪ್ರತಿಷ್ಠೆಯ ಸಂಕೇತವೂ ಇರಬಹುದು.

ಆದರೆ ಆಹ್ವಾನಿಸಿದ್ದ ಅತಿಥಿಗಳಲ್ಲಿ ಕೆಲವರು ಮನೆಯಿಂದಲೇ ನೀರಿನ ಬಾಟಲ್‌ ತಂದಿರುತ್ತಾರೆ. ಆದರೆ ಎಲೆ ಮುಂದಿನ ಬಾಟಲ್‌ ಬೇಡವೆನ್ನುವುದಿಲ್ಲ. ಊಟದ ನಂತರ ಒಮ್ಮೆ ಕಣ್ಣು ಹಾಯಿಸಿದರೆ ಅರ್ಧ– ಮುಕ್ಕಾಲು ನೀರು ಖರ್ಚಾಗಿದ್ದ ಬಾಟಲ್‌ಗಳು ಎಲ್ಲರ ಎಲೆಯ ಮುಂದೂ ಕಾಣುತ್ತವೆ. ಐದೇ ನಿಮಿಷದಲ್ಲಿ ಊಟದ ಎಲೆಯ ಜೊತೆ ಬಾಟಲ್‌ಗಳು ಕಸದ ತೊಟ್ಟಿ ಸೇರುತ್ತವೆ.

ದೇಶದಲ್ಲಿ ಒಂದೆಡೆ ನೀರಿನ ಕೊರತೆಯ ಕೂಗು. ಮತ್ತೊಂದೆಡೆ ಪ್ಲಾಸ್ಟಿಕ್‌ ಬಳಕೆ ನಿಷೇಧವೆಂಬ ಕೂಗು. ಸಭೆ ಸಮಾರಂಭಗಳನ್ನು ನಡೆಸುವವರು, ಉಪಯೋಗಿಸಿ ಎಸೆಯುವಂತಹ ಲೋಟಗಳಲ್ಲಿ  ನೀರು ಕೊಟ್ಟರೆ ನೀರಿನ ಉಳಿತಾಯದ ಜೊತೆಗೆ ಪ್ಲಾಸ್ಟಿಕ್‌ ಬಳಕೆಯನ್ನೂ ಕಡಿಮೆ ಮಾಡಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT