ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಬಳಕೆದಾರರಿಂದ ಘೇರಾವ್‌

ಶುದ್ಧ ನೀರಿನ ಘಟಕದ ತಪಾಸಣೆ ಬಂದ ಅಧಿಕಾರಿಗಳು
Last Updated 24 ಮೇ 2016, 9:43 IST
ಅಕ್ಷರ ಗಾತ್ರ

ನಂಜನಗೂಡು:  ನಗರದ ಶ್ರೀಕಂಠಪುರಿ ಬಡಾವಣೆಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಗಂಗಾ ಚಾರಿಟೆಬಲ್ ಶುದ್ಧ ಕುಡಿಯುವ ನೀರಿನ ಘಟಕದ ತಪಾಸಣೆ ಗೆಂದು ಸೋಮವಾರ ಬಂದಿದ್ದ ಸುರಕ್ಷಿತ ಜಿಲ್ಲಾ ಆಹಾರ ಅರೋಗ್ಯ ಅಂಕಿತ ಅಧಿಕಾರಿ ಶಿವಕುಮಾರ್ ಹಾಗೂ ಹೆಚ್ಚು ವರಿ ಅಂಕಿತ ಅಧಿಕಾರಿ ದಾಕ್ಷಾಯಿಣಿ ಅವರಿಗೆ ಕುಡಿಯುವ ನೀರು ಬಳಕೆ ದಾರರು ಘೇರಾವ್ ಹಾಕಿದ ವಾಪಸ್ ಕಳಿಸಿದ ಘಟನೆ ನಡೆಯಿತು.

ನಗರದ ಶ್ರೀಕಂಠಪುರಿ ಬಡಾವಣೆಯಲ್ಲಿ ಗಂಗಾ ಚಾರಿಟೆಬಲ್ ಟ್ರಸ್ಟ್ ರಚಿಸಿಕೊಂಡು ₹ 5ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಜನರಿಗೆ ನೀಡುತ್ತಿದ್ದಾರೆ. ಸೋಮವಾರ ಸುರಕ್ಷಿತ ಅಹಾರ ಆರೋಗ್ಯ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿ ಐಎಸ್ಐ ಚಿಹ್ನೆ ಪಡೆಯದೇ ನೀರು ಸರಬರಾಜು ಮಾಡುವಂತಿಲ್ಲ ಎಂದು ಹೇಳಿದಾಗ, ಕುಡಿಯುವ ನೀರು ಪಡೆಯಲು ಸರತಿ ಸಾಲಿನಲ್ಲಿದ್ದ ನಗರದ ನಾಗರಿಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ನಗರಸಭೆ ಶುದ್ಧೀಕರಿಸದ ಕೊಳಕು ನೀರನ್ನು ಸರಬರಾಜು ಮಾಡುತ್ತಿದೆ. ಇದರಿಂದ ರೋಗ–ರುಜಿನಗಳಿಗೆ ಬರುತ್ತಿವೆ.

ಟ್ರಸ್ಟ್ ಜನರ ಆರೋಗ್ಯ ರಕ್ಷಣೆಯ ಬಗ್ಗೆ ಹೊಂದಿರುವ ಕಾಳಚಿಯಿಂದ ಅತ್ಯಂತ ಕಡಿಮೆ ಹಣಕ್ಕೆ ಶುದ್ದ ಕುಡಿಯುವ ನೀರು ಬದಗಿಸಿ ಸೇವಾ ಕಾರ್ಯ ನಡೆಸುತ್ತಿದೆ. ಸರ್ಕಾರಕ್ಕೆ ಜನರಿಗೆ ಶುದ್ಧ ನೀರನ್ನು ಬದಗಿಸಬೇಕೆಂಬ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಎರಡು ಸ್ಥಳಗಳಲ್ಲಿ ಯಾವುದೇ ಪರವಾನಗಿ ಪಡೆಯದೆ ಕುಡಿಯುವ ನೀರಿನ ದಂಧೆ ನಡೆಸುತ್ತಿರುವ ಘಟಕಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳದ ಇಲಾಖೆಯರು, ಸಮಾಜ ಸೇವೆಯಲ್ಲಿ ನಿರತವಾಗಿರುವ ಘಟಕದ ಮೇಲೆ ಸಲ್ಲದ ಆರೋಪ ಹೊರಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರ ಎದುರು ಹೇಳಿಕೊಂಡರು.

ನಂತರ ಜನರನ್ನು ಸಮಾಧಾನಪಡಿಸಿದ ಅಧಿಕಾರಿಗಳು ಶುದ್ಧ ನೀರನ್ನು ಪ್ಯಾಕೇಜ್ ಮಾಡದೆ ವಿತರಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು  ತಿಳಿಸಿ ತೆರಳಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT