ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹೊರಹಾಕಿದ ಪುರಸಭೆ

ಬಾವಿಯಲ್ಲಿ ಶವದ ವಾಸನೆ ದೂರು
Last Updated 24 ನವೆಂಬರ್ 2014, 10:05 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ೨೧ನೇ ವಾರ್ಡ್‌ನ ಬಾವಿಯಿಂದ ಶವದ ದುರ್ವಾಸನೆ ಬರುತ್ತಿದೆ ಎಂದು ಜನರು ದೂರು ನೀಡಿದ ಕಾರಣ ಭಾನುವಾರ ಪುರಸಭೆ ವತಿಯಿಂದ ನೀರು ಮೇಲತ್ತಲಾಯಿತು. ೪೦೦ ವರ್ಷಗಳ ಹಿಂದೆ ನಿರ್ಮಿಸಿದ್ದ ಬಾವಿ ನೀರು ಹೊರಹಾಕುವಾಗ ಜನರ ಮೊಗದಲ್ಲಿ ಬೇಸರವಿತ್ತು. ಬೆಳಿಗ್ಗೆ ೧೧ ಗಂಟೆಗೆ ಆರಂಭವಾದ ಕಾರ್ಯಾಚರಣೆ ರಾತ್ರಿಯಾದರೂ ಮುಂದು­ವರಿ­ದಿತ್ತು.

ನೀರನ್ನು ತುಮಕೂರಿನ ಪ್ರಯೋಗ ಶಾಲೆಗೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ನಂತರ ಪರಿಶೀಲಿಸಲಾಗುವುದು ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಶ್ರೀನಾಥ್ ಬಾಬು ತಿಳಿಸಿದ್ದಾರೆ. ಸ್ಥಳಕ್ಕೆ ಪುರಸಭೆ ಸದಸ್ಯರಾದ ಎಂ.ಎಸ್.­ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮುಖಂಡರಾದ ಆನಂದ್‌, ಮಿಲ್ ರಾಜಣ್ಣ , ಸ್ಥಳೀಯರು ಬಾವಿ ಬಳಿ ಸಮೀಪ ಜಮಾಯಿಸಿದ್ದರು.

ಕಳೆದ ಮೂರು ದಿನಗಳಿಂದ ಬಾವಿಯಿಂದ ಬರುತ್ತಿರುವ ದುರ್ವಾಸನೆ ಹೆಚ್ಚಾಗಿದೆ ಎಂದು ಜನರು ಪುರಸಭೆಗೆ ದೂರು ನೀಡಿದ್ದರು.  ಶನಿವಾರ ಸ್ಥಳಕ್ಕೆ ಆಗಮಿಸಿದ ಪುರ­ಸಭೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಬಾವಿಯನ್ನು ಪರಿಶೀಲಿಸಿ ಯಾವುದೇ ಅಂತ ಲಕ್ಷಣ ಕಂಡುಬರುತ್ತಿಲ್ಲ  ಎಂದು ತಿಳಿಸಿದ್ದರು.  ಜೂಜಾಟ: ದೊಡ್ಡೇರಿ ಹೋಬಳಿಯ ವೀರಾಪುರದಲ್ಲಿ ಜೂಜಾಟದಲ್ಲಿ ತೊಡಗಿದ್ದ ೧೧ ಜನರನ್ನು ಬಡವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT