ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ನಿದ್ದೆಗಣ್ಣಿನಲ್ಲಿ ತಿನ್ನುತ್ತೀರಾ...?

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಪ್ರತಿ ದಿನ ಎಂಟು ಗಂಟೆಗಳ ಮೇಲ್ಪಟ್ಟು ನಿದ್ರೆ ಮಾಡಿದರೆ ಹಲವಾರು  ಪ್ರಯೋಜನಗಳಿವೆ. ನಿದ್ರೆಯು ಶಕ್ತಿ ಸಂರಕ್ಷಣೆ, ಮಿದುಳನ್ನು ಚುರುಕುಗೊಳಿಸುತ್ತದೆ.  ದೇಹದ ಉಷ್ಣತೆ ನಿಯಂತ್ರಿಸುತ್ತದೆ.  ಹಾರ್ಮೋನುಗಳ  ಮತ್ತು ದೇಹದ ಕಾರ್ಯಾಚರಣೆಯನ್ನು ಉತ್ತೇಜಿಸುವ ಕಾರ್ಯವನ್ನು ನಿದ್ದೆಯು ಮಾಡುತ್ತದೆ.

ರಾತ್ರಿಯಲ್ಲಿ ಮಲಗುವ ಮುನ್ನವೇ ಆಹಾರ ತಿನ್ನುವುದು ಹಾಗೂ ಮಲಗುವುದು ಲೋಕ ನಿಯಮ. ಆದರೆ ಕೆಲವು ಜನರು ನಿದ್ರೆಯಲ್ಲಿ ಆಹಾರ ತಿನ್ನುತ್ತಾರೆ. ಇದಕ್ಕೆ ನಿದ್ರಾಹೀನತೆ  ಖಿನ್ನತೆ (ಇನ್ಸಾಮ್ನಿಯಾ) ಹಾಗೂ ನಿದ್ರಾಹೀನತೆಯ ಕೆಲ ರೋಗ ಲಕ್ಷಣಗಳು ಪ್ರಮುಖ ಕಾರಣ. ನಿದ್ರೆಯಲ್ಲಿ ಜನರು ಎಷ್ಟು ತಿನ್ನುತ್ತಾರೆ ಎನ್ನುವುದು ಆಶ್ಚರ್ಯದ ವಿಷಯ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.

ನಿದ್ರೆ ಮಾಡುವಾಗ ತಿನ್ನುವುದನ್ನು ಎರಡು ವಿಧಾನಗಳಲ್ಲಿ ಗುರುತಿಸಬಹುದು.  ಒಂದು.. ರಾತ್ರಿಯಲ್ಲಿ ತಿನ್ನುವ ಹವ್ಯಾಸದ  ಲಕ್ಷಣ (ನೈಟ್ ಈಟಿಂಗ್ ಸಿಂಡ್ರೋಮ್) ಈ ವೇಳೆಯಲ್ಲಿ ಜನರು ಎದ್ದು ಎಚ್ಚರಿಕೆಯಿಂದ ಮಲಗುವ ಮುಂಚೆ ತಿನ್ನುವ ವಿಧಾನ. ಮತ್ತೊಂದು ನಿದ್ರೆ ಸಂಬಂಧಿತ ತಿನ್ನುವ ಕಾಯಿಲೆ (ಎಸ್‌ಆರ್‌ಇಡಿ) ಈ ರೋಗದ ಲಕ್ಷಣಗಳುಳ್ಳವರು ನಿದ್ರೆಯಲ್ಲಿ ಏನು ಮಾಡುತ್ತಿದ್ದೇವೆಂದು ಎಚ್ಚರವಿರುವುದಿಲ್ಲ  ಒಟ್ಟಿನಲ್ಲಿ ತಿನ್ನುತ್ತಿರುತ್ತಾರೆ, ನಿದ್ರೆಯಲ್ಲಿ ನಡೆದಾಡುತ್ತಿರುತ್ತಾರೆ ಅಥವಾ ಇದನ್ನು ನಾವು ಪ್ಯಾರಾಸೋಮ್ನಿಯಾ ಕಾಯಿಲೆಯ ಲಕ್ಷಣ ಎಂದು ಕರೆಯುತ್ತಾರೆ.

ರಾತ್ರಿ ವೇಳೆ ತಿನ್ನುವಾಗ ಮುಖ್ಯವಾಗಿ ದೇಹದಲ್ಲಿ ಸಿಹಿಯಾದ ಅಂಶ ಹೆಚ್ಚಾಗಿ ಸೇರುತ್ತದೆ. ಈ ಎರಡು ವಿಧಾನಗಳಿಂದ ಹಲವು ಕಾಯಿಲೆಗಳು ಉದ್ಭವಕ್ಕೆ ಕಾರಣವಾಗಬಹುದು. ಆದ್ದರಿಂದ ಚಿಕಿತ್ಸೆ ವಿಧಾನಗಳಿಗೆ ಮೊರೆಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೂ ಇದು ಸತ್ಯ ಎಂದು ನಂಬುವುದಕ್ಕೆ ಅಸಾಧ್ಯ. ಜನರು ಸಾಮಾನ್ಯವಾಗಿ ಎರಡು ವಿಧಾನಗಳ ವೈಶಿಷ್ಟ್ಯತೆಗಳನ್ನು ಗಮನಿಸುತ್ತಾರೆ. ಆದರೂ ನಿದ್ರೆಯಲ್ಲಿ ತಿನ್ನುತ್ತಾರೆಂದು ಗೊತ್ತಿದ್ದರು ನಮ್ಮ ಬಳಿ ಉತ್ತರಗಳಿಲ್ಲ.

ಆರ್‌ಇಎಂ ಪ್ಯಾರಾಸೋಮ್ನಿಯಸ್  ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸಲು ಮುಂದಾದರೆ ಸಾಮಾನ್ಯವಾಗಿ   ನಿದ್ರೆ ವಿಧಾನವನ್ನು ಗಮನಿಸುವುದು ಮತ್ತು ಅದರ ಮೌಲ್ಯಮಾಪನ ಮಾಡಿದ ನಂತರ ಚಿಕಿತ್ಸೆ ನೀಡಬಹುದು. 

ಒಂದು ರಾತ್ರಿ ಸಂಶೋಧನೆಗೆ ಒಳಪಡಿಸಿವುದರ ಮೂಲಕ ಕಾಯಿಲೆಯನ್ನು ಪತ್ತೆ ಹಚ್ಚಬಹುದು ಎಂದು ಸಂಶೋಧಕರು ತಿಳಿಸುತ್ತಾರೆ. ಉದಾಹರಣೆಗೆ– ನಿದ್ರಾಹೀನತೆ (ಇನ್ಸಾಮ್ನಿಯಾ), ನಿದ್ರೆಯಲ್ಲಿ ಉಸಿರುಗಟ್ಟುವಿಕೆ  ಹಾಗೂ ಗೊರಕೆ ಹೊಡೆಯುವುದು (ಸ್ಲೀಪ್ ಆಪ್ನಿಯ)  ಮುಂತಾದವು ಕಾಯಿಲೆಗಳು ಉದ್ಭವಿಸುವುದಕ್ಕೆ ಚಿಕಿತ್ಸೆ ಪ್ರಚೋದನೆ ನೀಡುತ್ತವೆ. 

ಪ್ಯಾರಾಸೋಮ್ನಿಸ್‌ಯಿಂದ ಜನರು ನಿದ್ರಾಹೀನತೆ ಕಾಯಿಲೆಗೆ ಒಳಗಾಗುತ್ತಾರೆ. ನಿದ್ರೆ ಗುಣಮಟ್ಟ, ಸರಿಯಾದ ನಿದ್ರೆ ಮಾಡುವುದಕ್ಕೆ ಆಗುವುದಿಲ್ಲ.  ಎಚ್ಚರ ಆದರೆ ಮತ್ತೆ ನಿದ್ರೆ ಬರುವುದಿಲ್ಲ, ಒತ್ತಡ,  ಸೋಮಾರಿತನ, ಮಂಪರು, ನಿದ್ರೆಗಳಿಸಲು ಅಸಮರ್ಥರಾಗುವುದು. ಕಾಯಿಲೆ ಗುಣಪಡಿಸಲು ಮದ್ಯಪಾನ ಮತ್ತು ನಿದ್ರೆಗೆ ಸಂಬಂಧಪಟ್ಟ ಔಷಧಗಳನ್ನು ಉಪಯೋಗಿಸುವಂತೆ ಪ್ರಚೋದನೆ ನೀಡುತ್ತದೆ.

ಬೆನ್‌ಜೋಡೀಯಜೈಪೈನ್ಸ್, ಕ್ಲೋನಜೆಪಮ್ ಔಷಧಿಗಳನ್ನು ಉಪಯೋಗಿಸುವುದರಿಂದ ನಿದ್ರೆ ಸಂಬಂಧಿತ ತಿನ್ನುವ ಕಾಯಿಲೆಯನ್ನು ನಿಯಂತ್ರಿಸಬಹುದು.  ಆ್ಯಂಟಿ ಎಪಿಲ್ಪೆಟಿಕ್ ಟಾಪಿರಾಮೇಟ್ ಮತ್ತು ಡೋಪಮೈನ್ ಮುಂತಾದ ಔಷಧಗಳಿವೆ ಎಂದು ಸಂಶೋಧಕರು ಸೂಚಿಸಿದ್ದಾರೆ.

ನಿದ್ರೆ ಮಾಡುವ ವೇಳೆಯಲ್ಲಿ ಹಾಗೂ ರಾತ್ರಿ ವೇಳೆ ನಿದ್ರೆ ಬಾರದೆ ಎಚ್ಚರಗೊಂಡಾಗ ಹೆಚ್ಚಾಗಿ ತಿನ್ನುವುದನ್ನು ಕಾಣಬಹುದು. ಇಂತಹ ಅನೇಕ ವಿಧಾನಗಳನ್ನು ತೆಗೆದುಕೊಳ್ಳಬಹುದು. ಜನರು ಮಲಗುವ ಮುಂಚೆ ಏನಾದರೂ ತಿಂದರೆ ಮಾತ್ರ ಬೆಳಿಗ್ಗೆ ಏಳುವುದಕ್ಕೆ ಸಾಧ್ಯ. ಬೆಳಿಗ್ಗೆ ಎದ್ದ ತಕ್ಷಣ ಅಡುಗೆ ಕೋಣೆಯಲ್ಲಿ ಸಿಹಿಯಾದ ಪದಾರ್ಥ ಅಥವಾ ಜ್ಯೂಸ್ ಸೇವನೆ ಮಾಡಬೇಕಾಗುತ್ತದೆ. ರಾತ್ರಿ ವೇಳೆಯಲ್ಲಿ ಉತ್ತಮ ನಿದ್ರೆ ಮಾಡಿದರೆ ನಮಗೆ ಯಾವುದೇ ಕಾಯಿಲೆಗಳು ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT