ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಣುಪಾದ ತ್ವಚೆಗೆ...

Last Updated 15 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮಹಿಳೆಯರ ಉಲ್ಲಾಸದ ಮೂಲ ಇರುವುದೇ ಪುಟಿಯುವ ಆತ್ಮವಿಶ್ವಾಸದಲ್ಲಿ. ಮೃದುವಾದ ತ್ವಚೆ, ಅಂದದ ನೋಟ ಇವೆರಡೂ ಆತ್ಮವಿಶ್ವಾಸದ ಖನಿಯಾಗಿಸುತ್ತವೆ. ಈ ನಿಟ್ಟಿನಲ್ಲಿ ಬೇಡದ ರೋಮನಿವಾರಣೆಗಾಗಿ ಎಲ್ಲ ವರ್ಗದ ಜನರೂ ಶಕ್ತ್ಯಾನುಸಾರ ಸಮಯ ಹಣ ವ್ಯಯ ಮಾಡುತ್ತಾರೆ.

ಆದರೆ ಶೇವಿಂಗ್ ಸರಳ ಉಪಾಯವಾದರೂ ಹಲವಾರು ತಪ್ಪು ಕಲ್ಪನೆಗಳು ಇದರ ಸುತ್ತ ಹುತ್ತ ಕಟ್ಟಿವೆ. ಅವೆಷ್ಟು ಸತ್ಯ ಎನ್ನುವುದು ಅರಿಯುವ.

*ಪ್ರತಿದಿನ ಶೇವ್ ಮಾಡಿಕೊಳ್ಳುವುದರಿಂದ ಕೂದಲು ಇನ್ನಷ್ಟು ದಟ್ಟವಾಗಿ, ಕಪ್ಪಾಗಿ ಮತ್ತು ವೇಗವಾಗಿ ಬೆಳೆಯುತ್ತದೆ.
ಇದು ಸುಳ್ಳು.  ಕೂದಲು ಪುನಃ ಬೆಳೆಯುವುದು ನಿಮ್ಮ ದೇಹದ ಪ್ರಕೃತಿ, ಹಾರ್ಮೋನ್ ಮತ್ತು ವಂಶವಾಹಿಯನ್ನು ಆಧರಿಸಿದೆ. ನಿತ್ಯ ಶೇವ್ ಮಾಡಿಕೊಳ್ಳುವುದರಿಂದ ತ್ವಚೆ ಮೃದುವಾಗುತ್ತದೆ. ಕಂಕುಳಲ್ಲಿನ ಕೂದಲು ಕಾಲಿಗಿಂತ ಶೇ. 50ರಷ್ಟು ವೇಗವಾಗಿ ಬೆಳೆಯುತ್ತವೆ. ಹೀಗಾಗಿ ತಪ್ಪು ಕಲ್ಪನೆ ಮನೆ ಮಾಡಿರಬಹುದು.

*ತ್ವಚೆ ಕಪ್ಪಾಗುತ್ತದೆ ಮತ್ತು ಬಿರುಕು ಮೂಡುತ್ತದೆ.
ತ್ವಚೆಯಲ್ಲಿನ ನಿರ್ಜೀವ ಕೋಶಗಳ ನಿರ್ಮೂಲನೆಯಾಗುತ್ತದೆ. ತ್ವಚೆ ನುಣುಪಾಗುತ್ತದೆ.

* ಕೂದಲು ವೇಗವಾಗಿ ಬೆಳೆಯುತ್ತದೆ.
ಇಲ್ಲ. ಕೂದಲು ವೇಗವಾಗಿ ಬೆಳೆಯುವುದಿಲ್ಲ. ದೇಹದ ವಿವಿಧ ಭಾಗಗಳಲ್ಲಿ ಕೂದಲು ಬೆಳೆಯಲು ಭಿನ್ನ ಅವಧಿಯನ್ನು ತೆಗೆದುಕೊಳ್ಳುತ್ತದೆ. ವಯಸ್ಸು, ಋತುಮಾನ ಇವೆರಡನ್ನೂ ಗಮನದಲ್ಲಿರಿಸಿಕೊಳ್ಳಬೇಕು. ಇಳಿವಯಸ್ಸಿನಲ್ಲಾದರೆ ಕೂದಲು ಬೆಳವಣಿಗೆಯಾಗುವುದೇ ನಿಧಾನ. ಬೇಸಿಗೆಯಲ್ಲಿ ಬಲುಬೇಗ ಕೂದಲು ಬೆಳೆಯುತ್ತದೆ. 

*ಹಳೆ ಬ್ಲೇಡಿಗಿಂತ ಹೊಸ ಬ್ಲೇಡ್ ಹೆಚ್ಚು ಗಾಯಗಳನ್ನು ಮಾಡುತ್ತದೆ.
ವಾಸ್ತವ ಏನೆಂದರೆ ಹಳೆ ಬ್ಲೇಡ್ ಗಾಯಗಳನ್ನು ಮಾಡುವುದು ಹೆಚ್ಚು. ಅಲ್ಲದೇ ಅದರಿಂದ ಮೃದುವಾದ ಶೇವಿಂಗ್ ಸಾಧ್ಯವಾಗುವುದಿಲ್ಲ. ಸಿಂಗಲ್ ಬ್ಲೇಡ್ ಬಳಕೆ ಅಥವಾ ರೇಜರ್ ಮೇಲೆ ಅತಿಯಾದ ಒತ್ತಡ ಹಾಕುವುದರಿಂದ ಗಾಯಗಳು ಆಗಬಹುದು.

*ರೇಜರ್ ಗಟ್ಟಿಯಾಗಿ ಒತ್ತಿದರೆ ಮೃದುವಾದ ಶೇವಿಂಗ್ ಸಾಧ್ಯ.
ಯಾರು ಹೇಳಿದ್ದು ಹಾಗೆ? ರೇಜರ್ ಮೇಲೆ ಅತಿಯಾದ ಒತ್ತಡ ಹಾಕಿದರೆ ಗಾಯಗಳಾಗಬಹುದು. ನಿಮ್ಮ ತ್ವಚೆಗೆ ವಿರುದ್ಧ ದಿಕ್ಕಿನಲ್ಲಿ ರೇಜರ್ ಓಡಿಸಿ. ಇದರಿಂದ ಕೆಲಸ ಸುಲಭವಾಗುತ್ತದೆ. ಒಳ್ಳೆಯ ಶೇವಿಂಗ್‌ಗೆ ಲೈಟ್ ಟಚ್ ನೀಡಿದರೆ ಸಾಕು.

*ಒಂದೇ ಜಾಗದಲ್ಲಿ ಪುನಃಪುನಃ ಶೇವ್ ಮಾಡಿಕೊಳ್ಳುತ್ತಿದ್ದರೆ ಉತ್ತಮ ಫಲಿತಾಂಶ ಪಡೆಯಬಹುದು.
ಇದೂ ತಪ್ಪು ಕಲ್ಪನೆ. ಹೀಗೆ ಮಾಡುವುದರಿಂದ ಚರ್ಮದಲ್ಲಿ ಅಲರ್ಜಿ ಕಾಣಿಸಿಕೊಳ್ಳಬಹುದು. ರೇಜರ್ ಮೊದಲಿನ ಮೃದು ಅನುಭವ ನೀಡುತ್ತಿಲ್ಲ ಎನ್ನುವುದು ಅರಿವಿಗೆ ಬಂದ ತಕ್ಷಣ ಬ್ಲೇಡ್ ಬದಲಿಸುವುದು ಉತ್ತಮ.

*ಮಂಡಿ ಮೇಲ್ಭಾಗದಲ್ಲಿ ಮಾತ್ರವೇ ಶೇವ್ ಮಾಡಿಕೊಳ್ಳಬೇಕು.
ಇದು ನಿಮ್ಮ ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು. ನಿಮಗೆ ಯಾವುದು ಆರಾಮ ಅನ್ನಿಸುತ್ತದೆಯೊ ಹಾಗೂ ನಿಮ್ಮ ಸೌಂದರ್ಯಪ್ರಜ್ಞೆಗೆ ಯಾವುದು ಸೂಕ್ತ ಅನ್ನಿಸುತ್ತದೆಯೊ ಹಾಗೆ ಮಾಡಿ.

*ಪುರುಷರ ರೇಜರ್ ಅನ್ನೇ ಸ್ತ್ರೀಯರೂ ಬಳಸಬಹುದು.
ಇದು ಖಂಡಿತವಾಗಿಯೂ ಸರಿಯಲ್ಲ. ನೈರ್ಮಲ್ಯದ ಕಾರಣದಿಂದ ಹೀಗೆ ಮಾಡುವುದು ಸರಿಯಲ್ಲ.  ಮಹಿಳಾ ರೇಜರ್‌ಗಳನ್ನು ನಿಮ್ಮ ಅಂಗಾಂಗಗಳ ತಿರುವುಗಳಿಗೆ (ಕರ್ವ್) ಅನುಗುಣವಾಗಿ ವಿಶಿಷ್ಟವಾಗಿ ರೂಪಿಸಲಾಗಿರುತ್ತದೆ.

*ಪ್ರತಿದಿನ ಶೇವಿಂಗ್ ಮಾಡಿಕೊಳ್ಳುವುದು ತ್ವಚೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ಇದೂ ತಪ್ಪು. ನಿಮ್ಮ ಕಂಕುಳು ಅಥವಾ ಕಾಲುಗಳಲ್ಲಿ ಅತಿವೇಗವಾಗಿ ಕೂದಲು ಬೆಳೆಯುತ್ತಿದ್ದರೆ ಅಥವಾ ದಟ್ಟವಾಗಿ ಬೆಳೆಯುತ್ತಿದ್ದರೆ ನಿತ್ಯ ಶೇವ್ ಮಾಡಿಕೊಳ್ಳುವುದು ಜಾಣ ಆಯ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT