ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಮೀನುಗಳ ಸಾವು

ಕುಂಟೆಗೆ ವಿಷ ಬೆರೆಸಿರುವ ಶಂಕೆ
Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮಹದೇವಪುರ: ಇಲ್ಲಿನ ಮಂಡೂರು ಗ್ರಾಮದ ಹೊರವಲಯದಲ್ಲಿನ ಕುಂಟೆ-ಯಲ್ಲಿ ಸಾಕಿದ ನೂರಾರು ಮೀನುಗಳು ಕಳೆದ ಎರಡು ದಿನಗಳಿಂದ ಸತತವಾಗಿ ಸತ್ತು ತೇಲುತ್ತಿವೆ.

ಮೀನುಗಳ ಸಾವಿಗೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ ಮೀನುಗಾರಿಕೆ ನಡೆಸುತ್ತಿರುವ ಸ್ಥಳೀಯ ನರೇಂದ್ರಬಾಬು ಹೇಳುವಂತೆ, ಕೆಲ ಕಿಡಿಗೇಡಿಗಳು ಉದ್ದೇಶ-ಪೂರಕವಾಗಿ ಕುಂಟೆಗೆ ವಿಷ ಬೆರೆಸಿರುವುದರಿಂದ ಮೀನುಗಳು ಸಾವ-ನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ನರೇಂದ್ರಬಾಬು ಕುಂಟೆಯನ್ನು ಮೀನುಗಾರಿಕೆ ನಡೆಸಲು ಗುತ್ತಿಗೆ ತೆಗೆದು-ಕೊಂಡಿದ್ದು, ಕಳೆದ 8 ತಿಂಗಳ ಹಿಂದೆ ಕುಂಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮೀನಿನ  ಮರಿಗಳನ್ನು ಬಿಟ್ಟಿದ್ದರು. ಅದ-ಕ್ಕಾಗಿ 25 ಸಾವಿರಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದರು.

‘ಇದ್ದಕ್ಕಿದ್ದಂತೆ ಕುಂಟೆಯಲ್ಲಿ ನೂರಾರು ಮೀನುಗಳು ಶನಿವಾರ ಸಂಜೆ ಸತ್ತು ತೇಲತೊಡಗಿದವು. ರವಿವಾರ ಮುಂಜಾನೆಯೂ ಸಹ ನೂರಾರು ಮೀನುಗಳು ಸತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ಅವರು ತಮ್ಮ ಅಳಲನ್ನು ತೋಡಿ-ಕೊಂಡರು.

‘ಕುಂಟೆಯಲ್ಲಿ ಶುದ್ಧ ನೀರು ಮಾತ್ರ-ವಿದೆ. ಯಾವುದೇ ಮೂಲಗಳಿಂದ ಅಶುದ್ಧ ನೀರು ಕುಂಟೆಯನ್ನು ಸೇರುವ ಅವಕಾಶವಿಲ್ಲ. ಹಾಗಾಗಿಯೇ ಕುಂಟೆ-ಯಲ್ಲಿ ಮೀನುಗಾರಿಕೆ ನಡೆಸಲು ಪಂಚಾಯಿತಿಯಿಂದ ಮುಂದಿನ ಐದು ವರ್ಷಗಳ ಅವಧಿಗೆ ಪರವಾನಗಿ ಪಡೆಯ-ಲಾಗಿತ್ತು. ಬಹುತೇಕ ಕುಂಟೆಯಲ್ಲಿನ ಎಲ್ಲಾ ಮೀನುಗಳು ದೊಡ್ಡದಾಗಿ ಬೆಳೆದಿದ್ದವು’ ಎಂದರು.

‘ಮುಂದಿನ ವಾರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸ್ಥಳೀಯ ಕೆಲ ಕಿಡಿಗೇಡಿಗಳು ಬೇಕಂತಲೇ ಮೀನುಗಳನ್ನು ಸಾಯಿಸಲು ವಿಷವನ್ನು ಬೆರೆಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT