ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆತನ್ಯಾಹುಗೆ ಆಮಂತ್ರಣ: ಅಮೆರಿಕ ಪ್ರಜೆಗಳ ವಿರೋಧ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್ಎಸ್): ಶ್ವೇತ­ಭವನದ ಜತೆ ಸಮಾಲೋಚನೆ ನಡೆಸದೆ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವ-­ರಿಗೆ ಸ್ಪೀಕರ್ ಜಾನ್ ಬೊಹ್‌ನೆರ್ ಆಮಂತ್ರಣ ನೀಡಬಾರದಿತ್ತು ಎಂದು ಅರ್ಧ­ದಷ್ಟು ಅಮೆರಿಕ ಪ್ರಜೆಗಳು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಕ್ಷ ಬರಾಕ್ ಒಬಾಮ ಅವರ ಜತೆ ಚರ್ಚಿ­ಸದೆ ಸ್ಪೀಕರ್ ಅವರು ನೆತನ್ಯಾಹು ಅವ­ರನ್ನು ಆಮಂತ್ರಿಸಿ­ರು­ವುದು ತಪ್ಪು ಎಂದು ಶೇಕಡ 48­ರಷ್ಟು ಜನರು ಅಭಿಪ್ರಾಯ­ಪಟ್ಟಿ­ದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಶೇಕಡ 22ರಷ್ಟು ಜನರು ತಿಳಿಸಿದ್ದಾರೆ.

ಎನ್‌ಬಿಸಿ ನ್ಯೂಸ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ನಡೆಸಿದ ಸಮೀಕ್ಷೆ­ಯಲ್ಲಿ ಶೇಕಡ 30­ರಷ್ಟು ಜನರು ಶ್ವೇತ­ಭವನದ ಜತೆ ಸಮಾ­ಲೋ­ಚಿ­ಸಬಹು­ದಾ­ಗಿತ್ತು ಎಂದು ಹೇಳಿದ್ದಾರೆ.

ನೆತನ್ಯಾಹು ಅವರನ್ನು ಭೇಟಿ ಮಾಡದಿರಲು ಒಬಾಮ ನಿರ್ಧರಿಸಿದ್ದು, ಎರಡೂ ರಾಷ್ಟ್ರಗಳ ಮಧ್ಯೆ ಒಂದು ರೀತಿಯಲ್ಲಿ ಭಿನ್ನಮತ ಹೆಚ್ಚಾಗಿ­ರುವ ಸಂದರ್ಭದಲ್ಲಿ ಸಮೀಕ್ಷಾ ವರದಿ ಪ್ರಕಟವಾಗಿದೆ.

ಇರಾನ್ ಅಣ್ವಸ್ತ್ರ ಕಾರ್ಯಕ್ರಮವು ಇಸ್ರೇ­ಲ್‌ಗೆ ಬೆದರಿಕೆ ಒಡ್ಡಿರುವುದರಿಂದ ಈ ಬಗ್ಗೆ ಸಂಧಾನ ಮಾತುಕತೆ ನಡೆ­ಸುವುದು ಸರಿಯಲ್ಲ ಎಂದು ನೆತನ್ಯಾಹು  ಮೊದಲಿನಿಂದಲೂ ಹೇಳುತ್ತಾ ಬಂದಿ­ದ್ದಾರೆ. ಈ ಮಾತನ್ನು ಅವರು ಕಾಂಗ್ರೆಸ್ ಉದ್ದೇಶಿಸಿ ಮಾತನಾಡುವಾಗ ಪುನರ್ ಉಚ್ಛರಿಸುವ ಸಾಧ್ಯತೆ ಇರುವುದರಿಂದ ಶ್ವೇತಭವನದ ಆಡಳಿತಕ್ಕೆ ಆತಂಕ ಉಂಟಾಗಿದೆ. ನೆತನ್ಯಾಹು ಅವರು ಮಂಗಳವಾರ ಕಾಂಗ್ರೆಸ್‌ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT