ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಮರೆಗೆ ಸರಿದ ಹುಚ್ಚೆಳ್ಳು

Last Updated 1 ನವೆಂಬರ್ 2014, 9:39 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ‘ದೀಪದ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ’ ಎನ್ನುವ ರೈತರ ಪಾರಂಪರಿಕ ತಿಳಿವಳಿಕೆ ಈಚೆಗೆ ಸುಳ್ಳಾಗುತ್ತಿದೆ. ರೈತರ ಹೊಲಗಳಲ್ಲಿ ಈ ಹಳದಿ ಸುಂದರಿ ಮಾಯವಾಗಿದ್ದಾಳೆ.

ಹಲವು ಅಪರೂಪದ ಗುಣ ಮೈಗೂಡಿಸಿಕೊಂಡಿರುವ ಈ ಎಣ್ಣೆ­ಕಾಳು ಬೆಳೆ ಕೇವಲ ಇಬ್ಬನಿ ಕುಡಿದು ಬೆಳೆಯಬಲ್ಲದು. ತಾಲ್ಲೂಕಿನಲ್ಲಿ 875 ಎಕರೆ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಕೃಷಿ ಇಲಾಖೆಯ ಪ್ರಕಾರ ತಾಲ್ಲೂಕಿನಲ್ಲಿ 350 ಹೆಕ್ಟೇರ್ ಬಿತ್ತನೆಯ ಗುರಿ ಇದೆ. ಸುಮಾರು ೮೦೦ ಎಕೆರೆಯಲ್ಲಿ ಬಿತ್ತನೆಯಾಗಿದೆ.

ಕಸಬಾ, ಹಂದನಕೆರೆ, ಶೆಟ್ಟಿಕೆರೆ ಹೋಬಳಿಗಳ ಕೆಲ ರಾಗಿ ತಾಕುಗಳಲ್ಲಿ ಸಜ್ಜೆ, ಜೋಳ, ಅಲಸಂದೆ ಅಕ್ಕಡಿಗಳ ಮಧ್ಯೆ ವಿರಳವಾಗಿ ಹುಚ್ಚೆಳ್ಳು ಇಣುಕುತ್ತಿದೆ. ಈ ಬಾರಿ ತಡವಾಗಿ ಮಳೆ ಬಂದದ್ದರಿಂದ ಬಿತ್ತನೆ ತಡವಾಗಿದೆ. ಆದ್ದರಿಂದ ಇರುವ ಹುಚ್ಚೆಳು ಗಿಡಗಳು ಸಹ ಈವರೆಗೆ ಹೂವು ಮುಡಿದಿಲ್ಲ.

‘ಹುಚ್ಚೆಳ್ಳು ಬೆಳೆ ಹೊಲಕ್ಕೆ ಓಲೆ ಇದ್ದಂತೆ. ಅದಕ್ಕೆ ದುಂಬಿಗಳನ್ನು ಆಕರ್ಷಿಸುವ ಶಕ್ತಿ ಇದೆ. ಇದನ್ನು ಮಿಶ್ರ ಬೆಳೆಯಾಗಿ  ಬಿತ್ತುವುದರಿಂದ ಪರಾಗಸ್ಪರ್ಶ ಕ್ರಿಯೆ ಸರಾಗವಾಗಿ ನಡೆದು ಇಳುವರಿ ಹೆಚ್ಚುತ್ತದೆ. ಇದನ್ನು ಬಡವರ ತುಪ್ಪ ಎಂದು ಕರೆಯಲಾಗುತ್ತದೆ. ಇದರಲ್ಲಿ ಇರುವ ‘ಕ್ರ್ಯೂಸ್ ಆಸಿಡ್ ಹಾಗೂ ಗ್ಲೂಕೋಸೈನಲೇಟ್’ ಬಾಣಂತಿಯರಿಗೆ ಉಪಯೋಗಕಾರಿ. ಸಜ್ಜೆ, ಜೋಳ ಮತ್ತು ರಾಗಿ ರೊಟ್ಟಿ ಜತೆ ಹುಚ್ಚೆಳ್ಳು ಚಟ್ನಿ ಸವಿಗೆ ಸಾಟಿ ಇಲ್ಲ. ಇದಕ್ಕೆ ಪ್ರಪಂಚದ ಮೊದಲ ಖಾದ್ಯ ತೈಲ ಎಂಬ ಹೆಗ್ಗಳಿಕೆ ಇದೆ’ ಎಂದು ಬರಕನಹಾಳ್ ತಾಂಡ್ಯದ ಪೀರಾನಾಯ್ಕ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT