ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಹಗರಣ ತನಿಖೆಗೆ ಉಪಸಮಿತಿ ರಚನೆ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಿಂಡಿಕೇಟ್‌ ಸಮಿತಿ ತೀರ್ಮಾನ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿ: ಬೋಧಕೇತರ ಸಿಬ್ಬಂದಿ ನೇಮ­­ಕಾತಿಗೆ ಒಪ್ಪಿಗೆ ನೀಡಲು ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌­ಸಿಯು) ಸಿಂಡಿಕೇಟ್ ಸಮಿತಿ ಆಕ್ಷೇಪಿಸಿದೆ. ಅಲ್ಲದೆ, ನಿಯಮ ಉಲ್ಲಂಘಿಸಿ ನೇಮ­ಕಾತಿ ಮಾಡಿಕೊಳ್ಳಲಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆಗೆ ಉಪ ಸಮಿತಿ ರಚಿ­ಸಲು ನಿರ್ಧರಿಸಿದೆ.

ಹೀಗಾಗಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ, ತರಾತುರಿಯಲ್ಲಿ ಅಭ್ಯ­ರ್ಥಿ­­ಗಳಿಗೆ ನೇಮಕಾತಿ ಆದೇಶ ನೀಡಿದ ಹಿಂದಿನ ಕುಲಪತಿ ಪ್ರೊ. ಬಿ.­ಆರ್‌. ಅನಂತನ್‌ ಹಾಗೂ ಕೆಲವು ಅಧಿ­ಕಾರಿ­ಗಳ ಮೇಲೆ  ‘ತೂಗು ಕತ್ತಿ’ ತಿರು­ಗಲು ಶುರುವಾಗಿದೆ. ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾ­­ಯಕರು, ಕಂಪ್ಯೂಟರ್‌ ಆಪ­ರೇ­ಟರ್‌ ಸೇರಿದಂತೆ ಸುಮಾರು 130 ಬೋಧ­ಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ­ಯಲ್ಲಿ ಪಾರದರ್ಶಕತೆ ಕೊರತೆ­ಯಿದೆ, ಪಕ್ಷಪಾತ  ಹಾಗೂ ಭ್ರಷ್ಟಾಚಾರ ನಡೆ­ದಿದೆ ಎಂಬ ಆರೋಪ ಕೇಳಿ­ಬಂದಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ರಾಜ್ಯ ಸರ್ಕಾರವು ಈ ಹಿಂದೆ ಎರಡು ಬಾರಿ ವಿಶ್ವ­ವಿದ್ಯಾ­ಲಯಕ್ಕೆ ನಿರ್ದೇಶನ ನೀಡಿತ್ತು.

‘ರಾಜ್ಯಪಾಲರ ನಿರ್ದೇಶನದಂತೆ ಕುಲ­­ಪತಿಗಳು ನಿವೃತ್ತಿಯಾಗುವ ಮೂರು ತಿಂಗಳು ಮೊದಲು ನೇಮಕಾತಿ ಸೇರಿ­ದಂತೆ ಯಾವುದೇ ಪ್ರಮುಖ ನಿರ್ಧಾ­ರ­ಗಳನ್ನು ತೆಗೆದುಕೊಳ್ಳಬಾರದು ಎಂದು ಸೂಚಿಸಲಾಗಿದೆ. ಹೀಗಿದ್ದರೂ ಜೂ. 16ರಂದು ಸಿಂಡಿಕೇಟ್‌ ಸಭೆ ಕರೆದು ನೇಮಕಾತಿಗೆ ಅನುಮೋದನೆ ಪಡೆ­ಯಲು ಯತ್ನಿಸಲಾಗಿತ್ತು ಎಂದು ತಿಳಿದು ಬಂದಿದೆ. ನೇಮಕಾತಿ ಆದೇಶ ನೀಡುವ ಕುರಿತ ವಿಷಯವನ್ನು ಮಂಡಿ­­ಸ­ಬಾ­ರದು. ಈ ಪತ್ರವನ್ನು ಸಿಂಡಿಕೇಟ್‌ ಗಮ­ನಕ್ಕೆ ತರಬೇಕು. ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ಕುಲ­ಸಚಿ­ವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖ­ಲಿಸಿ ಶಿಸ್ತು ಕ್ರಮ ಕೈಗೊಳ್ಳಲಾ­ಗು­ವುದು’ ಎಂದು ಉನ್ನತ ಶಿಕ್ಷಣ ಇಲಾಖೆ­ಯಿಂದ ಜೂ. 16ರಂದು ಪತ್ರ ಬಂದಿತ್ತು. ಹೀಗಿದ್ದರೂ ಅಂದಿನ ಕುಲಪತಿ ಪ್ರೊ. ಅನಂತನ್‌ ಅವರು ಅದೇ ದಿನ ನಡೆದ ಸಿಂಡಿ­­­­ಕೇಟ್‌ ಸಭೆ­ಯಲ್ಲಿ ನೇಮಕಾತಿ ಮಾಡಿ­­­­­ಕೊಳ್ಳಲು ಅನುಮೋದನೆ ಪಡೆ­ದು­­­­ಕೊಂಡಿದ್ದರು. ಬಳಿಕ ನೇಮಕಾತಿ ಆದೇಶ­­ವನ್ನೂ ಅಭ್ಯರ್ಥಿಗಳಿಗೆ ಕೊಡಿಸಿ­­ದ್ದರು.

‘ಸೆಪ್ಟೆಂಬರ್‌ 29ರಂದು ನಡೆದ ಸಿಂಡಿ­ಕೇಟ್‌ ಸಭೆಯಲ್ಲಿ ಬೋಧ­ಕೇ­ತರ ಸಿಬ್ಬಂದಿ ನೇಮಕಾತಿ ಮಾಡಿ­ಕೊಂಡಿ­ರುವ ಕಡ­­ತಕ್ಕೆ ಮಂಜೂರಾತಿ ನೀಡುವಂತೆ ಕೋರ­­­ಲಾಗಿದೆ. ನೇಮಕಾತಿ ಆದೇಶ ನೀಡ­ದಂತೆ ಸರ್ಕಾರದಿಂದ ಬಂದ ಪತ್ರವನ್ನು ಸಭೆಯ ಗಮನಕ್ಕೆ ತರದೇ ನೇಮಕಾತಿ ಮಾಡಿ­­ಕೊಳ್ಳಲಾಗಿದೆ. ಹೀಗಾಗಿ ನೇಮ­ಕಾತಿ ಪ್ರಕ್ರಿಯೆ ಸಮರ್ಪಕವಾಗಿಯದೇ ಎಂಬ ಬಗ್ಗೆ ಮೊದಲು ತನಿಖೆಯಾಗಲಿ. ಸಮ­ರ್ಪಕವಾಗಿದ್ದರೆ ಆ ಬಳಿಕ ಇದಕ್ಕೆ ಅನುಮೋದನೆ ನೀಡಲಾಗುವುದು’ ಎಂದು ಕೆಲವು ಸದಸ್ಯರು ಹೇಳುತ್ತಿದ್ದಾರೆ.
ಹೀಗಾಗಿ ನೇಮಕಾತಿ ಕುರಿತು ತನಿಖೆ ನಡೆಸಲು ಸಿಂಡಿಕೇಟ್‌ ಸದಸ್ಯರಾದ ನೀತಾ ವೈ. ಪಾಟೀಲ ಅಧ್ಯಕ್ಷತೆ­ಯಲ್ಲಿ ಉಪ ಸಮಿತಿ ರಚಿಸಲಾಗಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಿಂಡಿಕೇಟ್‌ ಒಪ್ಪಿಗೆ ಮೊದಲೇ ನೇಮಕ!
ಬೆಳಗಾವಿ:
ಸಿಂಡಿಕೇಟ್‌ ಅನುಮೋದನೆ ಸಿಗುವ ಮೊದಲೇ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಜೂ. 16ರ ಸಿಂಡಿಕೇಟ್‌ ಸಭೆಯಲ್ಲಿ ನೇಮಕಾತಿಗೆ ಮಾತ್ರ ಅನುಮೋದನೆ ಪಡೆಯಲಾಗಿತ್ತು. ಆದರೆ, ಆಗಸ್ಟ್‌ 19ರಂದು ನಿವೃತ್ತರಾಗಲಿದ್ದ ಪ್ರೊ. ಅನಂತನ್‌ ಅವರು ಸಿಬ್ಬಂದಿ ನೇಮಕ ಮಾಡಿಕೊಂಡ ಕಡತಕ್ಕೆ ಸಿಂಡಿಕೇಟ್‌ನ ಅನುಮೋದನೇ ಪಡೆಯದೇ ಜುಲೈ 1 ರಂದು 129 ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ಕೊಡಿಸಿದ್ದಾರೆ. ಈಗಾಗಲೇ ಅವರೆಲ್ಲ ಕೆಲಸಕ್ಕೆ ಹಾಜರಾಗಿದ್ದು ಸಂಬಳವನ್ನೂ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಿಂಡಿಕೇಟ್‌ ನಿರ್ಧಾರದಂತೆ ಕ್ರಮ’

ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಎರಡು ವರ್ಷ­ಗಳ ಹಿಂದೆಯೇ ಆರಂಭವಾಗಿತ್ತು. ಚುನಾವಣೆ ನೀತಿ ಸಂಹಿತೆ ಸೇರಿ-­ದಂತೆ ಕೆಲವು ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಕಳೆದ ಸಿಂಡಿ­ಕೇಟ್‌ ಸಭೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಅನು­ಮೋ­ದನೆ ಸಿಕ್ಕಿತ್ತು. ಆದರೆ, ಅಂದಿನ ಕುಲಪತಿಗಳ ಅಧಿ­ಕಾರಾ­ವಧಿ ಮುಗಿಯುತ್ತಿರುವುದರಿಂದ ಸಿಬ್ಬಂದಿ ನೇಮಕಾತಿ ಮಾಡಿ­ಕೊಳ್ಳ­­­ಬಾರದು ಎಂದು ಸಭೆಯ ನಂತರ ಸರ್ಕಾರದಿಂದ ಆದೇಶ ಬಂದಿತ್ತು. ಸರ್ಕಾರದಿಂದ ಪತ್ರ ಬಂದಿರುವುದರಿಂದ ಈಗ ಸಿಂಡಿಕೇಟ್‌ ಸದ­ಸ್ಯರು ನೇಮಕಾತಿಗೆ ಆಕ್ಷೇಪಿಸಿದ್ದಾರೆ. ಈ ಕುರಿತ ಕಡತ ಪರಿಶೀಲಿಸಲು ಸಿಂಡಿಕೇಟ್‌ ಸದ­ಸ್ಯರನ್ನು ಒಳಗೊಂಡ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಅದು ನೀಡುವ ವರದಿಆಧರಿಸಿ ಸಿಂಡಿಕೇಟ್‌ ಕೈಗೊಳ್ಳುವ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. 
– ಪ್ರೊ. ದಶರಥ ಅಲಬಾಳ,ಕುಲಪತಿ, ಆರ್‌ಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT