ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾ ಎಬೋಲಾ ಮುಕ್ತ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಅಬುಜಾ (ಎಎಫ್‌ಪಿ): ನೈಜೀರಿಯಾ ಎಬೋಲಾ ಮುಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿ­ಸಿದೆ. ಕಳೆದ 42 ದಿನಗಳಲ್ಲಿ ಅಲ್ಲಿ ಯಾವುದೇ ಎಬೋಲಾ ಪ್ರಕರಣ ವರದಿಯಾಗಿಲ್ಲ. ಹಾಗಾಗಿ ನೈಜೀರಿಯಾ­ದಲ್ಲಿ ಎಬೋಲಾ ಇಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ.

‘ನೈಜೀರಿಯಾ ಎಬೋಲಾ ಸೋಂಕನ್ನು ಹಿಮ್ಮೆಟ್ಟಿಸಿದೆ. ಎಬೋಲಾ ವೈರ­ಸನ್ನು ತಡೆಯುವುದಕ್ಕೆ ಸಾಧ್ಯ ಎಂಬು­ದನ್ನು ಜಗತ್ತಿಗೆ ತೋರಿಸಿದ ದೊಡ್ಡ ಯಶೋಗಾಥೆ ಇದು’ ಎಂದು ಡಬ್ಲ್ಯುಎಚ್ಒ ಪ್ರತಿನಿಧಿ ರುಯಿ ಗಾಮಾ ವಾಸ್‌ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಮಾರಕ ಎಬೋಲಾ ಸೋಂಕಿನಿಂದಾಗಿ ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ 4,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗಲಿತ್ತು. ಎಬೋಲಾದಿಂದ ತತ್ತರಿಸಿದ್ದ ಸೆನೆಗಲ್‌ ದೇಶ ಕೂಡ ಈ ಸೋಂಕಿ­ನಿಂದ ಮುಕ್ತವಾಗಿದೆ ಎಂದು ಶುಕ್ರ­ವಾರ ಘೋಷಿಸಲಾಗಿದೆ.

ಸ್ಪೈನ್‌, ಅಮೆರಿಕ ಮುಂತಾದ ದೇಶ­ಗಳಲ್ಲಿ ಕೂಡ ಎಬೋಲಾದ ಕೆಲವು ಪ್ರಕರಣ­ಗಳು ವರದಿ­ಯಾಗಿ­ದ್ದವು. ಹಾಗಾಗಿ ಇಡೀ ಜಗತ್ತಿಗೆ ಸೋಂಕು ವ್ಯಾಪಿ­ಸುವ ಭೀತಿಯೂ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT