ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಟ್‌ ರೈಡರ್ಸ್‌ ಶುಭಾರಂಭ

ಮಿಂಚಿದ ಕಾಲಿಸ್‌, ಸುನಿಲ್‌; ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ಗೆ ಆಘಾತ
Last Updated 16 ಏಪ್ರಿಲ್ 2014, 19:44 IST
ಅಕ್ಷರ ಗಾತ್ರ

ಅಬುಧಾಬಿ (ಪಿಟಿಐ): ಜಾಕ್‌ ಕಾಲಿಸ್‌ (72), ಮನೀಷ್‌ ಪಾಂಡೆ (64) ಹಾಗೂ ಸುನಿಲ್‌ ನಾರಾಯಣ್‌ (20ಕ್ಕೆ4) ಅವರ ನೆರವಿನಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್) ತಂಡ ಐಪಿಎಲ್‌ ಟ್ವೆಂಟಿ-20 ಏಳನೇ ಋತುವಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಅಬುಧಾಬಿಯ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆಕೆಆರ್‌ ತಂಡದವರು ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ಗೆ ಆಘಾತ ನೀಡಿದರು. ಮೊದಲು ಬ್ಯಾಟ್‌ ಮಾಡಿದ ಗೌತಮ್‌ ಗಂಭೀರ್‌ ಬಳಗ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 163 ರನ್‌ ಪೇರಿಸಿತು. ಈ ಗುರಿಗೆ ಉತ್ತರವಾಗಿ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಗಳಿಸಿದ್ದು ಕೇವಲ 122 ರನ್‌.

ಕಾಲಿಸ್‌, ಪಾಂಡೆ ಆಸರೆ: ಟಾಸ್‌ ಗೆದ್ದ ನೈಟ್‌ ರೈಡರ್ಸ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ನಾಯಕ ಗಂಭೀರ್‌ ಶೂನ್ಯಕ್ಕೆ ಔಟಾದರು. ಆದರೆ ಕಾಲಿಸ್‌ ಮತ್ತು ಮನೀಷ್‌ ಪಾಂಡೆ ಎರಡನೇ ವಿಕೆಟ್‌ಗೆ 131 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಆರಂಭದ ‘ಪವರ್‌ ಪ್ಲೇ’ ಅವಧಿಯಲ್ಲಿ ನೈಟ್‌ ರೈಡರ್ಸ್‌ ಗಳಿಸಿದ್ದು 31 ರನ್‌ ಮಾತ್ರ. 10 ಓವರ್‌ಗಳು ಕೊನೆಗೊಂಡಾಗ ತಂಡ 63 ರನ್‌ ಗಳಿಸಿತ್ತು.

ಆ ಬಳಿಕ ತಂಡ ವೇಗವಾಗಿ ರನ್‌ ಪೇರಿಸಿತು. ಕೊನೆಯ ಆರು ಓವರ್‌ಗಳಲ್ಲಿ 73 ರನ್‌ ಬಂದವು. ಮಾಲಿಂಗ (23ಕ್ಕೆ 4) ಮತ್ತು ಜಹೀರ್‌ (23ಕ್ಕೆ 1) ಅವರನ್ನು ಹೊರತುಪಡಿಸಿ ಇಂಡಿಯನ್ಸ್‌ ತಂಡದ ಇತರ ಬೌಲರ್‌ಗಳು ಪ್ರಭಾವಿ ಎನಿಸಲಿಲ್ಲ.

46 ಎಸೆತಗಳನ್ನು ಎದುರಿಸಿದ ಕಾಲಿಸ್‌ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸಿಡಿಸಿದರು. 34 ರನ್‌ ಗಳಿಸಿದ್ದ ವೇಳೆ ಅವರಿಗೆ ಜೀವದಾನ ಲಭಿಸಿತ್ತು. ಕೀರನ್‌ ಪೊಲಾರ್ಡ್‌ ಓವರ್‌ನಲ್ಲಿ ಲಸಿತ್‌ ಮಾಲಿಂಗ ಸುಲಭ ಕ್ಯಾಚ್‌ ಕೈಚೆಲ್ಲಿದರು. ಅದರ ಲಾಭವನ್ನು ಬಳಸಿಕೊಂಡು ಅವರು ನೈಟ್‌ ರೈಡರ್ಸ್‌ ತಂಡದ ಮೊತ್ತ ಹಿಗ್ಗಿಸಿದರು. ಪ್ರಗ್ಯಾನ್‌ ಓಜಾ ಓವರ್‌ನಲ್ಲಿ ಎರಡು ಸಿಕ್ಸರ್‌ ಹಾಗೂ ಒಂದು ಬೌಂಡರಿ ನೆರವಿನಿಂದ 20 ರನ್‌ ಕಲೆಹಾಕಿದ ಕಾಲಿಸ್‌ ತಮ್ಮ ಸಾಮರ್ಥ್ಯ ಇನ್ನೂ ಕುಗ್ಗಿಲ್ಲ ಎಂಬುದನ್ನು ತೋರಿಸಿಕೊಟ್ಟರು.

ಅವರಿಗೆ ಕರ್ನಾಟಕದ ಮನೀಷ್‌ ಪಾಂಡೆ ಉತ್ತಮ ಬೆಂಬಲ ನೀಡಿದರು. 53 ಎಸೆತ ಎದುರಿಸಿದ ಪಾಂಡೆ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಿಡಿಸಿದರು. ಪಾಂಡೆ ವಿಕೆಟ್‌ ಪಡೆದ ಮಾಲಿಂಗ ಈ ಜೊತೆಯಾಟ ಮುರಿದರು. ರಾಬಿನ್‌ ಉತ್ತಪ್ಪ ಮತ್ತು ಶಕೀಬ್‌ ರನ್‌ ವೇಗ ಹೆಚ್ಚಿಸುವ ಭರದಲ್ಲಿ ಔಟಾದರು.

ಆರಂಭಿಕ ಆಘಾತ: ಸವಾಲಿನ ಗುರಿ ಎದುರು ಮುಂಬೈ ಇಂಡಿಯನ್ಸ್‌ ಆರಂಭಿಕ ಬ್ಯಾಟ್ಸ್‌ಮನ್‌ ಮೈಕ್‌ ಹಸ್ಸಿ ಅವರನ್ನು ಬೇಗನೇ ಕಳೆದುಕೊಂಡಿತು. ಈ ತಂಡದ ಅಂಬಟಿ ರಾಯುಡು (48; 40 ಎ., 4 ಬೌಂ.) ಆಸರೆಯಾದರು. ಅವರು ಆದಿತ್ಯ ತಾರೆ ಹಾಗೂ ನಾಯಕ ರೋಹಿತ್‌ ಶರ್ಮ ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಇದಕ್ಕೆ ಕಾರಣ ಕೆಕೆಆಆರ್‌ ತಂಡದ ಆಫ್‌ ಸ್ಪಿನ್ನರ್‌ ಸುನಿಲ್‌ ನಾರಾಯಣ್‌ ಅವರ ಪರಿಣಾಮಕಾರಿ ಬೌಲಿಂಗ್‌.

ಸ್ಕೋರ್ ವಿವರ:
ಕೋಲ್ಕತ್ತ ನೈಟ್‌ ರೈಡರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 163

ಗೌತಮ್‌ ಗಂಭೀರ್‌ ಬಿ ಲಸಿತ್‌ ಮಾಲಿಂಗ  00
ಜಾಕ್‌ ಕಾಲಿಸ್‌ ಸಿ ಆ್ಯಂಡರ್‌ಸನ್‌ ಬಿ ಲಸಿತ್‌ ಮಾಲಿಂಗ  72
ಮನೀಷ್‌ ಪಾಂಡೆ ಬಿ ಲಸಿತ್‌ ಮಾಲಿಂಗ  64
ರಾಬಿನ್‌ ಉತ್ತಪ್ಪ ಸಿ ರೋಹಿತ್‌ ಬಿ ಜಹೀರ್‌ ಖಾನ್‌  01
ಯೂಸುಫ್‌ ಪಠಾಣ್‌ ಔಟಾಗದೆ  04
ಶಕೀಬ್‌ ಅಲ್‌ ಹಸನ್‌ ಸಿ ರೋಹಿತ್‌ ಬಿ ಲಸಿತ್ ಮಾಲಿಂಗ  01
ಸೂರ್ಯಕುಮಾರ್‌ ಯಾದವ್‌ ಔಟಾಗದೆ  13

ಇತರೆ: (ಲೆಗ್‌ಬೈ-4, ವೈಡ್‌-4)  08
ವಿಕೆಟ್‌ ಪತನ: 1-4 (ಗಂಭೀರ್‌; 1.4), 2-135 (ಪಾಂಡೆ; 16.6), 3-144 (ರಾಬಿನ್‌; 17.6), 4-145 (ಕಾಲಿಸ್‌; 18.2), 5-149 (ಶಕೀಬ್‌; 18.6)
ಬೌಲಿಂಗ್‌: ಜಹೀರ್‌ ಖಾನ್‌ 4-0-23-1, ಲಸಿತ್‌ ಮಾಲಿಂಗ 4-0-23-4, ಕೋರಿ ಆ್ಯಂಡರ್‌ಸನ್‌ 3-0-33-0, ಪ್ರಗ್ಯಾನ್‌ ಓಜಾ 4-0-36-0, ಹರಭಜನ್‌ ಸಿಂಗ್‌ 3-0-25-0, ಕೀರನ್‌ ಪೊಲಾರ್ಡ್‌ 2-0-19-0

ಮುಂಬೈ ಇಂಡಿಯನ್ಸ್‌  20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 122
ಮೈಕ್‌ ಹಸ್ಸಿ ಬಿ ಸುನಿಲ್‌ ನಾರಾಯಣ್‌  03
ಆದಿತ್ಯ ತಾರೆ ಸಿ ಆ್ಯಂಡ್‌ ಬಿ ಶಕೀಬ್‌ ಅಲ್ ಹಸನ್‌  24
ಅಂಬಟಿ ರಾಯುಡು ಸ್ಟಂಪ್ಡ್‌ ರಾಬಿನ್‌ ಉತ್ತಪ್ಪ ಬಿ ಸುನಿಲ್‌ ನಾರಾಯಣ್‌ 48
ರೋಹಿತ್‌ ಶರ್ಮ ಸಿ ಜಾಕ್‌ ಕಾಲಿಸ್‌ ಬಿ ಮಾರ್ನ್‌ ಮಾರ್ಕೆಲ್‌  27
ಕೀರನ್‌ ಪೊಲಾರ್ಡ್‌ ಔಟಾಗದೆ  06
ಕೋರಿ ಆ್ಯಂಡರ್‌ಸನ್‌ ಬಿ ಸುನಿಲ್‌ ನಾರಾಯಣ್‌  02
ಹರಭಜನ್‌ ಸಿಂಗ್‌ ಬಿ ಸುನಿಲ್‌ ನಾರಾಯಣ್‌  00
ಸಿ.ಎಂ.ಗೌತಮ್‌ ಸ್ಟಂಪ್ಡ್‌ ರಾಬಿನ್‌ ಉತ್ತಪ್ಪ ಬಿ ಪಿಯೂಷ್‌್ ಚಾವ್ಲಾ  07

ಇತರೆ (ಬೈ–4, ವೈಡ್‌–1)  05
ವಿಕೆಟ್‌ ಪತನ: 1–24 (ಹಸ್ಸಿ; 4.4); 2–40 (ತಾರೆ; 7.5); 3–101 (ರೋಹಿತ್‌; 15.2); 4–106 (ರಾಯುಡು; 16.1); 5–113 (ಆ್ಯಂಡರ್‌ಸನ್‌; 18.1); 6–113 (ಹರಭಜನ್‌; 18.3); 7–122 (ಗೌತಮ್‌; 19.6)
ಬೌಲಿಂಗ್‌: ಆರ್‌.ವಿನಯ್‌ ಕುಮಾರ್‌ 2–0–15–0, ಮಾರ್ನ್‌ ಮಾರ್ಕೆಲ್‌ 4–0–16–1, ಸುನಿಲ್‌ ನಾರಾಯಣ್‌ 4–0–20–4, ಶಕೀಬ್‌ ಅಲ್‌ ಹಸನ್‌ 4–0–29–1, ಜಾಕ್‌ ಕಾಲಿಸ್‌ 3–0–23–0, ಪಿಯೂಷ್‌ ಚಾವ್ಲಾ 3–0–15–1 (ವೈಡ್‌–1)
ಫಲಿತಾಂಶ: ಕೋಲ್ಕತ್ತ ನೈಟ್‌ ರೈಡರ್ಸ್‌ಗೆ 41 ರನ್‌ಗಳ ಜಯ ಹಾಗೂ 2 ಪಾಯಿಂಟ್‌. ಪಂದ್ಯ ಶ್ರೇಷ್ಠ: ಜಾಕ್‌ ಕಾಲಿಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT