ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳ ಛಾಯಾಚಿತ್ರ ತೆಗೆದ ವ್ಯಕ್ತಿ ಬಂಧನ

Last Updated 25 ಜನವರಿ 2015, 20:38 IST
ಅಕ್ಷರ ಗಾತ್ರ

ಬೆಂಗಳೂರು: ಕುಟುಂಬ ಸದಸ್ಯರ ಜತೆ ಚಿನ್ನಾಭರಣ ಮಳಿಗೆಗೆ ಬಂದಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯೊಬ್ಬರ ಛಾಯಾಚಿತ್ರ ತೆಗೆದ ಆರೋಪದ ಮೇಲೆ ಮಳಿಗೆಯ ನೌಕರನನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ನ್ಯಾಯಮೂರ್ತಿಗಳು ಆಭರಣ ಖರೀದಿಗೆಂದು ಶನಿವಾರ ಸಂಜೆ ಮಲ್ಲೇಶ್ವರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗೆ ಬಂದಿದ್ದರು. ಈ ವೇಳೆ  ಅಲ್ಲಿನ ನೌಕರನೊಬ್ಬ ಮೊಬೈಲ್‌ನಿಂದ ಅವರ ಛಾಯಾಚಿತ್ರ ತೆಗೆದಿದ್ದಾನೆ. ಇದನ್ನು ಗಮನಿಸಿದ ನ್ಯಾಯಮೂರ್ತಿಗಳು, ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಮಳಿಗೆಗೆ ತೆರಳಿದ ಪೊಲೀಸರು, ಆ ನೌಕರನನ್ನು ಬಂಧಿಸಿದ್ದಾರೆ. ‘ಸುಮ್ಮನೆ ಛಾಯಾಚಿತ್ರ ತೆಗೆದೆ. ಅವರು ನ್ಯಾಯಮೂರ್ತಿಗಳು ಎಂದು ಗೊತ್ತಿರಲಿಲ್ಲ’ ಎಂದು ಆತ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT