ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಬೇರು ಬಲುಗಟ್ಟಿ

Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಅಕ್ರಮ ಆಸ್ತಿ ಸಂಪಾದನೆ ಆರೋಪದ ಪ್ರಕರಣದಲ್ಲಿ ಸುದೀರ್ಘ 18 ವರ್ಷಗಳ ಕಾಲ ನ್ಯಾಯ ಸಮರ ನಡೆಸಿದ ತಮಿಳುನಾಡಿನ ಪ್ರಭಾವಿ ರಾಜಕಾರಣಿ ಜೆ. ಜಯಲಲಿತಾ ಅವರು ಕೊನೆಗೂ ಜೈಲು ಸೇರಿರುವುದು ನ್ಯಾಯಾಂಗ ವ್ಯವಸ್ಥೆಗೆ ಸಿಕ್ಕ ಜಯವಾಗಿದೆ.

1996ರಲ್ಲಿ ಅವರ ಮನೆಯ ಮೇಲೆ ದಾಳಿ ಮಾಡಿದಾಗ 28 ಕೆ.ಜಿ.  ಚಿನ್ನ, 1,165 ಕೆ.ಜಿ. ಬೆಳ್ಳಿ, ಅತ್ಯಂತ ಬೆಲೆ ಬಾಳುವ 91 ವಾಚು­ಗಳು, 10 ಸಾವಿರದಷ್ಟು ಸೀರೆ, 750 ಜೋಡಿ ಚಪ್ಪಲಿಗಳು ಸಿಕ್ಕಿದ್ದನ್ನು ಕಂಡು ಜನ ಗಾಬರಿ­ಗೊಂಡಿದ್ದರು. ಈ ಪ್ರಕರಣ ದಾಖಲಾದಾಗ ‘ಆರೋಪ ಸಾಬೀತಾಗುವುದಿಲ್ಲ ಬಿಡಿ’ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು.

ನಮ್ಮ ನ್ಯಾಯಾಂಗ ವ್ಯವಸ್ಥೆಯ ಬೇರುಗಳು ಗಟ್ಟಿಯಾಗಿರುವುದರಿಂದ ಪ್ರಭಾವಿ ರಾಜಕಾ­ರಣಿಗೆ ಶಿಕ್ಷೆ ಆಗಿದೆ. ದೇಶದಲ್ಲಿ ಇಂತಹ ಅನೇಕ ಪ್ರಕರಣಗಳ ವಿಚಾರಣೆ ನಡೆ­ಯು­ತ್ತಿದೆ. ಅವು­ಗ­ಳಿಗೂ ಅಂತ್ಯ ಬಂದೇ ಬರು­ತ್ತದೆ. ಜಯ­ಲಲಿತಾ ಅಕ್ರಮ ಗಳಿಕೆ, ತಾನ್ಸಿ ಭೂ ಅಕ್ರಮ, 2ಜಿ ಹಗ­ರಣ­ದಂತಹ  ಅನೇಕ ಪ್ರಕರಣಗಳನ್ನು ಕೆದಕುವ ಧೈರ್ಯ ತೋರಿದ ಸುಬ್ರಮಣಿಯನ್ ಸ್ವಾಮಿ ಅವರನ್ನು ಅಭಿ­ನಂದಿ­­ಸಲೇ­ಬೇಕು.

ಈ ಪ್ರಕರಣದಲ್ಲಿ ಐತಿಹಾ­ಸಿಕ ತೀರ್ಪು ನೀಡಿದ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಜಾನ್ ಮೈಕಲ್ ಡಿ ಕುನ್ಹ ಅವರ ನ್ಯಾಯ ನಿಷ್ಠುರ ನಿಲುವಿಗೆ  ಜೈಹೋ ಹೇಳಲೇಬೇಕು. ಈ ತೀರ್ಪು ನೋಡಿದ ಮೇಲಾ­ದರೂ ನಮ್ಮ ರಾಜಕಾರಣಿಗಳು ಬುದ್ಧಿ ಕಲಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT