ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ವಿವರಣೆ ಬಯಸಿದ ಹೈಕೋರ್ಟ್

ಲಖ್ವಿ ಬಂಧನ ಆದೇಶ
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್‌ಎಸ್): 2008ರ ಮುಂಬೈ ದಾಳಿಯ ರೂವಾರಿ ಲಖ್ವಿ ಬಂಧನದ ಆದೇಶದ ಬಗ್ಗೆ ವಿವರಣೆ ನೀಡುವಂತೆ ಇಸ್ಲಾಮಾ­ಬಾದ್ ಹೈಕೋರ್ಟ್ ಸೋಮವಾರ ಫೆಡರಲ್ ಮತ್ತು ಜಿಲ್ಲಾ ನ್ಯಾಯಾಧೀಶ­ರಿಗೆ ನೋಟಿಸ್ ನೀಡಿದೆ.

ತಮ್ಮ ಕಕ್ಷಿದಾರರ ಬಂಧನಕ್ಕೆ  ಮೂರನೇ ಬಾರಿಗೆ ಫೆಡರಲ್ ಮತ್ತು ಜಿಲ್ಲಾ ನ್ಯಾಯಾಲಯವು ಆದೇಶ ಹೊರ­ಡಿ­ಸಿವೆ ಎಂದು ಲಖ್ವಿ ಪರ ವಕೀಲ­ರಾದ ರಿಜ್ವಾನ್ ಅಬ್ಬಾಸಿ ನ್ಯಾಯ-­ಪೀಠದ ಗಮನಕ್ಕೆ ತಂದರು.

ಫೆಡರಲ್ ಮತ್ತು ಜಿಲ್ಲಾ ನ್ಯಾಯಾ­ಧೀ­ಶರಿಗೆ ಉತ್ತರಿಸುವಂತೆ ನೋಟಿಸ್ ನೀಡಿದ ನ್ಯಾಯಪೀಠವು ವಿಚಾರಣೆ­ಯನ್ನು ಇದೇ 5ಕ್ಕೆ ಮುಂದೂಡಿತು.

‘ಅನುಮತಿ ಅಗತ್ಯ’: ತನ್ನ ಅನುಮತಿ ಇಲ್ಲದೆ ಲಖ್ವಿ ವಿರುದ್ಧ ಇತರ ಯಾವುದೇ ಪ್ರಕರಣ ದಾಖಲಿಸ­ಬಾರದು ಎಂದು ಪಾಕಿಸ್ತಾನದ ಕೋರ್ಟ್‌ ಹೇಳಿದೆ.

ಲಖ್ವಿಯನ್ನು ಜೈಲಿನಲ್ಲಿಡಲು ಆತನ ವಿರುದ್ಧ ‘ತಪ್ಪು’ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಲಖ್ವಿ ಪರ ವಕೀಲರು ವಾದಿಸಿದ ನಂತರ ಕೋರ್ಟ್‌ ಈ ಆದೇಶ ಹೊರಡಿಸಿದೆ.

ಭಯೋತ್ಪಾದನೆಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯ ಲಖ್ವಿಗೆ ಕಳೆದ ಡಿಸೆಂಬರ್‌ನಲ್ಲಿ ಜಾಮೀನು ನೀಡಿತ್ತು. ಈ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತ­ಪಡಿ­ಸಿದ್ದರಿಂದ ನಂತರ ಕಾನೂನು ಸುವ್ಯವಸ್ಥೆ ಕಾಯ್ದೆ­ಯನ್ವಯ ಲಖ್ವಿ­ಯನ್ನು ಮತ್ತೆ ಬಂಧಿಸಿ ರಾವಲ್ಪಿಂಡಿ ಜೈಲಿನಲ್ಲಿ ಇಡಲಾಗಿತ್ತು. ಹೈಕೋರ್ಟ್ ಈ ಬಂಧನದ ಆದೇಶ­ ಅಮಾ­ನತು­­ಪಡಿ­ಸಿದ್ದರಿಂದ ಆರೂ­ವರೆ ವರ್ಷಗಳ ಹಿಂದಿನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖ್ವಿಯನ್ನು ಮತ್ತೆ ಬಂಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT