ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಷನಲ್‌ ಜಿಯೋಗ್ರಾಫಿಕ್‌ ಬೀ ಸ್ಪರ್ಧೆ ಭಾರತ ಮೂಲದ ರಿಷಿ ಪ್ರಥಮ

Last Updated 26 ಮೇ 2016, 19:41 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಪ್ರತಿಷ್ಠಿತ ‘ನ್ಯಾಷನಲ್ ಜಿಯೋಗ್ರಾಫಿಕ್ ಬೀ’ ಸ್ಪರ್ಧೆಯಲ್ಲಿ ಭಾರತ ಮೂಲದ 12 ವರ್ಷದ ಬಾಲಕ ರಿಷಿ ನಾಯರ್‌ ಪ್ರಥಮ ಸ್ಥಾನ ಪಡೆದಿದ್ದಾರೆ.

ನಾಯರ್‌ ₹ 50 ಸಾವಿರ ಡಾಲರ್ (ಅಂದಾಜು ₹ 33.54 ಲಕ್ಷ) ವಿದ್ಯಾರ್ಥಿ ವೇತನವನ್ನು ಬಹುಮಾನ ರೂಪದಲ್ಲಿ ಗಳಿಸಿದ್ದಾನೆ. ನ್ಯಾಷನಲ್‌ ಜಿಯೊಗ್ರಾಫಿಕ್‌ ಸೊಸೈಟಿಯಲ್ಲಿ ಆಜೀವ ಸದಸ್ಯತ್ವವನ್ನೂ  ಹೊಂದಲಿದ್ದಾನೆ.

ರಿಷಿ ತಂದೆ ಕೇರಳ ಮೂಲದವರು.   ರಿಷಿ ಈ ಸ್ಪರ್ಧೆಯನ್ನು ಗೆಲ್ಲುತ್ತಿರುವ ಫ್ಲೋರಿಡಾದ ಎರಡನೇ ವಿದ್ಯಾರ್ಥಿಯಾಗಿದ್ದಾನೆ. ಸತತ ಐದು ವರ್ಷಗಳಿಂದ ಭಾರತ ಮೂಲದವರು ಈ ಪ್ರತಿಷ್ಟಿತ ಸ್ಪರ್ಧೆಯಲ್ಲಿ ಬಹುಮಾನ ಗಳಿಸುತ್ತಿದ್ದಾರೆ. ಕಳೆದ ವರ್ಷ ಕರಣ್‌ ಮೆನನ್‌ ಈ ಸ್ಪರ್ಧೆಯಲ್ಲಿ ಜಯಗಳಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT