ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್–ಬೆಂಗಳೂರು ನೇರ ವಿಮಾನ ಸಂಚಾರ

ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದ
Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಆಕ್ಲೆಂಡ್ (ಪಿಟಿಐ): ಭಾರತ ಹಾಗೂ ನ್ಯೂಜಿಲೆಂಡ್ ದೇಶಗಳ ನಡುವೆ ನೇರ ವಿಮಾನಯಾನ ಸೌಲಭ್ಯ ಕಲ್ಪಿಸುವ ಮಹತ್ವದ ಒಪ್ಪಂದಕ್ಕೆ ಉಭಯ ದೇಶಗಳು ಸೋಮವಾರ ಸಹಿ ಹಾಕಿವೆ.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ನ್ಯೂಜಿಲೆಂಡ್ ಪ್ರಧಾನಿ ಜಾನ್ ಕೇ ಅವರು ಈ ಒಪಂದಕ್ಕೆ ಸಾಕ್ಷಿಯಾದರು. ಕೋಡ್‌ ಶೇರಿಂಗ್‌ ಅಂದರೆ ಒಂದೇ ವಿಮಾನವನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ದೇಶಗಳು ಬಳಕೆ ಮಾಡುವ ವ್ಯವಸ್ಥೆ.

ಏರ್ ನ್ಯೂಜಿಲೆಂಡ್, ಏರ್ ಇಂಡಿಯಾ ಹಾಗೂ ಸಿಂಗಪೂರ್‌ ಏರ್‌ಲೈನ್ಸ್‌ಗಳು ಭಾರತ–ನ್ಯೂಜಿಲೆಂಡ್ ಮಧ್ಯೆ ನೇರ ವಿಮಾನ ಸಂಪರ್ಕವನ್ನು ಕಲ್ಪಿಸಲಿವೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿ, ಕೋಲ್ಕತ್ತ, ಮುಂಬೈ ಹಾಗೂ ನವದೆಹಲಿಗೆ  ನ್ಯೂಜಿಲೆಂಡ್ ಏರ್‌ಲೈನ್ಸ್‌ಗೆ ವಿಮಾನಸೇವೆ ಕಲ್ಪಿಸಲು ಅವಕಾಶವಿದೆ ಎಂದು ನ್ಯೂಜಿಲೆಂಡ್ ಸಾರಿಗೆ ಸಚಿವ ಸಿಮನ್ ಬ್ರಿಡ್ಜಸ್ ಹೇಳಿದ್ದಾರೆ.

ನೇರ ವಾಯುಯಾನ ಒಪ್ಪಂದವು ಎರಡೂ ರಾಷ್ಟ್ರಗಳ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಬ್ರಿಡ್ಜಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಮೈತ್ರಿ ವಿಸ್ತರಣೆ: ಪ್ರಣವ್
ಜಿಲೆಂಡ್ ಜತೆಗಿನ ಮೈತ್ರಿಯನ್ನು ಇನ್ನಷ್ಟು ವಿಸ್ತರಿಸಲು ಭಾರತ ಉತ್ಸುಕವಾಗಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಶಾಂತಿಯುತ ಏಷ್ಯಾ–ಪ್ಯಾಸಿಫಿಕ್ ವಲಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಸಮಪಾಲು ಹೊಂದಿವೆ ಎಂದು ಅವರು ಒತ್ತಿ ಹೇಳಿದರು. ಭದ್ರತೆ ಹಾಗೂ ಸ್ಥಿರತೆ ಸಾಧಿಸಲು ಉಭಯ ದೇಶಗಳು ಜತೆಯಾಗಿ ಕೆಲಸ ಮಾಡಲು ಸಿದ್ಧ ಎಂದರು.

‘ಎರಡೂ ದೇಶಗಳು ತಮ್ಮ ಮೈತ್ರಿಯನ್ನು ಇನ್ನಷ್ಟು ಬಲಗೊಳಿಸಲು ಇದು ಸೂಕ್ತ ಸಮಯ. ನಮ್ಮದು ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಭಾರತದ ಅಭಿವೃದ್ಧಿಯಲ್ಲಿ ಭಾಗಿಯಾಗಲು ನ್ಯೂಜಿಲೆಂಡ್‌ಗೆ  ಸಾಕಷ್ಟು ಅವಕಾಶಗಳಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT