ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಡಾನ್ ಟ್ರಸ್ಟ್ ವಿರುದ್ಧ ಸಿಐಡಿ ತನಿಖೆ

ಮಾನವ ಕಳ್ಳಸಾಗಾಣಿಕೆ ಆರೋಪ
Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ನ್ಯೂಡಾನ್ ಪುನರ್ವಸತಿ ಟ್ರಸ್ಟ್‌ ಮಾನವ ಕಳ್ಳಸಾಗಾ­ಣಿಕೆಯಲ್ಲಿ ಭಾಗಿಯಾಗಿದೆ ಎಂಬ ಆರೋ­­ಪದ ಕುರಿತು ಸಿಐಡಿ ತನಿಖೆಗೆ ಆದೇ­­ಶಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಉಮಾಶ್ರೀ ತಿಳಿಸಿದರು.

ವಿಕಾಸಸೌಧದಲ್ಲಿ ಗುರುವಾರ ಪತ್ರಿ­ಕಾ­ಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ‘ಈ ಟ್ರಸ್ಟ್‌ನ ವ್ಯವ­ಸ್ಥಾಪಕ ನಿರ್ದೇಶಕಿ ರುಕ್ಸಾನಾ ಹಸನ್ ಅವರು ರಾಜ್ಯ ಮಹಿಳಾ ರಕ್ಷಣಾ ನಿಲ­ಯ­ದಲ್ಲಿದ್ದ ಅಲ್ಪಸಂಖ್ಯಾತ ಸಮುದಾ­ಯದ 15 ಮಹಿಳೆಯರನ್ನು ಕೌಶಲ ಅಭಿವೃದ್ಧಿ ತರಬೇತಿಗೆ ಕರೆದೊಯ್ದಿದ್ದರು. ಆರು ತಿಂಗಳ ಅವಧಿ ಬಳಿಕ ಈ ಮಹಿ­ಳೆ­ಯರನ್ನು ವಾಪಸ್‌ ಕಳಿಸದೇ ಇರುವುದು ಪತ್ತೆಯಾಗಿದೆ’ ಎಂದರು.

ತರಬೇತಿಗೆಂದು ಕರೆದೊಯ್ದಿದ್ದ ರೇಷ್ಮಾ ಎಂಬ ಮಹಿಳೆ ಎರಡೇ ದಿನದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತ­ಪ­ಟ್ಟಿ­ರುವುದಾಗಿ ಮಾಧ್ಯಮಗಳಲ್ಲಿ ವರದಿ­ಯಾಗಿದೆ. ಆದರೆ, ಆಕೆಯ ಸಾವಿನ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ರೇಷ್ಮಾ ಅವರನ್ನು ನಿವೃತ್ತ ಅರಣ್ಯಾ­ಧಿಕಾ­ರಿಯೊಬ್ಬರ ಮನೆಗೆ ಕೆಲಸಕ್ಕೆ ಕಳುಹಿಸ­ಲಾಗಿತ್ತು ಎಂಬ ಆರೋಪವಿದೆ. ಈ ಎಲ್ಲ ಅಂಶಗಳ ಬಗ್ಗೆಯೂ ತನಿಖೆ ನಡೆಸುವಂತೆ ಸಿಐಡಿ ಪೊಲೀಸರನ್ನು ಕೋರಲಾ­ಗುವುದು ಎಂದು ತಿಳಿಸಿದರು.

ಮಾಣಿಪ್ಪಾಡಿ ಮನೆಕೆಲಸಕ್ಕೆ?: ನ್ಯೂಡಾನ್ ಪುನರ್ವಸತಿ ಟ್ರಸ್ಟ್‌ನಲ್ಲಿದ್ದ ಸಲ್ಮಾ ಎಂಬ ಮಹಿಳೆ ನಾಪತ್ತೆ ಆಗಿರುವು­ದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ಸಲ್ಮಾ ಅವರನ್ನು ರಾಜ್ಯ ಅಲ್ಪಸಂಖ್ಯಾ­ತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ಮನೆಗೆ ಕೆಲಸಕ್ಕೆ ಕಳುಹಿಸಲಾಗಿತ್ತು ಎಂಬ ಆರೋಪದ ಬಗ್ಗೆ ಕೇಳಿದಾಗ, ‘ಅಂತಹ ಆರೋಪ­ವಿದೆ. ಆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಾರೆ’ ಎಂದು ಉತ್ತರಿಸಿದರು.
ನ್ಯೂಡಾನ್ ಪುನರ್ವಸತಿ ಟ್ರಸ್ಟ್‌ ಕಾನೂನು ಪ್ರಕಾರ ಕೆಲಸ ನಿರ್ವಹಿಸು­ತ್ತಿ­ರಲಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಂಸ್ಥೆಗೆ ನೋಟಿಸ್‌ ನೀಡಿದ್ದರು. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿ­ಕಾ­ರಿ­ಗಳು ಕ್ರಮ ಜರು­ಗಿ­ಸಿ­ರ­ಲಿಲ್ಲ. ಪ್ರಕ­ರ­ಣದ ಸಮಗ್ರ ತನಿಖೆ ನಡೆಸಿ ತಪ್ಪಿತ­ಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT