ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 24ರಿಂದ ಚಳಿಗಾಲದ ಸಂಸತ್‌ ಅಧಿವೇಶನ

ಸಂಪುಟ ಸಮಿತಿಯಿಂದ ರಾಷ್ಟ್ರಪತಿಗೆ ದಿನಾಂಕ ಶಿಫಾರಸು
Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಂಸತ್ತಿನ ಚಳಿಗಾಲದ ಅಧಿವೇ­ಶನ ನವೆಂಬರ್‌ 24ರಂದು ಆರಂಭಗೊಂಡು ಡಿಸೆಂಬರ್‌ 23ರವರೆಗೆ ನಡೆಯಲಿದೆ. ಅಧಿವೇಶನದಲ್ಲಿ ಹಲವು ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಚಿಂತನೆ ನಡೆಸಿದೆ.

ಗೃಹ ಸಚಿವ ರಾಜನಾಥ ಸಿಂಗ್‌ ನೇತೃತ್ವದ ಸಂಸ­ದೀಯ ವ್ಯವಹಾರಗಳ ಸಂಪುಟ ಸಮಿತಿಯು ಅಧಿವೇ­ಶ­ನದ ದಿನಾಂಕಗಳನ್ನು ರಾಷ್ಟ್ರಪತಿಗೆ ಶಿಫಾರಸು ಮಾಡಿದೆ. ಒಂದು ತಿಂಗಳ ಕಾಲ ನಡೆಯುವ ಅಧಿವೇಶನದಲ್ಲಿ 22 ದಿನ ಕಲಾಪಗಳು ನಡೆಯಲಿವೆ. ಅವುಗಳಲ್ಲಿ ನಾಲ್ಕು ದಿನಗಳನ್ನು ಖಾಸಗಿ ಸದಸ್ಯರಿಗೆ ಸಂಬಂಧಿಸಿ ಕಲಾಪಗಳಿಗೆ  ಮೀಸಲು ಇರಿಸಲಾಗಿದೆ.

ಎರಡೂ ಸದನಗಳಲ್ಲಿ ಒಟ್ಟು 67 ಮಸೂದೆಗಳು ಅಂಗೀಕಾರಕ್ಕೆ ಬಾಕಿ ಇವೆ. ರಾಜ್ಯಸಭೆಯಲ್ಲಿ 59 ಮಸೂದೆಗಳು ಬಾಕಿ ಇದ್ದರೆ ಲೋಕಸಭೆಯಲ್ಲಿ ಎಂಟು ಮಸೂದೆಗಳು ಬಾಕಿ ಇವೆ.

ಮುಖ್ಯಾಂಶಗಳು
* ಡಿಸೆಂಬರ್‌ 23ರ ವರೆಗೆ ಅಧಿವೇಶನ
* ಒಟ್ಟು 22 ದಿನದ ಕಲಾಪ
*ರಾಜ್ಯಸಭೆಯಲ್ಲಿ 58,
ಕಸಭೆಯಲ್ಲಿ 8 ಮಸೂದೆಗಳು ಅಂಗೀಕಾರಕ್ಕೆ ಬಾಕಿ
* ಕನಿಷ್ಠ 30–35 ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರದ ಚಿಂತನೆ
* ಹಿಂದಿನ ಐದು ಚಳಿಗಾಲದ ಅಧಿವೇಶನಗಳಲ್ಲಿ ಸರಾಸರಿ 22 ದಿನಗಳ ಕಲಾಪ ನಡೆದಿದೆ.

ಕನಿಷ್ಠ 30–35 ಮಸೂದೆ­ಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಪ್ರಯತ್ನಿಸ­ಲಿದೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಇದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯಲಿರುವ ಎರಡನೇ ಪ್ರಮುಖ ಅಧಿವೇಶನ­ವಾಗಿದೆ. ಹೊಸ ಲೋಕಸಭೆ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಸದಸ್ಯರ ಆಸನ ವ್ಯವಸ್ಥೆ ಇನ್ನೂ ಅಂತಿಮ­ಗೊಂಡಿಲ್ಲ. ಅಧಿವೇಶನ ಆರಂಭವಾಗುವ ಮೊದಲು ಆಸನ ವ್ಯವಸ್ಥೆಯೂ ಅಂತಿಮವಾಗುವ ನಿರೀಕ್ಷೆ ಇದೆ.

ಹಿಂದಿನ ಐದು ಚಳಿಗಾಲದ ಅಧಿವೇಶನಗಳಲ್ಲಿ ಸರಾಸರಿ 22 ದಿನಗಳ ಕಲಾಪ ನಡೆದಿದೆ. ಅದರ ಆಧಾರದಲ್ಲಿ ಈ ಬಾರಿಯ ಅಧಿವೇಶನದ ದಿನಾಂಕ ನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಣಕಾಸು ಸಚಿವ ಅರುಣ್‌ ಜೇಟ್ಲಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯ ಸದಸ್ಯರಾಗಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ­ರಾದ ಪ್ರಕಾಶ್‌ ಜಾವಡೇಕರ್‌ ಮತ್ತು ಸಂತೋಷ್‌ ಗಂಗ್ವಾರ್‌ ವಿಶೇಷ ಆಹ್ವಾನಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT