ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.10ಕ್ಕೆ ಮೊದಲ ಹೈಸ್ಪೀಡ್‌ ರೈಲು ಸಂಚಾರ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಪುರ್ತಲಾ (ಪಂಜಾಬ್‌) (ಪಿಟಿಐ): ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಾಗುವ ದೆಹಲಿ–ಆಗ್ರಾ ನಡುವಣ ಮೊದಲ ಹೈಸ್ಪೀಡ್‌ ರೈಲು ನ.10 ರಂದು  ಪ್ರಯಾಣ ಆರಂಭಿಸುವ ಸಾಧ್ಯತೆ ಇದೆ. ಕಪುರ್ತಲಾದಲ್ಲಿನ ರೈಲು ಬೋಗಿಗಳ ಕಾರ್ಖಾನೆ­ಯಲ್ಲಿ (ಆರ್‌ಸಿಎಫ್‌) ಈ ರೈಲಿನ ಬೋಗಿಗಳನ್ನು ತಯಾರಿಸುವ ಕೆಲಸ ನಡೆಯುತ್ತಿದೆ.

ಈಗಾಗಲೇ ಆರ್‌ಸಿಎಫ್‌ ನಾಲ್ಕು ಬೋಗಿಗಳನ್ನು ನಿರ್ಮಿ­ಸಿದೆ. ಇನ್ನುಳಿದ 10 ಬೋಗಿಗಳನ್ನು ನಿರ್ಮಿಸುವ ಕಾರ್ಯ ಪ್ರಗತಿ­ಯಲ್ಲಿದೆ ಎಂದು ಆರ್‌ಸಿಎಫ್‌ನ ಪ್ರಧಾನ ವ್ಯವಸ್ಥಾಪಕ ಪ್ರಮೋದ್‌ ಕುಮಾರ್‌ ಹೇಳಿದ್ದಾರೆ. ಆರ್‌ಸಿಎಫ್‌ ತಂತ್ರಜ್ಞರು ಈಗಾಗಲೇ ಸಂಶೋಧನೆ ಅಭಿವೃದ್ಧಿ ಮತ್ತು ಮಾನಕ ಸಂಸ್ಥೆ (ಆರ್‌ಡಿಎಸ್‌ಒ) ಜತೆ ಬೋಗಿ ನಿರ್ಮಾಣಕ್ಕೆ ಸಲಹೆ ಪಡೆದಿದ್ದು,  ಶತಾಬ್ಧಿ ಮತ್ತು ರಾಜಧಾನಿ ರೈಲು­ಗಳಿಗಿಂತ ಹೆಚ್ಚಿನ ವೇಗದಲ್ಲಿ ಹೈಸ್ಪೀಡ್‌ ರೈಲು ಸಾಗುವಂತೆ ಎಂಜಿನ್‌ನಲ್ಲಿ ಬದಲಾವಣೆಗಳನ್ನು ಮಾಡಲಿ­ದ್ದಾರೆ.

ಹೊಗೆ ಮತ್ತು ಬೆಂಕಿ ಕಾಣಿಸಿ­ಕೊಂಡಾಗ ಕೈಗೊಳ್ಳಬೇಕಾದ ತುರ್ತು ಕ್ರಮ, ಒಳಭಾಗದ ಬಾಗಿಲುಗಳು ಸ್ವಯಂಚಾಲಿ­ತವಾಗಿ ತೆರೆಯುವುದು ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆ­ಯನ್ನು ರೂಪಿಸಲು ಸಲಹೆ  ಪಡೆದಿದ್ದಾರೆ. ಮೊದಲ ಹೈಸ್ಪೀಡ್‌ ರೈಲಿನ ನಿರ್ಮಾಣ ವೆಚ್ಚ ಅಂದಾಜು ₨2.25 ಕೋಟಿಯಷ್ಟಾಗಲಿದೆ ಎಂದು ಕುಮಾರ್‌ ಮಾಹಿತಿ ನೀಡಿ­ದ್ದಾರೆ.

ರೈಲ್ವೆ ಸಚಿವರು ತಮ್ಮ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದಂತೆ ದೇಶದ 10 ಮಾರ್ಗಗಳನ್ನು ಹೈಸ್ಪೀಡ್‌ ರೈಲುಗಳ ಸಂಚಾರಕ್ಕೆ ಗುರುತಿಸಲಾಗಿದೆ. ಆರಂಭ ದಲ್ಲಿ ಈ ರೈಲಿನ ವೇಗ ಗಂಟೆಗೆ 160 ಕಿ.ಮೀ. ಇದ್ದು, ಸಿಗ್ನಲ್ ಮತ್ತಿತರ ವ್ಯವಸ್ಥೆಗಳನ್ನು ಮೇಲ್ದರ್ಜೆ­ಗೇರಿಸಿದ ನಂತರ ಗಂಟೆಗೆ 200 ಕಿ.ಮೀ.ಗೆ ಹೆಚ್ಚಿಸ­-ಲಾಗುತ್ತದೆ.

ರೈಲ್ವೆ ಇಲಾಖೆಯು ಈಗಾಗಲೇ ದೆಹಲಿ– ಆಗ್ರಾ ವಲಯ­ದಲ್ಲಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ರೈಲನ್ನು ಪ್ರಯೋಗಾರ್ಥವಾಗಿ ಓಡಿಸಿದೆ. ಈ ರೈಲು 200 ಕಿ.ಮೀ. ದೂರವನ್ನು 99 ನಿಮಿಷದಲ್ಲಿ ಕ್ರಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT