ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.29ರಂದು ಡಾ.ರಾಜ್‌ ಸ್ಮಾರಕ ಲೋಕಾರ್ಪಣೆ

ಪರ್ಯಾಯ ರಸ್ತೆ ಬಳಸುವಂತೆ ಮನವಿ
Last Updated 27 ನವೆಂಬರ್ 2014, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಂಠೀರವ ಸ್ಟುಡಿಯೊದಲ್ಲಿ ನಿರ್ಮಿಸಲಾಗಿರುವ ಡಾ.ರಾಜ್‌­ಕುಮಾರ್‌ ಅವರ ಸ್ಮಾರಕದ ಲೋಕಾ­ರ್ಪಣೆ ಶನಿವಾರ (ನ.29) ನಡೆಯು­ವುದರಿಂದ ವಾಹನದಟ್ಟಣೆ ತಪ್ಪಿಸಲು ಬದಲಿ ಮಾರ್ಗ ಬಳಸುವಂತೆ ನಗರ ಪೊಲೀಸ್‌ ಕಮಿಷನರ್‌ ಎಂ.ಎನ್.ರೆಡ್ಡಿ ಅವರು ಮನವಿ ಮಾಡಿದ್ದಾರೆ.

ಬೆಳಿಗ್ಗೆ 9ಕ್ಕೆ ಕಾರ್ಯಕ್ರಮ ಆರಂಭ­ವಾಗಲಿದೆ. ಚಿತ್ರರಂಗದ ಗಣ್ಯರು, ಸಚಿವರು, ಶಾಸಕರು ಹಾಗೂ ಡಾ. ರಾಜ್ ಅವರ ಅಪಾರ ಸಂಖ್ಯೆಯ ಅಭಿ­ಮಾನಿಗಳು ವಾಹನಗಳಲ್ಲಿ ಸಮಾ­ರಂಭಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ ವಾಹನ ದಟ್ಟಣೆ ತಡೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ವಾಹನ ನಿಲುಗಡೆ: ಸ್ಮಾರಕ ಎದುರಿನ ರಿಂಗ್ ರಸ್ತೆಯ ಎಡಬದಿ­ಯಲ್ಲಿ ವಾಹನ­ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ.
ಪ್ರಸಾದ್ ಸ್ಟುಡಿಯೊ ಆವರಣದಲ್ಲಿ ಗಣ್ಯ ವ್ಯಕ್ತಿಗಳ 35 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಮಾರ್ಗ ಬದಲಾವಣೆ: ಕೃಷ್ಣಾನಂದ ವೃತ್ತದ ಕಡೆಯಿಂದ ಎಫ್‌ಟಿಐ ವೃತ್ತ (ತುಮಕೂರು ರಸ್ತೆ) ಕಡೆಗೆ ಸಂಚರಿಸುವ ವಾಹನಗಳು ಕೃಷ್ಣಾನಂದ ವೃತ್ತದಲ್ಲಿ ಬಲ ತಿರುವು ಪಡೆದು ಎಂಇಐ ರಸ್ತೆ ಮೂಲಕ ತುಮಕೂರು ರಸ್ತೆ ಸೇರಬಹುದಾಗಿದೆ.

ಪೀಣ್ಯ ಕಡೆಯಿಂದ ಎಫ್‌ಟಿಐ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಪೀಣ್ಯ 2ನೇ ಹಂತದ ಸೋನಾಲ್ ಗಾರ್ಮೆಂಟ್ ರಸ್ತೆಯಲ್ಲಿ ಸಾಗಿ- ಇಎಸ್ಐ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ತುಮಕೂರು ರಸ್ತೆ ತಲುಪ­ಬಹುದಾಗಿದೆ. ಸುಮನಹಳ್ಳಿ ಜಂಕ್ಷನ್ ಮೇಲ್ಸೇತುವೆ ಕೆಳಭಾಗದ ರಸ್ತೆಯಿಂದ ಎಫ್‌ಟಿಐ ಕಡೆಗೆ ಸಂಚರಿಸುವ ಸರಕು ಸಾಗಣೆ ವಾಹನಗಳು ಸುಮನಹಳ್ಳಿ ಜಂಕ್ಷನ್‌­ನಲ್ಲಿ ಬಲತಿರುವು ಪಡೆದು ಮಾಗಡಿ ಮುಖ್ಯರಸ್ತೆ ಮೂಲಕ  ಕಾಮಾಕ್ಷಿಪಾಳ್ಯ ಸೇರಬಹುದಾಗಿದೆ.

ಸುಮನಹಳ್ಳಿ ಜಂಕ್ಷನ್‌ನಲ್ಲಿ  ಎಡ ತಿರುವು ಪಡೆದು ಮಾಗಡಿ ರಸ್ತೆ,- ಸುಂಕದಕಟ್ಟೆ ರಸ್ತೆ ಮೂಲಕ ನೈಸ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ. ನಾಗರಬಾವಿಯಿಂದ ಸುಮನಹಳ್ಳಿ ಮೇಲ್ಸೇತುವೆ ಮೇಲೆ ಸಂಚರಿಸುವ ವಾಹನಗಳು ಸರ್ವಿಸ್‌ ರಸ್ತೆ ಬಳಸಿ-  ಹೋಗಬಹುದಾಗಿದೆ.

ಶ್ರೀಗಂಧದ ಕಾವಲ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಕೆಂಗೇರಿ ಕಡೆಗೆ ಸಂಚರಿಸಬಹುದಾಗಿದೆ. ಕೆಂಗೇರಿ ಕಡೆ­-ಯಿಂದ ಎಫ್‌ಟಿಐ ಜಂಕ್ಷನ್ ಕಡೆಗೆ ಸಂಚ­ರಿಸುವ ಲಾರಿಗಳು ಶ್ರೀಗಂಧದ ಕಾವಲ್ ಜಂಕ್ಷನ್‌ನಲ್ಲಿ  ಎಡತಿರುವು ಪಡೆದು ಮಾಗಡಿ ರಸ್ತೆ,  ಸುಂಕದಕಟ್ಟೆ,- ನೈಸ್ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಸುಮನಹಳ್ಳಿ ಕಡೆಯಿಂದ ಕಾರ್ಯ­ಕ್ರಮಕ್ಕೆ ಬರುವ ವಾಹನಗಳು  ಕೂಲಿ­ನಗರ ಮೈದಾನದ ಬಳಿ  ಎಡತಿರುವು ಪಡೆದು ಕೂಲಿನಗರ ಮೈದಾನದಲ್ಲಿ ವಾಹನ ನಿಲ್ಲಿಸಬಹುದಾಗಿದೆ.

ಸಿಎಂಟಿಐ ಜಂಕ್ಷನ್ ಕಡೆಯಿಂದ ಎಫ್‌ಟಿಐ ಜಂಕ್ಷನ್ ಕಡೆಗೆ ಸಂಚರಿಸುವ ಲಾರಿಗಳು ತುಮಕೂರು ರಸ್ತೆಯಲ್ಲಿ ಸಾಗಿ ಜಾಲಹಳ್ಳಿ ಕ್ರಾಸ್ ಬಳಿ- ಎಡ­ತಿರುವು ಪಡೆದು ಟಿವಿಎಸ್ ಕ್ರಾಸ್‌ನಲ್ಲಿ -ಬಲತಿರುವು ತೆಗೆದು­ಕೊಂಡು ಪೀಣ್ಯ 2ನೇ ಹಂತದಲ್ಲಿ ಸಾಗಿ ಮಾಗಡಿ ರಸ್ತೆ ತಲುಪಿ ಮುಂದೆ ಸಾಗಬಹು­ದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT