ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಮಹಿಳಾ ಮೀಸಲು ಮರುನಿಗದಿ

ಮೇ 6 ಅಥವಾ 7ರಂದು ವೇಳಾ ಪಟ್ಟಿ ಪ್ರಕಟ
Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಮೀಸಲಾತಿ ಸಂಬಂಧ ಕಾನೂನಿಗೆ ತಿದ್ದುಪಡಿ ಮಾಡಿರುವ ಕಾರಣ ಗ್ರಾಮ ಪಂಚಾಯಿತಿಯ ವಾರ್ಡ್‌ ಮೀಸಲಾತಿಯಲ್ಲೂ ಸ್ವಲ್ಪ ಏರುಪೇರಾಗಲಿದೆ.

‘ಈ ಹಿಂದೆ ಶೇ 50ಕ್ಕಿಂತ ಕಡಿಮೆಯಾಗದಂತೆ ಮಹಿಳಾ ಮೀಸಲಾತಿ ನಿಗದಿಪಡಿಸಲಾಗಿತ್ತು. ಇದನ್ನು ತಿದ್ದುಪಡಿ ಮೂಲಕ ಶೇ 50 ಮೀರಬಾರದು ಎಂದು ಮಾಡಲಾಗಿದೆ. ಇತ್ತೀಚೆಗೆ ರಾಜ್ಯಪಾಲರು ಈ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿರುವ ಕಾರಣ ಗ್ರಾಮ ಪಂಚಾಯಿತಿ ಚುನಾವಣಾ ವೇಳಾ ಪಟ್ಟಿ ಘೋಷಣೆಗೂ ಮುನ್ನವೇ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಮಹಿಳಾ ಮೀಸಲು ಸ್ಥಾನಗಳ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆ ಆಗಲಿದೆ.

ಉದಾಹರಣೆಗೆ 9 ವಾರ್ಡ್‌ ಇರುವ ಗ್ರಾಮ ಪಂಚಾಯಿತಿಯಲ್ಲಿ ಮೊದಲಿನ ಕಾನೂನಿನ ಪ್ರಕಾರ (ಶೇ 50ಕ್ಕಿಂತ ಕಡಿಮೆ ಇಲ್ಲದಂತೆ) ಐದು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಇಡಬೇಕಿತ್ತು. ಹೊಸ ತಿದ್ದುಪಡಿಯಿಂದ (ಶೇ 50 ಮೀರದಂತೆ) ಅದು ನಾಲ್ಕು ಸ್ಥಾನಗಳಿಗೆ ನಿಗದಿಯಾಗಲಿದೆ. ಹೀಗೆ ಹಲವು ಕಡೆ ಮಹಿಳಾ ಮೀಸಲಾತಿ ಕಡಿಮೆ ಆಗಲಿದೆ.

ಈ ಕಾರಣದಿಂದಲೇ ಪರಿಷ್ಕೃತ  ಮೀಸಲಾತಿ ಪಟ್ಟಿಯ ಸಿದ್ಧತೆಯಲ್ಲಿ ಆಯೋಗ ತೊಡಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ತಹಶೀಲ್ದಾರ್‌ಗಳ ಸಭೆ ನಡೆಸುವುದರ ಮೂಲಕ ಮಹಿಳಾ ಮೀಸಲಾತಿಯನ್ನು ಮರು ನಿಗದಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಈ ಕೆಲಸ ಮುಗಿಯಲಿದೆ ಎನ್ನಲಾಗಿದೆ.

ಚುನಾವಣಾ ಘೋಷಣೆ: ಮೇ ಕೊನೆ ಮತ್ತು ಜೂನ್‌ ಮೊದಲ ವಾರದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುವುದು ಖಚಿತ. ಈ ಸಲುವಾಗಿ ಚುನಾವಣಾ ವೇಳಾ ಪಟ್ಟಿಯನ್ನು ಇದೇ 6 ಅಥವಾ 7ರಂದು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT