ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳಿಗೆ ವೇದಾಂತ ದೇಣಿಗೆ ಕಡಿತ

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಭಾರತದ ವಿವಿಧ ರಾಜಕೀಯ ಪಕ್ಷಗಳಿಗೆ ನೀಡುತ್ತಿದ್ದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ವೇದಾಂತ ಗಣಿ ಕಂಪೆನಿ ಕಳೆದ ವರ್ಷ ಅರ್ಧ­­ದಷ್ಟು ಕಡಿತ­ಗೊಳಿ­ಸಿದ ವಿಷಯ ಕಂಪೆನಿಯ ವಾರ್ಷಿಕ ವರದಿಯಿಂದ ಬಹಿರಂಗವಾಗಿದೆ.

2011–12ರಲ್ಲಿ  ಸಮಾರು ₨12 ಕೊಟಿ ದೇಣಿಗೆ ನೀಡಿದ್ದ ಭಾರತ ಮೂಲದ ಅನಿಲ್‌ ಅಗರವಾಲ್ ಅವರ ವೇದಾಂತ ಕಂಪೆನಿ, 2012–13ರಲ್ಲಿ ಆ ಮೊತ್ತ­­ವನ್ನು ₨5 ಕೋಟಿಗೆ ಇಳಿಸಿದೆ. ಕಂಪೆನಿಯ ವಾರ್ಷಿಕ ವರದಿಯಲ್ಲಿ ದೊರೆತ ಅಂಕಿ, ಸಂಖ್ಯೆಗಳು ಈ ವಿಷಯ­ವನ್ನು ಬಹಿರಂಗಪಡಿಸಿದ್ದು,  ಲಾಭ ಪಡೆದ ರಾಜಕೀಯ ಪಕ್ಷಗಳ ಹೆಸರನ್ನು ಗೌಪ್ಯ­ವಾಗಿ ಇಡಲಾಗಿದೆ.

‘ಭಾರತದ ರಾಜಕೀಯ ಬೆಳವಣಿಗೆಗೆ ಪ್ರೋತ್ಸಾ­­ಹಿಸುವುದು ಪ್ರಜಾಪ್ರಭುತದ ಆಶಯ­ಗಳನ್ನು ಬಲಪಡಿಸಿದಂತೆ’ ಎಂದು ಕಂಪೆ­ನಿಯ ಆಡಳಿತ ಮಂಡಳಿ ಅಭಿ­ಪ್ರಾಯಪಟ್ಟಿದೆ.  ವೇದಾಂತ ಅಂಗ ಸಂಸ್ಥೆ ‘ಸೇಸಾ ಗೋವಾ’ 2012–13ರಲ್ಲಿ ಬಿಜೆಪಿಗೆ ₨ 30 ಲಕ್ಷ ಹಾಗೂ ಮತ್ತೊಂದು ಉಪ ಸಂಸ್ಥೆ ಸ್ಟೆರ್‌ಲೈಟ್ ಇಂಡಸ್ಟ್ರೀಜ್‌ ಎಲ್ಲ ರಾಜ­­ಕೀಯ ಪಕ್ಷಗಳಿಗೆ ಒಟ್ಟಾಗಿ ₨ 5ಕೋಟಿ  ದೇಣಿಗೆ ನೀಡಿದೆ.

2011–12ರಲ್ಲಿ ರಾಜಕೀಯ ಪಕ್ಷ­ಗಳಿಗೆ ₨ 4.56 ಕೋಟಿ ದೇಣಿಗೆ ಸಂದಾಯ ಮಾಡಿದ್ದ ಸೇಸಾ ಗೋವಾ  ಕಂಪೆನಿ,  2012–13ರಲ್ಲಿ ಕೇವಲ ₨ 30 ಲಕ್ಷ ನೀಡಿದೆ. ಗಣಿಗಾರಿಕೆ ಚಟು­ವ­ಟಿಕೆ­­ಗಳ ಮೇಲೆ  ನಿಷೇಧ ಹೇರಿದ ಕಾರಣ ಕಂಪೆ­ನಿಯ ದೇಣಿಗೆಯ ಮೊತ್ತ ಕೋಟಿಯಿಂದ ಏಕಾಏಕಿ ಲಕ್ಷಕ್ಕೆ ಕುಸಿದಿದೆ.

ಕಳೆದ ಬಾರಿ ಲೋಕಸಭಾ ಚುನಾ­ವಣೆ ಸೇರಿದಂತೆ 2009–10 ರಿಂದ 2011–12ರ  ಅವಧಿಯಲ್ಲಿ ಈ ಕಂಪೆನಿ ರಾಜಕೀಯ ಪಕ್ಷಗಳಿಗೆ ಒಟ್ಟು ಸುಮಾರು ₨ 28 ಕೋಟಿ ದೇಣಿಗೆ ನೀಡಿದೆ. ಲಂಡನ್‌ ಷೇರು ಪೇಟೆ ಪಟ್ಟಿಯಲ್ಲಿ 2003ರಲ್ಲಿ ಸ್ಥಾನ ಪಡೆದ ನಂತರ ಇಲ್ಲಿ­ಯ­ವರೆಗೆ ಭಾರತದ  ರಾಜಕೀಯ ಪಕ್ಷ­ಗಳಿಗೆ ಒಟ್ಟು ₨48 ಕೋಟಿ ಸಂದಾಯ ಮಾಡಿರುವುದನ್ನು    ಕಂಪೆನಿಯ ವಾರ್ಷಿಕ ವರದಿಯ ಅಂಕಿ, ಅಂಶಗಳು ಸಾಬೀತು­ಪಡಿಸುತ್ತವೆ.

‘ವೇದಾಂತ ಕಂಪೆನಿಯಿಂದ ದೇಣಿಗೆ ಪಡೆ­ಯುವ ಮೂಲಕ ಕಾಂಗ್ರೆಸ್‌ ಮತ್ತು ಬಿಜೆಪಿ ವಿದೇಶಿ ದೇಣಿಗೆ ನಿಯಂತ್ರಣ ಕಾನೂ­ನನ್ನು ಸ್ಪಷ್ಟವಾಗಿ  ಉಲ್ಲಂಘಿ­ಸಿರುವುದು ಮೇಲ್ನೋಟಕ್ಕೆ ಸಾಬೀತಾ­ಗಿದೆ’ ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಹೇಳಿತ್ತು. ಈ ಪ್ರಕರಣ ಕುರಿತಂತೆ ಆರು ತಿಂಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆಯೂ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ಸೂಚಿಸಿ­ರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT