ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಸಿಡಿತ: 81 ಮಂದಿಗೆ ಗಾಯ

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದ ಸಡಗರದ ವೇಳೆ ನಗರದಲ್ಲಿ ಪಟಾಕಿ ಅನಾಹುತದಿಂದ ಗಾಯಗೊಂಡವರ ಸಂಖ್ಯೆ 81ಕ್ಕೇರಿದೆ. ಶುಕ್ರವಾರ ಸುಮಾರು 67 ಮಂದಿ ಪಟಾಕಿ ಸಿಡಿತ­ದಿಂದ ಗಾಯಗೊಂಡು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾದರು.
ಮೂರು ದಿನಗಳಿಂದ ನಾರಾಯಣ ನೇತ್ರಾಲಯದಲ್ಲಿ (31), ಮಿಂಟೊ ಆಸ್ಪತ್ರೆಯಲ್ಲಿ (23), ಶಂಕರ ಆಸ್ಪತ್ರೆ­ಯಲ್ಲಿ (13) ಹಾಗೂ ಬೆಂಗಳೂರು ನೇತ್ರಾಲಯ ಆಸ್ಪತ್ರೆಯಲ್ಲಿ (5 ) ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.  

ವೈಷ್ಣವಿ ಎಂಬ 6 ವರ್ಷದ ಬಾಲ­ಕಿಯ ಕಣ್ಣಿನ ಕಾರ್ನಿಯಾಕ್ಕೆ ಬಲ­ವಾದ ಪೆಟ್ಟು ಬಿದ್ದಿದ್ದು ನೇತ್ರಾಲಯ ಆಸ್ಪತ್ರೆ ದಾಖಲಿಸಲಾಗಿದೆ. ಆಕೆಯ ಕಣ್ಣು ರಪ್ಪೆಗಳು ಕೂಡ ಸುಟ್ಟು ಹೋಗಿವೆ. ವೈಷ್ಣವಿ ಸಂಬಂಧಿ 14ರ ಹರೆಯದ ಕರಣ್‌ ಕೂಡ ಇದೇ ಸಮಸ್ಯೆಗೆ ಒಳಗಾಗಿದ್ದಾನೆ.
ಇವರಿಬ್ಬರು ತಮ್ಮ ನಿವಾಸದ ಬಳಿ ಪಟಾಕಿ ಸಿಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. 6 ವರ್ಷದ ರಾಮ್‌, ಆಶ್ರಯ್‌ ಕೂಡ ಕಣ್ಣಿನ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಕೆಲವರಿಗೆ ತೀವ್ರ ಹಾಗೂ ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾ­ಗಿದೆ’ ಎಂದು ಬೆಂಗಳೂರು ನೇತ್ರಾಲ­ಯದ ವೈದ್ಯ ಡಾ.ವೀರಭದ್ರ ರಾವ್‌ ತಿಳಿಸಿದ್ದಾರೆ. ಪಟಾಕಿ ಅನಾಹುತದಿಂದ ಗಾಯ­ಗೊಂಡ ಹಲವು ಮಕ್ಕಳು ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ದರು. ಬುಧವಾರ ಹಾಗೂ ಗುರು­ವಾರ 14 ಮಂದಿ ಗಾಯಗೊಂಡಿದ್ದರು. ಕೆಲವರು ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT