ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ನಾ ಸರಣಿ ಸ್ಫೋಟ: ಶಂಕಿತರ ಬಂಧನ

Last Updated 21 ಮೇ 2014, 12:02 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಬಿಹಾರದ ರಾಜಧಾನಿ ಪಟ್ನಾದಲ್ಲಿ ಕಳೆದ ವರ್ಷ ನರೇಂದ್ರ ಮೋದಿ ಸಭೆಗೂ ಮುನ್ನ  ಸಂಭವಿಸಿದ್ದ ಸರಣಿ ಸ್ಫೋಟ  ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕೃತ್ಯದ ಹಿಂದಿನ ರೂವಾರಿ ಎನ್ನಲಾದ ಹೈದರ್ ಅಲಿ ಅಲಿಯಾಸ್ ‘ಬ್ಲ್ಯಾಕ್ ಬ್ಯೂಟಿ’ ಸೇರಿದಂತೆ ನಾಲ್ವರನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಅಲಿ ಜೊತೆಗೆ ತೌಫಿಕ್ ಅನ್ಸಾರಿ, ಮೊಜಿಬುಲ್ಲಾಹ್ ಮತ್ತು ನೂಮನ್ ಅನ್ಸಾರಿ ಅವರನ್ನೂ ರಾಂಚಿಯಲ್ಲಿ ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ಬುಧವಾರ ತಿಳಿಸಿವೆ.

ಆರೋಪಿಗಳ ಸುಳಿವು ನೀಡಿದವರಿಗೆ  5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಪ್ರಕಟಿಸಿತ್ತು.

ಪಟ್ನಾ ಸ್ಫೋಟ ಪ್ರಕರಣವನ್ನು ಭೇದಿಸಲು ಯತ್ನಿಸುತ್ತಿದ್ದ ರಾಷ್ಟ್ರೀಯ ತನಿಖಾ ದಳ, ಕಳೆದ ವರ್ಷ ಬಿಹಾರದಲ್ಲಿ ಯಾಸೀನ್ ಭಟ್ಕಳ್ ಅವರನ್ನು ಬಂಧಿಸಿದ ತನ್ನ ಪ್ರಯತ್ನವನ್ನು ಮತ್ತಷ್ಟು ತೀವ್ರಗೊಳಿಸಿತ್ತು.

ಕಳೆದ ವರ್ಷ ಅಕ್ಟೋಬರ್ 27ರಂದು ಮೋದಿ ಅವರ ಸಭೆಗೂ ಮುನ್ನ ಪಟ್ನಾ ರೈಲು ನಿಲ್ದಾಣದ  ಹತ್ತನೇ ಪ್ಲಾಟ್‌ಫಾರ್ಮ್‌ ನಲ್ಲಿ ಸ್ಫೋಟ ಸಂಭವಿಸಿತ್ತು. ಅದಾದ ಬಳಿಕ ಮೋದಿ ಅವರ ಸಭೆ ಆಯೋಜಿಸಲಾಗಿದ್ದ ಗಾಂಧಿ ಮೈದಾನದ ಹೊರಗೂ ಸ್ಫೋಟ ನಡೆದಿತ್ತು.

ಈ ಮೊದಲೇ  ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಈ ನಾಲ್ವರ ಹೆಸರನ್ನು ತಲೆಮರೆಸಿಕೊಂಡ ಆರೋಪಿಗಳು ಎಂದು ಎನ್‌ಐಎ ಹೆಸರಿಸಿತ್ತು. ಪ್ರಕರಣ ಸಂಬಂಧ ಈವರೆಗೂ ಎಂಟು ಜನರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT