ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಒಳಿತಿಗೆ ಜಶೋದಾಬೆನ್ ಧ್ಯಾನ

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೆಹ್ಸಾನಾ, ಗುಜರಾತ್‌ (ಪಿಟಿಐ): ರಾಜ­ಕೀಯ ವಿರೋಧಿಗಳು, ನರೇಂದ್ರ ಮೋದಿ ಅವರನ್ನು ರಾಜಕೀಯವಾಗಿ ಹಣಿಯಲು ಅವರ ಪತ್ನಿಯ ಹೆಸರನ್ನು ಬಳಸಿಕೊಳ್ಳುತ್ತಿ­ದ್ದರೂ, ಹಲವು ದಶಕಗಳ ಹಿಂದೆಯೇ ಗಂಡನಿಂದ ಪ್ರತ್ಯೇ­ಕ­­ವಾ­ಗಿ­ರುವ ಜಶೋದಾಬೆನ್‌ ಮಾತ್ರ ತಮ್ಮ  ಪತಿ ಪ್ರಧಾನಿಯಾ­ಗಬೇಕೆಂದು ಹಗಲು­ರಾತ್ರಿ ಉಪವಾಸ ಮತ್ತು ಪ್ರಾರ್ಥನೆ­ಯಲ್ಲಿ ತೊಡಗಿದ್ದಾರೆ.

62 ವರ್ಷದ ಈ ನಿವೃತ್ತ ಶಿಕ್ಷಕಿಯು ಏಕಾಂತದಲ್ಲಿ­ದ್ದುಕೊಂಡು, ಅನ್ನವನ್ನೂ ಸೇವಿಸದೆ, ಪತಿ ಮೋದಿ ಪ್ರಧಾನಿ ಪಟ್ಟ ಏರುವ ತನಕವೂ ಧ್ಯಾನದಲ್ಲಿ ಮಗ್ನ­ರಾ­ಗಿ­ರುವು­ದಾಗಿ ಜಶೋದಾಬೆನ್‌ ಸಹೋ­ದರ ಕಮಲೇಶ್‌ ತಿಳಿಸಿದ್ದಾರೆ. ತನ್ನ ಪತಿ ಮುಖ್ಯಮಂತ್ರಿ ಹುದ್ದೆ­ಯಿಂದ ಪ್ರಧಾನಿ ಸ್ಥಾನಕ್ಕೆ ಏರಬೇಕೆಂದು ಜಶೋ­ದಾಬೆನ್‌ ಹೃದ­ಯಪೂರ್ವಕ ಪ್ರಾರ್ಥನೆ ಮಾಡುತ್ತಿದ್ದಾರೆ.

ಈ ಆಸೆ ಪೂರೈ­ಕೆಗಾಗಿ ಅವರು ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ‘ಚಾರ್‌ಧಾಮ್‌ ತೀರ್ಥ­­­ಯಾತ್ರೆ’ ಕೈಗೊಂಡಿ­ರು­ವು­ದಾಗಿಯೂ ಸಹೋದರ ಹೇಳಿದ್ದಾರೆ. ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಪುಟ್ಟ ಇಶ್ವಾರ್ವದಾ ಗ್ರಾಮ­ದಲ್ಲಿ ಇಬ್ಬರು ಸಹೋದರ­ರೊಂದಿಗೆ ಜಶೋದಾಬೆನ್‌ ನೆಲೆ­ಸಿದ್ದಾರೆ. ಕುಟುಂಬದ ಪ್ರಕಾರ, ಅವರು ದೈವಭಕ್ತ­ರಾಗಿದ್ದು ಸರಳ ಜೀವನ ಸಾಗಿಸು­ತ್ತಿದ್ದಾರೆ.

ಬೆಳಿಗ್ಗೆ ಎದ್ದು ಸ್ವಲ್ಪ ಹೊತ್ತು ನಡೆ­ದು, ದೇವ­ಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸು­ತ್ತಾರೆ. ನಂತರ ಟಿವಿ ಸುದ್ದಿ ಚಾನೆಲ್‌­ಗಳನ್ನು ನೋಡಿ  ವೃತ್ತಪತ್ರಿಕೆ­ ವರದಿ­ಗಳನ್ನು ಓದಿ, ಎಂದಿನ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ.ಪತಿಯ ಬಗ್ಗೆ ಯಾರಾದರೂ ಕೆಟ್ಟ­ದನ್ನು ಮಾತಾಡಿದರೆ ಜಶೋದಾ­ಬೆನ್‌ ಸಹಿಸುವುದಿಲ್ಲ. ಸೌಮ್ಯ ಸ್ವಭಾವದವ­ರಾದ ಅವರು ಯಾರ ವಿರುದ್ಧವೂ ಧ್ವನಿ ಎತ್ತುವುದಿಲ್ಲ. ಕುಟುಂಬದಲ್ಲಿ ಹಿರಿಯ ಮಗಳಾದ ಅವರು, ಮೋದಿ ಅವರನ್ನು 1968ರಲ್ಲಿ 17 ವರ್ಷದವರಿ­ದ್ದಾಗ ವಿವಾಹವಾಗಿದ್ದರು.

ಗುಜರಾತ್‌ ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿ ಅವರೊಂದಿಗೆ ಕೆಲಕಾಲ ಮಾತ್ರ ಬಾಳಿರುವುದಾಗಿ ಜಶೋದಾಬೆನ್‌ ಹೇಳಿದ್ದಾರೆ.ಮೋದಿ ವಿವಾಹವಾದ ಕೆಲವೇ ಸಮಯದಲ್ಲಿ ಆರ್ಎಸ್‌ಎಸ್‌ ಪ್ರಚಾರಕರಾಗಿ ತೆರ­ಳಿ­ದರು.ಪತಿಯ ಪ್ರೋತ್ಸಾಹ­ದಿಂದ ಪ್ರಾಥ­ಮಿಕ ಶಾಲೆ ಶಿಕ್ಷಕರ ತರಬೇತಿ ಕೋರ್ಸ್‌ ಮಾಡಿ ಸರ್ಕಾರಿ ಶಿಕ್ಷಕಿ­ಯಾಗಿ ಉದ್ಯೋಗ­ವನ್ನೂ ಪಡೆದಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT