ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಗಿರುವ ವಿಮಾನ ಅವಶೇಷಗಳ ತಪಾಸಣೆ

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ಕೌಲಾಲಂಪುರ (ಪಿಟಿಐ): ಹಿಂದೂ ಮಹಾಸಾಗರದಲ್ಲಿ ಪತ್ತೆಯಾಗಿರುವ ವಿಮಾನದ ಅವಶೇಷಗಳು ‘ಬೋಯಿಂಗ್‌ 777’ ವಿಮಾನಕ್ಕೆ ಸೇರಿದ್ದಾಗಿವೆ ಎನ್ನಲಾಗಿದೆ.

ಕಳೆದ ವರ್ಷ ನಾಪತ್ತೆಯಾಗಿರುವ ಮಲೇಷ್ಯಾದ ಎಂಎಚ್‌ 370 ವಿಮಾನ ಹಾಗೂ ಬೋಯಿಂಗ್‌ 777 ವಿಮಾನದ ಸಾಮ್ಯತೆಗಳಿರುವ ಅವಶೇಷಗಳು ರಿಯೋನೊ ದ್ವೀಪದಲ್ಲಿ ಪತ್ತೆಯಾಗಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ ಈ ಅವಶೇಷಗಳು ಬೋಯಿಂಗ್‌ 777 ವಿಮಾನದ್ದಾಗಿವೆ ಎನ್ನಲಾಗಿದೆ. ಇವು ಎಂಎಚ್‌ 370 ವಿಮಾನಕ್ಕೆ ಸೇರಿರುವ ಅವಶೇಷಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಜ್ಞರ ತಂಡಕ್ಕೆ ಸೂಚಿಸಿದ್ದು, ಅವುಗಳನ್ನು ಫ್ರಾನ್ಸ್‌ಗೆ ಕಳುಹಿಸಲಾಗಿದೆ ಎಂದು ಮಲೇಷ್ಯಾದ ಪ್ರಧಾನಿ ನಜೀಬ್‌ ರಜಾಕ್‌ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT