ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ಸಿರಿಯಾ ಅಪಾಯಕಾರಿ ದೇಶ

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌(ಎಎಫ್‌ಪಿ): ವಿಶ್ವದಲ್ಲಿ ಸಿರಿಯಾ ಪತ್ರಕರ್ತರಿಗೆ ಅತಿ ಅಪಾಯಕಾರಿ ಸ್ಥಳ ಎಂದು ಅಮೆರಿಕದ ಮಾನವ ಹಕ್ಕು ಸಂಘಟನೆ ತನ್ನ ವರದಿಯಲ್ಲಿ ತಿಳಿಸಿದೆ.

ಸಿರಿಯಾದಲ್ಲಿ ಪತ್ರಕರ್ತರನ್ನು ಗುರಿಯಾಗಿಟ್ಟುಕೊಂಡು ಹತ್ಯೆ ಮಾಡುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದನ್ನು ನ್ಯೂಯಾರ್ಕ್‌ ಮೂಲದ ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’(ಸಿಪಿಜೆ) ವರದಿ ಮಾಡಿದ್ದು, ಆತಂಕ ವ್ಯಕ್ತಪಡಿಸಿದೆ.

‘ಕಾಳಗ, ಗಡಿಯಾಚೆಗಿನ ದಾಳಿಯಲ್ಲಿ ಅಪಾರ ಪ್ರಾಣಹಾನಿ ಮತ್ತು ಹಿಂದೆಂದೂ ಕಂಡಿ­ರ­ದಷ್ಟು ಅಪಹರಣಗಳು ಸಂಭವಿಸಿದ್ದು ಸಿರಿಯಾ ಈಗಾಗಲೆ ಪತ್ರ­ಕರ್ತರಿಗೆ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ’ ಎಂದು ಸಿಪಿಜೆ ತನ್ನ ವರದಿಯಲ್ಲಿ ಹೇಳಿದೆ.

ಪತ್ರಕರ್ತರ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ಮಾಡುವುದರಲ್ಲಿ ಇರಾಕ್ ಎಲ್ಲ ದೇಶಗಳಿಗಿಂತ ಹಿಂದೆ ಬಿದ್ದಿದೆ ಎಂದು ಈ ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT