ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ವಿರುದ್ಧ ಮಮತಾ ಸಮರ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್‌): ಶಾರದಾ ಚಿಡ್‌ಫಂಡ್‌ ಹಗರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಲವಾದ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಅವರು ಪತ್ರಕರ್ತರ ವಿರುದ್ಧ ಸಮರ ಆರಂಭಿಸಿದ್ದಾರೆ.

ವರದಿಗಾರಿಕೆಗೆ ತೆರಳುವ ಪತ್ರಕರ್ತ­ರನ್ನು ಪೊಲೀಸರು ಬಂಧಿ­ಸುವ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ. ಹೌರಾ ಸಮೀಪದ ನಬನ್ನಾದಲ್ಲಿರುವ ಸಚಿವಾಲ­ಯಗಳ ಕಚೇರಿಯಲ್ಲಿ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸುದ್ದಿಗಾಗಿ ತೆರಳಿದ ಪತ್ರಕರ್ತರಿಗೆ ಪೊಲೀಸ್‌ ಅಧಿಕಾರಿಯೊಬ್ಬರು ಅಲ್ಲಿ ಓಡಾಡಿದರೆ ಬಂಧಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಬಿಐ ಮತ್ತು ಜಾರಿ ನಿರ್ದೇಶ­ನಾಲಯದ ಕಚೇರಿಗಳಿರುವ ಸಿಜಿಒ ಸಂಕೀರ್ಣದೊಳಗೂ ಪತ್ರಕರ್ತ­ರಿಗೆ ಪ್ರವೇಶ ನಿರ್ಬಂಧಿಸ­ಲಾಗಿದೆ ಎಂದು ಹೇಳಲಾಗಿದೆ. ಪತ್ರಕರ್ತರನ್ನು ಬಂಧಿ­ಸುವ ಬೆದರಿಕೆ­ಯನ್ನು ಗೃಹಸಚಿವ ಬಸುದೇವ್‌ ಬ್ಯಾನರ್ಜಿ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT