ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕದ ಭರವಸೆ ಮೂಡಿಸಿದ ಸೋನಿಯಾ

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಆಸ್ತಾನ, ಕಜಕಸ್ತಾನ (ಪಿಟಿಐ): ಸೋನಿಯಾ ಲಾಥರ್ ಅವರು ಇಲ್ಲಿ ನಡೆಯುತ್ತಿರುವ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಸೆಮಿಫೈನಲ್ ಪ್ರವೇಶಿಸಿ ದರು.  ಸೋನಿಯಾ ಅವರು ಟೂರ್ನಿ ಯಲ್ಲಿ ಭಾರತದ ಪರವಾಗಿ ಪದಕ ಜಯಿಸುವ ಭರವಸೆ ಮೂಡಿಸಿರುವ ಏಕೈಕ ಸ್ಪರ್ಧಿಯಾಗಿದ್ದಾರೆ.

ಇನ್ನುಳಿದ ನಾಲ್ವರು ಸ್ಪರ್ಧಿಗಳು ಕ್ವಾರ್ಟರ್‌ಫೈನಲ್ ಹಂತದಲ್ಲಿ  ಸೋತು ಹೊರಬಿದ್ದರು.

ಎಂಟರ ಘಟ್ಟದ 57 ಕೆಜಿ ವಿಭಾಗದ  ಪಂದ್ಯದಲ್ಲಿ ಸೋನಿಯಾ 3–0ಯಿಂದ ಪೊಲೆಂಡ್‌ನ ಅನೆಟಾ ರೈಗಿಲಸ್ಕಾ ವಿರುದ್ಧ ಜಯಿಸಿದರು.  ಏಷ್ಯನ್ ಚಾಂಪಿಯನ್‌ ಷಿಪ್ ಬೆಳ್ಳಿ ಪದಕ ವಿಜೇತೆ ಸೋನಿಯಾ ಅವರ ನಿಖರ ಪಂಚ್‌ಗಳಿಗೆ ಎದುರಾಳಿ  ಶರಣಾದರು.  ನಾಲ್ಕರ ಘಟ್ಟದ ಪಂದ್ಯ ದಲ್ಲಿ ಸೋನಿಯಾ ಅವರು  ಅಲೆಸ್ಸಿಯಾ ಮೆಸಿಯಾನೊ ವಿರುದ್ಧ ಆಡಲಿದ್ದಾರೆ.

48 ಕೆಜಿ ವಿಭಾಗದಲ್ಲಿ  ಮಣಿಪುರದ ಭರವಸೆಯ ಬಾಕ್ಸರ್ ಸರ್ಜುಬಾಲಾ ಅವರನ್ನು 0–3ರಿಂದ ಸ್ಥಳೀಯ ಬಾಕ್ಸರ್ ನಜೈಮ್ ಕೈಜೆಬೆ ಅವರು ಸೋಲಿಸಿದರು.

54 ಕೆಜಿ ವಿಭಾಗದಲ್ಲಿ ನಿಖತ್ ಝರೀನ್ ಅವರು 0–3 ರಿಂದ ಚೀನಾದ ಪಿಯೊಪಿಯೊ ಲಿಯು ವಿರುದ್ಧ ಪರಾಭವಗೊಂಡರು.  ಜೂನಿಯರ್ ವಿಭಾಗದ   ವಿಶ್ವ ಚಾಂಪಿಯನ್ ಆಗಿರುವ ಝರೀನ್ ಅವರು ಚೀನಾದ ಬಾಕ್ಸರ್‌ಗೆ ಸರಿಸಾಟಿಯಾಲಿಲ್ಲ.

ಹೋದ ವರ್ಷದ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸ್ವೀಟಿ 0–3ರಿಂದ ಟರ್ಕಿಯ ಎಲಿಫ್ ಗುನೇರಿ ಅವರ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT