ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕ ಗೆಲ್ಲುವರೆ ಕನ್ನಡಿಗ ವಿಕಾಸ್ ಗೌಡ?‌

ವಿಶ್ವ ಅಥ್ಲೆಟಿಕ್ಸ್: ಪೂವಮ್ಮ ಸ್ಪರ್ಧೆ ಇಂದು
Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಬೀಜಿಂಗ್‌: ಶನಿವಾರ ನಡೆಯಲಿರುವ ಪುರುಷರ ಡಿಸ್ಕಸ್ ಥ್ರೋ ಫೈನಲ್‌ನಲ್ಲಿ ಭಾರತದ ಭರವಸೆಯ ಅಥ್ಲೀಟ್ ವಿಕಾಸಗೌಡ  ಸ್ಪರ್ಧಿಸಲಿದ್ದಾರೆ.

ಕಳೆದ ಎರಡು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಫೈನಲ್ ತಲುಪಿದ್ದ ವಿಕಾಸ್, ಏಳನೇ ಸ್ಥಾನ ಪಡೆದಿದ್ದರು.  ಈ ಬಾರಿಯಾದರೂ ಪದಕದ ಅದೃಷ್ಟ ಅವರಿಗೆ ಒಲಿಯುವುದೇ ಎಂಬ ಕುತೂಹಲ ಗರಿಗೆದರಿದೆ.

ಆದರೆ. ಫೈನಲ್ ಸುತ್ತಿನಲ್ಲಿ ಅವರಿಗೆ ಕಠಿಣ ಪೈಪೋಟಿ ಎದುರಾಗಲಿದೆ. ಪಿಯೊಟ್ರಾ ಮಾಲಾಚೊವಸ್ಕಿ (ಪೋಲೆಂಡ್), ಫೆಡ್ರಿಕ್ ಡಾಕ್ರೆಸ್ (ಜಮೈಕಾ),   ಡೇನಿಯಲ್ ಸ್ಥಾಹಿ (ಸ್ವೀಡನ್), ಅಪೊಸತೊಲೊಸ್ ಪಾರೆಲ್ಲಿಸ್ (ಸೈಪ್ರಸ್), ಜುಲಿಯನ್ ರುಕ್ (ಆಸ್ಟ್ರೇಲಿಯಾ), ಮೌರಿಕೊ ಆರ್ಟೆಗಾ (ಕೊಲಂಬಿಯಾ), ಡೇನಿಯಲ್ ಸ್ಥಾಹಿ (ಸ್ವೀಡನ್) ಸೇರಿದಂತೆ 12 ಸ್ಪರ್ಧಿಗಳನ್ನು ಎದರಿಸಬೇಕಿದೆ.

4X400 ಮೀಟರ್ಸ್ ರಿಲೆಯಲ್ಲಿಯೂ ಭಾರತ ತಂಡವು ತನ್ನ ಅಭಿಯಾನವನ್ನು ಶನಿವಾರ ಆರಂಭಿಸಲಿದೆ. ತಂಡವು ಉತ್ತಮ ಸಮಯವನ್ನು ದಾಖಲಿಸಿದರೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. 16 ತಂಡಗಳು ಭಾಗವಹಿಸಲಿವೆ.

ಪೂವಮ್ಮ ಸ್ಪರ್ಧೆ ಇಂದು: ಕರ್ನಾಟಕದ ಅಥ್ಲೀಟ್ ಎಂ.ಆರ್.  ಪೂವಮ್ಮ  ಇವರು ಭಾರತ ತಂಡವು ಶನಿವಾರ ಮಹಿಳೆಯರ 4X400 ಮೀಟರ್ ರಿಲೆಯ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದೆ.

ತಂಡದಲ್ಲಿ ದೇವಶ್ರೀ ಮಜುಮ ದಾರ್, ಅನು ರಾಘವನ್, ಜಿಶ್ನಾ ಮ್ಯಾಥ್ಯೂ ಮತ್ತು ಟಿಂಟು ಲೂಕ  ಇದ್ದಾರೆ.

ಪುರುಷರ 50 ಕಿ.ಮೀ ನಡಿಗೆಯಲ್ಲಿ ಭಾರತದ ಸಂದೀಪ್ ಕುಮಾರ್ ಮತ್ತು ಮನೀಷ್ ಸಿಂಗ್ ರಾವತ್ ಭಾಗವಹಿಸುವರು.

ಹೋದ ವರ್ಷದ ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಪೂವಮ್ಮ ಉತ್ತಮ ಸಾಮರ್ಥ್ಯ ನೀಡಿದ್ದರು. ಆದ್ದರಿಂದ ಇಲ್ಲಿ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT