ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಬಂ: ಮೊದಲ 2 ಗಂಟೆಯಲ್ಲಿ ಶೇ 20ರಷ್ಟು ಮತ ಚಲಾವಣೆ

5ನೇ ಹಂತದ ಚುನಾವಣೆ; ಕಣದಲ್ಲಿ ಹುರಿಯಾಳುಗಳು
Last Updated 30 ಏಪ್ರಿಲ್ 2016, 6:21 IST
ಅಕ್ಷರ ಗಾತ್ರ

ಕೋಲ್ಕತ್ತ(ಪಿಟಿಐ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖ ಹುರಿಯಾಳುಗಳು ಕಣದಲ್ಲಿರುವ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ಶನಿವಾರ 5ನೇ ಹಂತದ ಮತ ಚಲಾವಣೆ ಆರಂಭವಾಗಿದೆ. ಬೆಳಿಗ್ಗೆ 9ರವರೆಗೆ ಮೊದಲ ಎರಡು ಗಂಟೆಯಲ್ಲಿ ಶೇಕಡಾ 20.10ರಷ್ಟು ಮತ ಚಲಾವಣೆಯಾಗಿವೆ.

ದಕ್ಷಿಣ ಕೋಲ್ಕತ್ತದ 24 ಪರಗಣಗಳ ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಇಂದು ಮತ ಚಲಾವಣೆ ನಡೆಯುತ್ತಿದ್ದು, 43 ಮಹಿಳೆಯರು ಸೇರಿದಂತೆ 349 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

1.2 ಕೋಟಿ ಮತದಾರರಿದ್ದು, 14,500 ಮತಗಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ. ಶುಕ್ರವಾರ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಬಿರು ಬಿಸಿಲು ಮತದಾರರ ಉತ್ಸಾಹಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ.

ಪ.ಬಂ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರತಿಸ್ಪರ್ಥಿ ಕಾಂಗ್ರೆಸ್‌ನ ಕೇಂದ್ರ ಮಾಜಿ ಸಚಿವ ದೀಪ ದಾಸ್‌ಮುನ್ಷಿ ಅವರು ಕಣದಲ್ಲಿರುವ ಭುವನೇಶ್ವರ ವಿಧಾನಸಭೆ ಕ್ಷೇತ್ರ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT